ಕೋಲ್ಕತಾ :ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಕಾವು ದಿನೇದಿನೆ ಹೆಚ್ಚಾಗುತ್ತಿದೆ. ಈ ನಡುವೆ 5ನೇ ಹಂತದ ಚುನಾವಣೆಗೆ ಪ್ರಚಾರ ಕಾರ್ಯ ಅಂತಿಮಗೊಂಡಿದೆ. 5ನೇ ಹಂತದ ಚುನಾವಣೆಗೆ ನಡೆದ ಪ್ರಚಾರ ಕಾರ್ಯದಲ್ಲಿ ಉಂಟಾದ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟಿದ್ದ ಘಟನೆ ತೀವ್ರ ಸಂಚಲನಕ್ಕೆ ಕಾರಣವಾಗಿತ್ತು.
ಅಲ್ಲದೆ 5ನೇ ಹಂತದ ಚುನಾವಣೆ ವೇಳೆ ಪ್ರಚಾರದಿಂದ ಸಿಎಂ ಮಮತಾ ಬ್ಯಾನರ್ಜಿಯನ್ನು ನಿಷೇಧಿಸಲಾಗಿತ್ತು. ಪ್ರಚೋದನಕಾರಿ ಭಾಷಣ ಮಾಡಿದ್ದ ಆರೋಪದಡಿ 24 ಗಂಟೆಗಳ ನಿಷೇಧ ಹೇರಲಾಗಿತ್ತು. ಇದನ್ನು ಸಮಾಜವಾದಿ ಪಕ್ಷದ (ಎಸ್‌ಪಿ) ಅಖಿಲೇಶ್ ಯಾದವ್ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನವಾಬ್ ಮಲಿಕ್ ಸೇರಿ ಹಲವು ನಾಯಕರು ಖಂಡಿಸಿದ್ದರು.
ಅಲ್ಲದೆ ಬಿಜೆಪಿ ನಾಯಕರಾದ ಜಿ ಕಿಶನ್ ರೆಡ್ಡಿ ಮತ್ತು ಜಾಫರ್ ಇಸ್ಲಾಂ ಅವರು ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ ಮತ್ತು ಈ ಘಟನೆಗೆ ಅವರೇ ಜವಾಬ್ದಾರರಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಬ್ಯಾನರ್ಜಿ ಮಾತ್ರವಲ್ಲದೆ ಸಿಟಾಲ್ಕುಚಿ ಹಿಂಸಾಚಾರದ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿ ಅಭ್ಯರ್ಥಿ ರಾಹುಲ್ ಸಿನ್ಹಾ ಅವರನ್ನು ಮಂಗಳವಾರ 48 ಗಂಟೆಗಳ ಕಾಲ ಇಸಿ ನಿಷೇಧಿಸಿತ್ತು. ಘಟನೆ ಸಂಬಂಧ ದಿಲೀಪ್ ಘೋಷ್ ಮತ್ತು ಸುವೇಂದು ಅಧಿಕಾರಿಗೆ ನೋಟಿಸ್ ನೀಡಿತ್ತು.