ಕಾಸರಗೋಡು: ಕೇರಳದ ನೀಲೇಶ್ವರಂನಲ್ಲಿ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಂದೆ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ ಪ್ರಕರಣ : ತಂದೆ ಸೇರಿ ನಾಲ್ವರ ಬಂಧನ - ಕೇರಳದ ನೀಲೇಶ್ವರಂ
ಪಾಪಿ ತಂದೆಯೊಬ್ಬ ತನ್ನ ಮಗಳನ್ನೇ ಅತ್ಯಾಚಾರ ಮಾಡಿ ಗರ್ಭವತಿ ಆಗುವ ಹಾಗೆ ಮಾಡಿದ್ದಾನೆ. ಈ ಘಟನೆ ಕೇರಳದ ನೀಲೇಶ್ವರಂನಲ್ಲಿ ನಡೆದಿದೆ. ದೂರಿನ ಹಿನ್ನೆಲೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿ ಗರ್ಭಿಣಿಯಾದ ಹಿನ್ನೆಲೆ ಈ ಘಟನೆ ಬೆಳಕಿಗೆ ಬಂದಿದೆ. ಹುಡುಗಿಯ ತಂದೆ ಕರ್ನಾಟಕದ ಸುಳ್ಯ ಮೂಲದವರು. ಆತನ ಹೆಸರಿನಲ್ಲಿ ಇನ್ನೂ ನಾಲ್ಕು ಕಿರುಕುಳ ಪ್ರಕರಣಗಳಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇತರ ಮೂವರ ಜತೆಗೂಡಿ ಬಾಲಕಿ ತಂದೆ ಇಂತಹ ಕೃತ್ಯ ಎಸೆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದು, ಆ ಮೂವರನ್ನ ಕೂಡಾ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಹುಡುಗಿಯ ಹೇಳಿಕೆ ಆಧರಿಸಿ, ಆಕೆಯ ತಾಯಿ, ಗರ್ಭಪಾತ ಮಾಡಿಸಿದ ವೈದ್ಯರು ಮತ್ತು ಇತರರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಬಾಲಕಿಯ ಚಿಕ್ಕಪ್ಪರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.