ಕರ್ನಾಟಕ

karnataka

ETV Bharat / bharat

ಕುದುರೆ ವ್ಯಾಪಾರದ ಭೀತಿ..!  52 ಶಾಸಕರು ಒಟ್ಟಾಗಿದ್ದೇವೆ​ ಎಂದ ಎನ್​​ಸಿಪಿ - ಮಹಾರಾಷ್ಟ್ರ ಸರ್ಕಾರದ ಸುದ್ದಿ

ನಮ್ಮ ಪಕ್ಷದ 52 ಶಾಸಕ ಸದ್ಯ ನಮ್ಮೊಂದಿಗಿದ್ದಾರೆ, ಒಬ್ಬರು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಎನ್​ಸಿಪಿ ನಾಯಕ ನವಾಬ್ ಮಲಿಕ್​ ಹೇಳಿಕೆ ನೀಡಿದ್ದಾರೆ.

ಎನ್​​ಸಿಪಿ

By

Published : Nov 25, 2019, 9:22 AM IST

ಮುಂಬೈ:ಕರ್ನಾಟಕದಲ್ಲಿ ನಡೆದಿದ್ದ ರೆಸಾರ್ಟ್​ ರಾಜಕಾರಣ ಸದ್ಯ ಮಹಾರಾಷ್ಟ್ರದಲ್ಲೂ ನಡೆಯುತ್ತಿದ್ದು, ಹಲವು ನಾಟಕೀಯ ಬೆಳವಣಿಗೆಳಿಗೆ ಸಾಕ್ಷಿಯಾಗುತ್ತಿದೆ.

ಭಾನುವಾರ ನಾಪತ್ತೆಯಾಗಿದ್ದ ನಾಲ್ವರು ಎನ್​​ಸಿಪಿ ಶಾಸಕರ ಪೈಕಿ ಇಬ್ಬರು ಭಾನುವಾರ ತಡರಾತ್ರಿ ಮುಂಬೈನ ಹಯಾತ್ ಹೋಟೆಲ್ ಸೇರಿದ್ದಾರೆ.

ಎನ್​​ಸಿಪಿ ಶಾಸಕರಾದ ದೌಲತ್ ದರೋದ ಹಾಗೂ ಅನಿಲ್​ ಪಾಟೀಲ್ ಸರ್ಕಾರ ರಚನೆ ವೇಳೆ ಗುರುಗ್ರಾಮದ ಹೋಟೆಲ್​​ನಲ್ಲಿ ತಂಗಿದ್ದರು. ಸದ್ಯ ಎನ್​ಸಿಪಿ ಯುವ ಘಟಕದ ಅಧ್ಯಕ್ಷ ಧೀರಜ್​ ಶರ್ಮಾ ಹಾಗೂ ನ್ಯಾಷನಾಲಿಸ್ಟ್​​ ಸ್ಟೂಡೆಂಟ್ ಕಾಂಗ್ರೆಸ್​ ಅಧ್ಯಕ್ಷ ಸೋನಿಯಾ ದೂಹನ್​​ ಜೊತೆಗೆ ಹಯಾತ್ ಹೋಟೆಲ್​ಗೆ ಬಂದಿದ್ದಾರೆ.

ಎನ್​​ಸಿಪಿ ಶಾಸಕ ನಿತಿನ್ ಪವಾರ್ ಭಾನುವಾರವೇ ತಮ್ಮ ಪಕ್ಷದ ಉಳಿದ ಶಾಸಕರನ್ನು ಕೂಡಿಕೊಂಡಿದ್ದಾರೆ. ಇನ್ನೋರ್ವ ಶಾಸಕ ನರ್ಹರಿ ಝಿರ್ವಾಲ್​​ ಸದ್ಯ ದೆಹಲಿಯಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಎನ್​​ಸಿಪಿ ಮೂಲಗಳು ಹೇಳಿವೆ.

ನಮ್ಮ ಪಕ್ಷದ 52 ಶಾಸಕ ಸದ್ಯ ನಮ್ಮೊಂದಿಗಿದ್ದಾರೆ, ಒಬ್ಬರು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಎನ್​ಸಿಪಿ ನಾಯಕ ನವಾಬ್ ಮಲಿಕ್​ ಹೇಳಿಕೆ ನೀಡಿದ್ದಾರೆ.

ಶಾಸಕರ ಕುದುರೆ ವ್ಯಾಪಾರದ ಭೀತಿಯಲ್ಲಿ ಭಾನುವಾರ ಎನ್​​ಸಿಪಿ ತನ್ನೆಲ್ಲಾ ಶಾಸಕರನ್ನು ಮುಂಬೈನ ಹಯಾತ್ ಹೋಟೆಲ್​​ಗೆ ಶಿಫ್ಟ್​ ಮಾಡಿಸಿತ್ತು.

ABOUT THE AUTHOR

...view details