ವಾಶಿಮ್ (ಮಹಾರಾಷ್ಟ್ರ):ಮಹಾರಾಷ್ಟ್ರದಲ್ಲಿ ಅಮಾನವೀಯ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದ್ದು, 24 ವರ್ಷದ ಯುವತಿಯೋರ್ವಳ ಮೇಲೆ ಬಸ್ನಲ್ಲೇ ಅತ್ಯಾಚಾರದಂತಹ ಹೇಯ ಕೃತ್ಯ ನಡೆದಿದೆ.
ಚಲಿಸುತ್ತಿದ್ದ ಖಾಸಗಿ ಬಸ್ನಲ್ಲೇ 24 ವರ್ಷದ ಯುವತಿ ಮೇಲೆ ರೇಪ್! - ಖಾಸಗಿ ಬಸ್ನಲ್ಲಿ ಯುವತಿ ಮೇಲೆ ರೇಪ್
ಚಲಿಸುತ್ತಿದ್ದ ಖಾಸಗಿ ಬಸ್ವೊಂದರಲ್ಲಿ 24 ವರ್ಷದ ಯುವತಿ ಮೇಲೆ ಅತ್ಯಾಚಾರ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಖಾಸಗಿ ಬಸ್ವೊಂದು ವಾಶಿಮ್ನಿಂದ ಗೊಂಡಿಯಾಗೆ ಪ್ರಯಾಣ ಬೆಳೆಸಿತ್ತು. ಬಸ್ನಲ್ಲಿದ್ದ 24 ವರ್ಷದ ಯುವತಿ ಮೇಲೆ ಮಾಲೆಗಾಂವ್ ಪ್ರದೇಶದ ಬಳಿ ಅತ್ಯಾಚಾರ ನಡೆಸಲಾಗಿದ್ದು, ಜನವರಿ 6ರಂದು ಈ ಅಮಾನವೀಯ ಕೃತ್ಯ ನಡೆದಿದೆ. ಯುವತಿ ಪುಣೆಗೆ ತಲುಪುತ್ತಿದ್ದಂತೆ ತನ್ನ ಮೇಲೆ ನಡೆದಿರುವ ಅತ್ಯಾಚಾರದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಟ್ರಾವೆಲ್ ಕಂಪನಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ವಾಶಿಮ್ನಿಂದ ಗೊಂಡಿಯಾಗೆ ಪ್ರಯಾಣಿಸಿ ತದನಂತರ ಯುವತಿ ಪುಣೆಗೆ ತೆರಳಬೇಕಾಗಿತ್ತು. ಆದರೆ ಆಕೆಯ ಮೇಲೆ ಅತ್ಯಾಚಾರ ನಡೆಸಲಾಗಿದೆ. ಇದೀಗ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.