ಕರ್ನಾಟಕ

karnataka

ETV Bharat / bharat

ಸಾವು ಗೆದ್ದ 18 ತಿಂಗಳ ಬಾಲಕ: ಬೋರ್​ವೆಲ್​​ನಲ್ಲಿ ಬಿದ್ದ ಮಗುವಿನ ರಕ್ಷಣೆ ಮಾಡಿದ ಎನ್​ಡಿಆರ್​​ಎಫ್​ - ಮಗುವಿನ ರಕ್ಷಣೆ

ಬೋರ್​ವೆಲ್​​ನಲ್ಲಿ ಬಿದ್ದ 16 ತಿಂಗಳ ಮಗುವಿನ ರಕ್ಷಣೆ ಮಾಡುವಲ್ಲಿ ಎನ್​ಡಿಆರ್​ಎಫ್​ ಪಡೆ ಯಶಸ್ವಿಯಾಗಿದೆ. ಇದೀಗ ಮಗುವನ್ನ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರಕ್ಷಣಾ ಕಾರ್ಯಾಚರಣೆ ಯಶಸ್ವಿ

By

Published : Mar 22, 2019, 6:16 PM IST

ಹಿಸ್ಸಾರ್​: ಆಟವಾಡುತ್ತಿದ್ದ ವೇಳೆ 70 ಅಡಿ ಆಳದ ಬೋರ್​ವೆಲ್​​ನಲ್ಲಿ ಬಿದ್ದಿದ್ದ 18 ತಿಂಗಳ ಮಗುವಿನ ರಕ್ಷಣೆ ಮಾಡುವಲ್ಲಿ ಎನ್​ಡಿಆರ್​ಎಫ್​ ಪಡೆ ಯಶಸ್ವಿಯಾಗಿದ್ದು, ಇದೀಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರಕ್ಷಣಾ ಕಾರ್ಯಾಚರಣೆ ಯಶಸ್ವಿ

ನಿನ್ನೆ ಸಂಜೆ 5.15ರ ವೇಳೆ ಈ ಘಟನೆ ನಡೆದಿತ್ತು. ಹರಿಯಾಣದ ಹಿಸ್ಸಾರ್​​ನಲ್ಲಿರುವ ಬಾಲ್​ಸಮದ್​ ಗ್ರಾಮದಲ್ಲಿ ಆಟವಾಡುತ್ತಿದ್ದಾಗ ಮಗು ಕಾಲು ಜಾರಿ ತೆರೆದ ಬೋರ್​ವೆಲ್​​ನೊಳಗೆ ಬಿದ್ದಿತ್ತು. ಇದಾದ ಬಳಿಕ ರಾತ್ರಿ 8.45ರ ನಂತರ ಸೇನೆ ಹಾಗೂ ಎನ್​ಡಿಆರ್​ಎಫ್​ ರಕ್ಷಣಾ ಕಾರ್ಯಚರಣೆ ಆರಂಭ ಮಾಡಿತ್ತು. ಇದೀಗ ಸತತ 48 ಗಂಟೆಗಳ ರಕ್ಷಣಾ ಕಾರ್ಯ ನಡೆಸಿ ಮಗುವನ್ನ ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬೋರ್​ವೆಲ್​ನಲ್ಲಿ ಬಿದ್ದ ಮಗುವಿನ ಪ್ರತಿ ಕ್ಷಣದ ಮಾಹಿತಿ ಪಡೆದುಕೊಳ್ಳಲು ಸಿಸಿಟಿವಿ ಒಳಬಿಡಲಾಗಿತ್ತು. ಜತೆಗೆ ನಿನ್ನೆ ರಾತ್ರಿ ಮಗುವಿಗೆ ನಾಲ್ಕು ಪ್ಯಾಕೆಟ್​ ಬಿಸ್ಕಟ್​ ಹಾಗೂ ಜೂಸ್​ ಸಹ ನೀಡಲಾಗಿತ್ತು ಎಂದು ಕಾರ್ಯಚರಣೆ ನಡೆಸಿರುವ ಸಿಬ್ಬಂದಿ ತಿಳಿಸಿದ್ದಾರೆ.

ABOUT THE AUTHOR

...view details