ಕರ್ನಾಟಕ

karnataka

ETV Bharat / bharat

ಭಾರತ್​ ಬಯೋಟೆಕ್​ನಿಂದ ದೆಹಲಿ, ಮಹಾರಾಷ್ಟ್ರ ಸೇರಿದಂತೆ 14 ರಾಜ್ಯಗಳಿಗೆ ಕೊವ್ಯಾಕ್ಸಿನ್ ಪೂರೈಕೆ - ಭಾರತ್​ ಬಯೋಟೆಕ್ ಕೊವಾಕ್ಸಿನ್​ ಸುದ್ದಿ

ಭಾರತ್​ ಬಯೋಟೆಕ್​ನಿಂದ ದೆಹಲಿ ಮತ್ತು ಮಹಾರಾಷ್ಟ್ರ ಸೇರಿದಂತೆ ಒಟ್ಟು 14 ರಾಜ್ಯಗಳಿಗೆ ಕೊವ್ಯಾಕ್ಸಿನ್ ಪೂರೈಸಲಾಗುತ್ತಿದೆ ಎಂದು ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

bharat biotech  bharat biotech covaxin  covaxin supplies to states  covid 19 vaccine  ಭಾರತ್​ ಬಯೋಟೆಕ್  ಭಾರತ್​ ಬಯೋಟೆಕ್ ಕೊವಾಕ್ಸಿನ್​ ಭಾರತ್​ ಬಯೋಟೆಕ್ ಕೊವಾಕ್ಸಿನ್​ ಸರಬರಾಜು  ಭಾರತ್​ ಬಯೋಟೆಕ್ ಕೊವಾಕ್ಸಿನ್​ ಸುದ್ದಿ
ಕೊವಾಕ್ಸಿನ್

By

Published : May 10, 2021, 1:57 PM IST

ನವದೆಹಲಿ:ಭಾರತ್ ಬಯೋಟೆಕ್ ತನ್ನ ಕೋವಿಡ್ -19 ಲಸಿಕೆ 'ಕೊವ್ಯಾಕ್ಸಿನ್' ಅನ್ನು ದೆಹಲಿ ಮತ್ತು ಮಹಾರಾಷ್ಟ್ರ ಸೇರಿದಂತೆ 14 ರಾಜ್ಯಗಳಿಗೆ ಮೇ 1 ರಿಂದ ಸರಬರಾಜು ಮಾಡಲಾಗುತ್ತಿದೆ ಎಂದು ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ಸುಚಿತ್ರಾ ಎಲಾ ತಿಳಿಸಿದ್ದಾರೆ.

ಹೈದರಾಬಾದ್ ಮೂಲದ ಈ ಸಂಸ್ಥೆಯು ಕೇಂದ್ರ ಸರ್ಕಾರವು ಪಡೆದ ಹಂಚಿಕೆಗಳ ಆಧಾರದ ಮೇಲೆ ಕೋವಿಡ್​ ಚಿಕಿತ್ಸಾ ಲಸಿಕೆಯನ್ನು ರಾಜ್ಯಗಳಿಗೆ ಪೂರೈಸಲು ಪ್ರಾರಂಭಿಸಿದೆ.

ಓದಿ: ಈಟಿವಿ ಭಾರತ ಎಕ್ಸ್​ಕ್ಲೂಸಿವ್..​ ಗಂಗಾ ನದಿಯಲ್ಲಿ ತೇಲಿ ಬಂದ್ವು 50ಕ್ಕೂ ಹೆಚ್ಚು ಮೃತದೇಹಗಳು!

ಸ್ವೀಕರಿಸಿದ ಹಂಚಿಕೆಗಳ ಆಧಾರದ ಮೇಲೆ ಮೇ 1 ರಿಂದ ಒಟ್ಟು 14 ರಾಜ್ಯ ಸರ್ಕಾರಗಳಿಗೆ ಕೋವ್ಯಾಕ್ಸಿನ್ ನೇರ ಸರಬರಾಜನ್ನು ಮಾಡಲಾಗುತ್ತಿದೆ. ಇತರ ರಾಜ್ಯಗಳಿಂದ ವಿನಂತಿಗಳನ್ನು ಸ್ವೀಕರಿಸಲಾಗಿದೆ. ದಿನದ 24 ಗಂಟೆಗಳು ಹಂಚಿಕೆ ಆಧಾರದ ಮೇಲೆ ವಿತರಣೆಗೆ ಪ್ರಕ್ರಿಯೆಗೊಳಿಸಲಾಗುವುದು ಎಂದು ಭಾರತ್​ ಬಯೋಟೆಕ್​ ದೃಢಪಡಿಸಿದೆ.

ಮೇ 1ರಿಂದ ಭಾರತ್​ ಬಯೋಟೆಕ್​ ಕಂಪನಿಯು ಆಂಧ್ರಪ್ರದೇಶ, ಅಸ್ಸೋಂ, ಛತ್ತೀಸ್‌ಗಡ್, ಗುಜರಾತ್, ಜಮ್ಮು ಮತ್ತು ಕಾಶ್ಮೀರ್​, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಕ್ಕೆ ಲಸಿಕೆಗಳನ್ನು ಪೂರೈಸುತ್ತಿದೆ.

ಏಪ್ರಿಲ್ 29 ರಂದು ಭಾರತ್ ಬಯೋಟೆಕ್ ರಾಜ್ಯಗಳಿಗೆ 'ಕೋವ್ಯಾಕ್ಸಿನ್' ಬೆಲೆಯನ್ನು ಪ್ರತಿ ಡೋಸ್‌ಗೆ 600 ರೂಪಾಯಿಯಿಂದ 400 ರೂಪಾಯಿಗೆ ಕಡಿತಗೊಳಿಸಿರುವುದಾಗಿ ಘೋಷಿಸಿತ್ತು.

ABOUT THE AUTHOR

...view details