ಕರ್ನಾಟಕ

karnataka

ETV Bharat / bharat

ಕೋವಾಕ್ಸಿನ್​ ಲಸಿಕೆ ತಯಾರಿ ಹಿಂದೆ ವಿಜ್ಞಾನಿಗಳ 9 ತಿಂಗಳ ಶ್ರಮವಿದೆ: ಸುಚಿತ್ರಾ ಎಲ್ಲ

ಕೊರೊನಾ ವೈರಸ್​ ವಿರುದ್ಧ ಹೋರಾಡಲು ಭಾರತ್​ ಬಯೋಟೆಕ್​ನಿಂದ ತಯಾರಾಗುತ್ತಿರುವ 'ಕೋವಾಕ್ಸಿನ್'​ ಲಸಿಕೆಯ ಬಗ್ಗೆ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಚಿತ್ರಾ ಎಲ್ಲ ಮಾಹಿತಿ ಹಂಚಿಕೊಂಡಿದ್ದಾರೆ.

Suchitra Ella
Suchitra Ella

By

Published : Jan 1, 2021, 5:25 PM IST

ಹೈದರಾಬಾದ್​:ಭಾರತ್ ಬಯೋಟೆಕ್-ಐಸಿಎಂಆರ್ ಜಂಟಿಯಾಗಿ ಸಿದ್ಧಪಡಿಸುತ್ತಿರುವ ಸ್ವದೇಶಿ ಕೊರೊನಾ ಲಸಿಕೆ ಕೋವಾಕ್ಸಿನ್​ ತಯಾರಿಕೆಯಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಚಿತ್ರಾ ಎಲ್ಲ ತಿಳಿಸಿದರು.

ಸುಚಿತ್ರಾ ಎಲ್ಲ ಮಾತು

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ವಿಜ್ಞಾನಿಗಳು ಸತತ 9 ತಿಂಗಳ ಕಾಲ ಶ್ರಮವಹಿಸಿ ಈ ಲಸಿಕೆ ತಯಾರಿಸಿದ್ದಾರೆ. ಕೋವಾಕ್ಸಿನ್​ ಲಸಿಕೆ ವಿತರಣೆಗೆ ಸರ್ಕಾರದಿಂದ ಅನುಮತಿ ದೊರೆತರೆ, ಯಾವ ಪ್ರಮಾಣದಲ್ಲಿ ನೀಡಬೇಕು ಎಂಬ ಮಾಹಿತಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಭಾರತ ವಿಶ್ವದ ಪ್ರಮುಖ ಲಸಿಕೆ ಉತ್ಪಾದಕ ದೇಶ ಎಂದು ಅವರು ಹೇಳಿದ್ದಾರೆ.

13 ಸಾವಿರ ಸ್ವಯಂ ಸೇವಕರ ಮೇಲೆ ಲಸಿಕೆ ಪ್ರಯೋಗ ಮಾಡಲು ಭಾರತ್​ ಬಯೋಟೆಕ್​ ಮುಂದಾಗಿದೆ.

ABOUT THE AUTHOR

...view details