ಇಂದೋರ್(ಮಧ್ಯಪ್ರದೇಶ): ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನೊಬ್ಬ ತೀವ್ರವಾಗಿ ಅಸ್ವಸ್ಥಗೊಂಡ ಪರಿಣಾಮ ವಿಮಾನವನ್ನು ಮೆಡಿಕಲ್ ಎಮರ್ಜನ್ಸಿ ಲ್ಯಾಂಡಿಂಗ್ ಮಾಡಿರುವ ಘಟನೆ ನಗರದ ಏರ್ಪೋರ್ಟ್ನಲ್ಲಿ ನಡೆದಿದೆ.
ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ವಿಮಾನ ಇಂದೋರ್ನಲ್ಲಿ ಮೆಡಿಕಲ್ ಎಮರ್ಜನ್ಸಿ ಲ್ಯಾಂಡಿಂಗ್.. ಉಳಿಯದ ಜೀವ! - ದೆಹಲಿ ವಿಮಾನ ಇಂದೋರ್ನಲ್ಲಿ ಮೆಡಿಕಲ್ ಎಮರ್ಜನ್ಸಿ ಲ್ಯಾಂಡಿಂಗ್
ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನೊಬ್ಬ ತೀವ್ರವಾಗಿ ಅಸ್ವಸ್ಥಗೊಂಡ ಹಿನ್ನೆಲೆ ವಿಮಾನವನ್ನು ಮೆಡಿಕಲ್ ಎಮರ್ಜನ್ಸಿ ಲ್ಯಾಂಡಿಂಗ್ ಮಾಡಿರುವ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ.
ಗುರುವಾರ ಸಂಜೆ ವಿಸ್ತಾರಾ ವಿಮಾನ ಯುಕೆ-818 ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿತ್ತು. ಈ ವೇಳೆ ಪ್ರಯಾಣಿಕರಾದ ದೆಹಲಿ ನಿವಾಸಿ ಮನೋಜ್ ಕುಮಾರ್ ಅಗರ್ವಾಲ್ಗೆ ಉಸಿರಾಟದ ಸಮಸ್ಯೆ ಎದುರಾಗಿದೆ. ಮನೋಜ್ ಕುಮಾರ್ಗೆ ಉಸಿರಾಟ ತೊಂದರೆ ಮತ್ತಷ್ಟು ಹೆಚ್ಚಾದ ಹಿನ್ನೆಲೆ ಮೂರ್ಛೆ ಹೋಗಿದ್ದಾರೆ. ಈ ವಿಷಯ ಪೈಲಟ್ಗೆ ತಿಳಿದಿದ್ದು, ಕೂಡಲೇ ಇಂದೋರ್ ಏರ್ಪೋರ್ಟ್ನಲ್ಲಿ ವಿಮಾನವನ್ನು ಮೆಡಿಕಲ್ ಎಮರ್ಜನ್ಸಿ ಲ್ಯಾಂಡಿಂಗ್ ಮಾಡಿದ್ದಾರೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮನೋಜ್ ಕುಮಾರ್ನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟೊತ್ತಿಗಾಗಲೇ ಮನೋಜ್ ಕುಮಾರ್ ಸಾವನ್ನಪ್ಪಿದ್ದರು. ಹೃದಯಾಘಾತದಿಂದ ಮನೋಜ್ ಕುಮಾರ್ ಸಾವನ್ನಪ್ಪಿರಬಹುದಾಗಿ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮನೋಜ್ ಕುಮಾರ್ ಮೃತದೇಹವನ್ನು ಆತನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಈ ಘಟನೆ ಬಗ್ಗೆ ಏರ್ಡ್ರೋಮ್ ಪೊಲೀಸ್ ಠಾಣೆ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.