ನಾಗ್ಪುರ (ಮಹಾರಾಷ್ಟ್ರ):ಕೊರೊನಾ 2ನೇ ಅಲೆಯಲ್ಲಿ ಮಕ್ಕಳ ಹೆಚ್ಚಾಗಿ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂಬ ವರದಿಯ ಬೆನ್ನಲ್ಲೇ 12ರಂದ 18 ವರ್ಷದೊಳಗಿನ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗ ಆರಂಭಗೊಂಡಿದೆ.
ಹೈದರಾಬಾದ್ ಮೂಲಕ ಲಸಿಕೆ ತಯಾರಿಕಾ ಕಂಪನಿ ಭಾರತ್ ಬಯೋಟೆಕ್ ಈ ಲಸಿಕೆ ವಿತರಣೆಗೆ ಮುಂದಾಗಿದ್ದು, ಈಗಾಗಲೇ ಭಾರತ್ ಡ್ರಗ್ ಕಂಟ್ರೋಲರ್ ಜನರಲ್ ಅನುಮತಿ ಪಡೆದಿದೆ. ಹೀಗಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಕೋವ್ಯಾಕ್ಸಿನ್ ಲಸಿಕೆ ಕ್ಲಿನಿಕಲ್ ಪ್ರಯೋಗ ಆರಂಭಿಸಿದೆ.
ಮೂಲಗಳ ಪ್ರಕಾರ, 12 ರಿಂದ 18 ವರ್ಷದೊಳಗಿನ ಮಕ್ಕಳಿಂದ ರಕ್ತದ ಮಾದರಿಯನ್ನ ಸಂಗ್ರಹಿಸಲಾಗಿದೆ. 50 ಸ್ವಯಂಸೇವಕರ ತಪಾಸಣೆ ನಡೆಸಲಾಗಿದ್ದು, ರಕ್ತ ಮಾದರಿಯ ವರದಿ ಬಂದ ನಂತರ ಕ್ಲಿನಿಕಲ್ ಪರೀಕ್ಷೆಗಳು ಪ್ರಾರಂಭವಾಗುತ್ತವೆ. ಲಸಿಕೆ ನೀಡುವ ಮೊದಲು ಎಲ್ಲಾ ಮಕ್ಕಳಿಗೂ ಜಿಲ್ಲಾಡಳಿತ ಸಲಹೆ, ಮಾರ್ಗದರ್ಶನ ಮಾಡಲಿದೆ, ಲಸಿಕೆ ಪಡೆದ ಬಳಿಕ ಆ್ಯಂಟಿಬಾಡಿ ಪರೀಕ್ಷೆಗೂ ಒಳಗಾಗುತ್ತಾರೆ ಎಂದು ತಿಳಿದುಬಂದಿದೆ.
ವ್ಯಾಕ್ಸಿನೇಷನ್ ಪ್ರಯೋಗ ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲು 12 ರಿಂದ 18 ವರ್ಷದ ಮಕ್ಕಳಿಗೆ ನೀಡಲಾಗುತ್ತದೆ. ಬಳಿಕ 6-12 ವರ್ಷದವರಿಗೆ ಹಾಗೂ ಕೊನೆಯಲ್ಲಿ 2-6 ವರ್ಷದ ಮಕ್ಕಳಿದ್ದರೆ ಅವರಿಗೂ ನೀಡಲಾಗುತ್ತದೆ. ಆ ಬಳಿಕ ಉತ್ತಮ ಫಲಿತಾಂಶ ಬಂದರೆ ಅಂತಹ ಮಕ್ಕಳಿಗೆ 28 ದಿನದ ಬಳಿಕ 2ನೇ ಡೋಸ್ ನೀಡಲಾಗುತ್ತದೆ.