ಕಡಲೂರು (ತಮಿಳುನಾಡು):ಪೋಷಕರು ಸ್ಮಾರ್ಟ್‌ಫೋನ್ ಕೊಡಿಸಲಿಲ್ಲವೆಂದು ಬೇಸರಗೊಂಡು 14 ವರ್ಷದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಸಿರುತೊಂಡಮದೇವಿ ಗ್ರಾಮದ ತನ್ನ ನಿವಾಸದಲ್ಲಿ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 10ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದ ವಿದ್ಯಾರ್ಥಿ ಆನ್‌ಲೈನ್ ಕ್ಲಾಸ್ನಲ್ಲಿ ಭಾಗಿಯಾಗುವ ಉದ್ದೇಶದಿಂದ ಸ್ಮಾರ್ಟ್‌ಫೋನ್ ಕೊಡಿಸುವಂತೆ ಪೋಷಕರನ್ನು ಒತ್ತಾಯಿಸುತ್ತಿದ್ದ. ಪೋಷಕರು ಆತನ ಮನವಿ ತಿರಸ್ಕರಿಸಿದ್ದರಿಂದ ಈ ರೀತಿಯ ನಿರ್ಧಾರ ಕೈಗೊಂಡಿದ್ದಾನೆ ಎಂದು ತಿಳಿದು ಬಂದಿದೆ.