ಕರ್ನಾಟಕ

karnataka

ETV Bharat / bharat

ನಟ ಸುಶಾಂತ್​ ಸಿಂಗ್​ ಸಾವಿನಿಂದ ನೊಂದು ಮತ್ತೋರ್ವ ಯುವಕ ಆತ್ಮಹತ್ಯೆ! - ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡ ಸುದ್ದಿಯಿಂದ ಆಘಾತಗೊಂಡು ಇದೀಗ ಮತ್ತೋರ್ವ ಯುವಕ ಸಾವಿಗೆ ಶರಣಾಗಿರುವ ಘಟನೆ ನಡೆದಿದೆ.

20 year old man committed suicide
20 year old man committed suicide

By

Published : Jun 24, 2020, 8:30 PM IST

ಕೊಯಿಮತ್ತೂರು(ತಮಿಳುನಾಡು): ಬಾಲಿವುಡ್​ ನಟ ಶುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಮಾಡಿಕೊಂಡು ಎರಡು ವಾರ ಕಳೆದಿದೆ. ಅವರ ಸಾವಿನಿಂದ ನೊಂದಿರುವ ಅನೇಕರು ಈಗಾಗಲೇ ಸಾವಿಗೆ ಶರಣಾಗಿದ್ದು, ಇಂದು ಕೂಡ ಓರ್ವ ಯುವಕ ತನ್ನ ಪ್ರಾಣ ಕಳೆದುಕೊಂಡಿದ್ದಾನೆ.

ಸುಶಾಂತ್‌ ಸಾವಿನಿಂದ ಮನನೊಂದು ಬಿಹಾರದಲ್ಲಿ ಇಬ್ಬರು ಅಭಿಮಾನಿಗಳ ಆತ್ಮಹತ್ಯೆ

ನೆಚ್ಚಿನ ನಟನ ಸಾವಿನಿಂದ ನೊಂದಿರುವ ರಾಜಸ್ಥಾನದ 20 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಕೊಯಿಮತ್ತೂರು ಜಿಲ್ಲೆಯಲ್ಲಿ ನಡೆದಿದೆ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಆತನ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ ಎಂದು ತಿಳಿಸಿರುವ ಪೊಲೀಸರು ಸ್ಥಳದಲ್ಲಿ ಡೆತ್​ನೋಟ್​ ಲಭ್ಯವಾಗಿದ್ದು, ಅದರಲ್ಲಿ ಸಾವಿನ ಕಾರಣ ತಿಳಿದು ಬಂದಿದೆ. ಇನ್ನು ಪಬ್​ಜಿ ಗೇಮ್​ಗೆ ದಾಸನಾಗಿದ್ದ ಈ ವ್ಯಕ್ತಿ ಕಳೆದ ಐದು ದಿನಗಳಿಂದ ಸಂಪೂರ್ಣವಾಗಿ ಖಿನ್ನತೆಗೊಳಗಾಗಿದ್ದನು ಎನ್ನಲಾಗಿದೆ.

ABOUT THE AUTHOR

...view details