ಚೆನ್ನೈ: ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ 6 ಜನ ಪ್ರಯಾಣಿಕರಿಂದ ಸುಮಾರು 1.6 ಕೆಜಿ ಚಿನ್ನವನ್ನು ಚೆನ್ನೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೀಮಾ ಸುಂಖ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಪೆನ್ ರಿಫಿಲ್ ಹಾಗೂ ಶೂ ಒಳಗಡೆ ಅಡಗಿಸಿಟ್ಟು ಸಾಗಿಸುತ್ತಿದ್ದ 1.6 ಕೆಜಿ ಚಿನ್ನ ವಶ! - ಅಕ್ರಮವಾಗಿ ಚಿನ್ನ ಸಾಗಾಟ ಸುದ್ದಿ
ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1.6 ಕೆಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
1.6 ಕೆಜಿ ಚಿನ್ನ ವಶ
ಪ್ರಕರಣದಲ್ಲಿ ಭಾಗಿಯಾಗಿರುವ ಆರು ಮಂದಿಯನ್ನು ತೀವ್ರ ತನಿಖೆಗೊಳಪಡಿಸಿರುವ ಅಧಿಕಾರಿಗಳು ಸುಮಾರು 59 ಲಕ್ಷ ರೂ. ಮೌಲ್ಯದ 1.6 ಕೆಜಿ ಚಿನ್ನವನ್ನು ಜಪ್ತಿ ಮಾಡಿದ್ದಾರೆ.
ಓರ್ವ ಪ್ರಯಾಣಿಕ 231 ಗ್ರಾಂ ಚಿನ್ನವನ್ನು ತಾನು ಹಾಕಿಕೊಂಡಿದ್ದ ಶೂ ಒಳಗಡೆ ಅಡಗಿಸಿಟ್ಟು ತಂದಿದ್ದರೆ, ಇನ್ನೋರ್ವ ಬಾಲ್ ಪಾಯಿಂಟ್ ಪೆನ್ನ ರಿಫಿಲ್ (ದ್ರವ) ರೂಪದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ವಿಚಾರ ಗೊತ್ತಾಗಿದೆ.