ನವದೆಹಲಿ: ಕೋವಿಡ್-19 ಹಿನ್ನೆಲೆಯಲ್ಲಿ ಏಕಾಏಕಿ ಇಟಲಿಯಿಂದ ಸ್ಥಳಾಂತರಿಸಲಾಗಿರುವ 263 ಭಾರತೀಯರನ್ನು ಭಾನುವಾರ ದೇಶಕ್ಕೆ ಕರೆಸಿಕೊಂಡು ಸುರಕ್ಷತಾ ದೃಷ್ಟಿಯಿಂದ ಅವರನ್ನೆಲ್ಲಾ ಐಟಿಬಿಪಿ ಕ್ವಾರಂಟೈನ್ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಟಲಿಯಿಂದ ವಾಪಸಾದ 263 ಭಾರತೀಯರು ಡೈರೆಕ್ಟ್ ಐಟಿಬಿಪಿ ಕ್ವಾರಂಟೈನ್ಗೆ.. - ITBP quarantine
ಕೊರೊನಾ ವೈರಾಣು ಹರಡುತ್ತಿರುವ ಭೀತಿ ಹಿನ್ನೆಲೆ ಇಟಲಿಯಿಂದ ಸ್ಥಳಾಂತರಿಸಿರುವ 263 ಭಾರತೀಯರನ್ನು ಹೊತ್ತ ವಿಶೇಷ ವಿಮಾನವು ಬೆಳಗ್ಗೆ 10 ಗಂಟೆಗೆ ರಾಷ್ಟ್ರ ರಾಜಧಾನಿಗೆ ತಂದಿಳಿಸಿತು. ಎಲ್ಲಾ 263 ಮಂದಿಯನ್ನ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗಿದೆ. ನಂತರ ಅವರನ್ನೆಲ್ಲ ನೈರುತ್ಯ ದೆಹಲಿಯ ಚಾವ್ಲಾ ಪ್ರದೇಶದ ಕ್ವಾರಂಟೈನ್ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ.
"ರೋಮ್‌ನಿಂದ ಹೊರಟ ವಿಶೇಷ ವಿಮಾನವು ಇಟಲಿಯಿಂದ ಭಾರತಕ್ಕೆ ಹಿಂದಿರುಗಿದ 263 ಪ್ರಯಾಣಿಕರನ್ನು ದೆಹಲಿಯ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 10 ಗಂಟೆಗೆ ತಂದಿಳಿಸಿತು. ನಮ್ಮ ಜನರನ್ನು ಕರೆತರಲು ಏರ್ ಇಂಡಿಯಾ ವಿಮಾನ ಶನಿವಾರ ದೆಹಲಿಯಿಂದ ಹೊರಟಿತ್ತು" ಎಂದು ಏರ್ ಇಂಡಿಯಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಟರ್ಮ್ಯಾಕ್ನಲ್ಲಿ ಎಲ್ಲಾ 263 ಜನರ ಥರ್ಮಲ್ ಸ್ಕ್ರೀನಿಂಗ್ ನಡೆಸಿದ ನಂತರ ನೈರುತ್ಯ ದೆಹಲಿಯ ಚಾವ್ಲಾ ಪ್ರದೇಶದಲ್ಲಿರುವ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ಯಲಾಗುತ್ತಿದೆ" ಎಂದು ಐಟಿಬಿಪಿ ವಕ್ತಾರರು ತಿಳಿಸಿದ್ದಾರೆ. ಮಾರ್ಚ್ 15ರಿಂದ ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ ಕ್ಯಾರೆಂಟೈನ್‌ನಲ್ಲಿ 215 ಭಾರತೀಯರನ್ನಿರಿಸಲಾಗಿದೆ. ಇವರನ್ನೂ ಕೂಡ ರೋಮ್‌ನಿಂದ ವಿಶೇಷ ಏರ್ ಇಂಡಿಯಾ ವಿಮಾನದಿಂದ ಕರೆತರಲಾಗಿದೆ.