ಬೆಂಗಳೂರು:ಬೆಂಗಳೂರು ಸ್ಫೋಟ ಪ್ರಕರಣದ ಆರೋಪಿ ಅಬ್ದುಲ್ ನಜೀರ್ ಮದನಿ ಕೆಲ ದಿನಗಳ ಹಿಂದೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣದ ವಿಚಾರಣೆ ಮುಗಿಯುವವರೆಗೂ ಕೇರಳದಲ್ಲಿರುವ ತಮ್ಮ ಊರಿಗೆ ತೆರಳಲು ಅನುಮತಿ ನೀಡಬೇಕೆಂದು ಕೋರಿದ್ದ. ಕಳೆದ ಆರು ವರ್ಷಗಳಿಂದ ವಿಚಾರಣೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಮದನಿ ಈ ಅರ್ಜಿ ಸಲ್ಲಿಸಿದ್ದನು.
ಇದೀಗ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಾಧೀಶರು, "ಅಬ್ದುಲ್ ನಜೀರ್ ಅಪಾಯಕಾರಿ ಮನುಷ್ಯ" ಎಂದಿದ್ದಾರೆ. ಈ ಬಳಿಕ ವಿಚಾರಣೆಗೆ ಬೇಕಾದ ಪ್ರಮುಖ ವಿಷಯಗಳನ್ನು ಪರಿಶೀಲಿಸುವಂತೆ ವಕೀಲ ಜಯಂತ್ ಭೂಷಣ್ ಅವರಿಗೆ ಸೂಚಿಸಿದ್ದಾರೆ.