ಕರ್ನಾಟಕ

karnataka

By

Published : May 10, 2020, 11:57 AM IST

ETV Bharat / bharat

ವಂದೇ ಭಾರತ್ ಮಿಷನ್.. ಕುವೈತ್​ನಿಂದ ಹೈದರಾಬಾದ್​ಗೆ ಬಂದಿಳಿದ 163 ಭಾರತೀಯರು..

ಕೊರೊನಾ ವೈರಸ್​ ಭೀತಿಯಿಂದಾಗಿ, ಇಮಿಗ್ರೇಷನ್​ಗೂ ಮುಂಚಿತವಾಗಿ ಪ್ರಯಾಣಿಕರನ್ನು ಥರ್ಮಲ್ ಕ್ಯಾಮೆರಾಗಳಿಂದ ಪರೀಕ್ಷೆ ಮಾಡಲಾಗಿದೆ. ಪ್ರಯಾಣಿಕರು ಮತ್ತು ನಿಲ್ದಾಣದ ಅಧಿಕಾರಿಗಳ ನಡುವಣ ವೈಯಕ್ತಿಕ ಸಂಪರ್ಕ ತಪ್ಪಿಸಲು ಪ್ರತಿ ಇಮಿಗ್ರೇಷನ್​ ಕೌಂಟರ್‌ನಲ್ಲಿ ಗಾಜಿನ ತಡೆ ನಿರ್ಮಿಸಿ ನೇರ ಸಂಪರ್ಕ ತಪ್ಪಿಸಲಾಗಿತ್ತು.

Air India
ಏರ್ ಇಂಡಿಯಾ

ಹೈದರಾಬಾದ್ :ವಿದೇಶದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ತವರಿಗೆ ಕರೆತರುವ ಸರ್ಕಾರದ 'ವಂದೇ ಭಾರತ್ ಮಿಷನ್‌'ನ ಅಂಗವಾಗಿ 163 ಭಾರತೀಯರನ್ನು ಹೊತ್ತ ಏರ್ ಇಂಡಿಯಾ ವಿಮಾನ ಶನಿವಾರ ರಾತ್ರಿ ಕುವೈತ್‌ನಿಂದ ಹೈದರಾಬಾದ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

ರಾತ್ರಿ 10 ಗಂಟೆಗೆ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್​ ಆಗಿದೆ. ವಿದೇಶದಿಂದ ಪ್ರಯಾಣಿಕರು ಆಗಮಿಸುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿತ್ತು. ಸ್ಯಾನಿಟೈಸಿಂಗ್​ ಮೂಲಕ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಗಿತ್ತು. ಪ್ರಯಾಣಿಕರು ವಿಮಾನವೇರುವ ಮುನ್ನವೇ ಸಂಪೂರ್ಣ ತಪಾಸಣೆ ನಡೆಸಿ, ಪ್ರಯಾಣಿಕರು ಸಾಮಾಜಿಕ ಅಂತರ ಅನುಸರಿಸಲು ಸೂಚನೆ ನೀಡಲಾಗಿತ್ತು.

ಕೊರೊನಾ ವೈರಸ್​ ಭೀತಿಯಿಂದಾಗಿ, ಇಮಿಗ್ರೇಷನ್​ಗೂ ಮುಂಚಿತವಾಗಿ ಪ್ರಯಾಣಿಕರನ್ನು ಥರ್ಮಲ್ ಕ್ಯಾಮೆರಾಗಳಿಂದ ಪರೀಕ್ಷೆ ಮಾಡಲಾಗಿದೆ. ಪ್ರಯಾಣಿಕರು ಮತ್ತು ನಿಲ್ದಾಣದ ಅಧಿಕಾರಿಗಳ ನಡುವಣ ವೈಯಕ್ತಿಕ ಸಂಪರ್ಕ ತಪ್ಪಿಸಲು ಪ್ರತಿ ಇಮಿಗ್ರೇಷನ್​ ಕೌಂಟರ್‌ನಲ್ಲಿ ಗಾಜಿನ ತಡೆ ನಿರ್ಮಿಸಿ ನೇರ ಸಂಪರ್ಕ ತಪ್ಪಿಸಲಾಗಿತ್ತು.

ಮುಂಜಾಗ್ರತಾ ಕ್ರಮವಾಗಿ ವಿದೇಶದಿಂದ ಆಗಮಿಸಿದ ಎಲ್ಲಾ ಪ್ರಯಾಣಿಕರಿಗೂ ನಗರದಲ್ಲಿ ಈಗಾಗಲೇ ಗೊತ್ತುಪಡಿಸಿದ ಸ್ಥಳಗಳಲ್ಲಿ ಕಡ್ಡಾಯವಾಗಿ ಕ್ವಾರಂಟೈನ್​ ಮಾಡಲಾಗುತ್ತಿದೆ.

ABOUT THE AUTHOR

...view details