ಕರ್ನಾಟಕ

karnataka

ETV Bharat / bharat

Manipur violence: ಮಹಿಳೆಯರ ಬೆತ್ತಲೆ ಮೆರವಣಿಗೆಗೂ ಮುನ್ನ ಜನರನ್ನು ಕೊಂದು ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು: ಎಫ್‌ಐಆರ್​ನಲ್ಲಿ ಉಲ್ಲೇಖ - ಎಫ್‌ಐಆರ್

parading women naked in Manipur: ಬೆತ್ತಲೆಯಾಗಿ ಮೆರವಣಿಗೆ ಮಾಡುವ ಮೊದಲು ತನ್ನ ಸಹೋದರಿಯನ್ನು ರಕ್ಷಿಸಲು ಪ್ರಯತ್ನಿಸಿದಾಗ ಶಸ್ತ್ರಸಜ್ಜಿತ ಗುಂಪು ಒಬ್ಬ ವ್ಯಕ್ತಿಯನ್ನು ಕೊಂದಿದೆ ಎಂದು ಎಫ್‌ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.

parading women naked in Manipur
ಮಹಿಳೆಯರ ಬೆತ್ತಲೆ ಮೆರವಣಿಗೆ

By

Published : Jul 21, 2023, 5:03 PM IST

ಇಂಫಾಲ:ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ. ಅವರನ್ನು ಅಪಹರಣ ಮಾಡುವ ಮೊದಲು ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪು ಕಾಂಗ್‌ಪೋಕ್ಪಿ ಜಿಲ್ಲೆಯ ಗ್ರಾಮಕ್ಕೆ ಬಂದು ಮನೆಗಳಿಗೆ ಬೆಂಕಿ ಹಚ್ಚಿ ಲೂಟಿ ಮಾಡಿದೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ ಕೆಲವರನ್ನು ಕೊಂದಿದೆ ಎಂದು ಆರೋಪಿಸಲಾಗಿದೆ.

ಎಫ್‌ಐಆರ್​​ನಲ್ಲಿ ಉಲ್ಲೆಖಿಸಿರುವಂತೆ "ಮೇ 4 ರಂದು ಇಬ್ಬರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುವ ಮೊದಲು ತನ್ನ ಸಹೋದರಿಯನ್ನು ಅತ್ಯಾಚಾರಕ್ಕೊಳಗಾಗದಂತೆ ರಕ್ಷಿಸಲು ಪ್ರಯತ್ನಿಸಿದಾಗ ಶಸ್ತ್ರಸಜ್ಜಿತ ಗುಂಪು ಒಬ್ಬ ವ್ಯಕ್ತಿಯನ್ನು ಹತ್ಯೆ ಮಾಡಿದೆ" ಎಂದು ಹೇಳಲಾಗಿದೆ.

ಎಕೆ ರೈಫಲ್ಸ್ ಸೇರಿದಂತೆ 303 ಅತ್ಯಾಧುನಿಕ ಆಯುಧಗಳನ್ನು ಹೊತ್ತ ಸುಮಾರು 900-1000 ಜನರು ಬಲವಂತವಾಗಿ ನಮ್ಮ ಗ್ರಾಮವನ್ನು ಪ್ರವೇಶಿಸಿದರು. ಕಾಂಗ್‌ಪೋಕ್ಪಿ ಜಿಲ್ಲೆಯ ಸೈಕುಲ್ ಪೊಲೀಸ್ ಠಾಣೆಯಿಂದ ದಕ್ಷಿಣಕ್ಕೆ 68 ಕಿ.ಮೀ. ಹಿಂಸಾತ್ಮಕ ಗುಂಪು ಎಲ್ಲ ಮನೆಗಳನ್ನು ಧ್ವಂಸಗೊಳಿಸಿತು ಮತ್ತು ಎಲ್ಲ ಚರಾಸ್ತಿಗಳನ್ನು ಲೂಟಿ ಮಾಡಿ ಬಳಿಕ ಅವುಗಳನ್ನು ಸುಟ್ಟುಹಾಕಿತು ಎಂದು ಶೈಖುಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಜತೆಗೆ ನಗದು, ಪೀಠೋಪಕರಣಗಳು, ಎಲೆಕ್ಟ್ರಾನಿಕ್ ವಸ್ತುಗಳು, ಆಹಾರಧಾನ್ಯಗಳು ಮತ್ತು ಜಾನುವಾರುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಎಫ್‌ಐಆರ್​ನಲ್ಲಿ ಉಲ್ಲೆಖಿಸಲಾಗಿದೆ.

ಇದನ್ನೂ ಓದಿ:ಮಣಿಪುರದಲ್ಲಿ ಮಹಿಳೆಯರಿಬ್ಬರ ಬೆತ್ತಲೆಗೊಳಿಸಿ ಮೆರವಣಿಗೆ, ತೀವ್ರ ಆಕ್ರೋಶ, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ

ನಾಲ್ವರ ಬಂಧನ:ಹತ್ತಿರದ ಅರಣ್ಯದಿಂದ ಪೊಲೀಸ್ ಸಿಬ್ಬಂದಿ ರಕ್ಷಿಸಿದ ಐದು ಜನರನ್ನು ಜನಸಮೂಹ ವಶಕ್ಕೆ ಪಡೆದಿತ್ತು ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ಮತ್ತು ಕಿರುಕುಳ ನೀಡಿದ ವಿಡಿಯೋ ವೈರಲ್​ ಆದ ಬಳಿಕ ಪ್ರಕರಣ ಸಂಬಂಧ ನಾಲ್ವರನ್ನು ಶೈಖುಲ್ ಪೊಲೀಸರು ಬಂಧಿಸಿದ್ದಾರೆ. ಜು.19 ರಂದು ವಿಡಿಯೋ ವೈರಲ್​ ಆಗಿತ್ತು. ಈ ಸಂಬಂಧ ಕಾಂಗ್‌ಪೊಕ್ಪಿ ಜಿಲ್ಲೆಯ ಶೈಖುಲ್ ಪೊಲೀಸ್ ಠಾಣೆಯಲ್ಲಿ ಸುಮಾರು ಒಂದು ತಿಂಗಳ ಹಿಂದೆ(ಜೂನ್ 21) ದೂರು ದಾಖಲಿಸಲಾಗಿತ್ತು.

ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಮಹಿಳೆಯ ಪತಿ:ಶಸ್ತ್ರಸಜ್ಜಿತ ಗುಂಪಿನಿಂದ ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಪ್ರಕರಣದಲ್ಲಿ ಕಿರುಕುಳಕ್ಕೊಳಗಾದ ಇಬ್ಬರು ಮಹಿಳೆಯರಲ್ಲಿ ಒಬ್ಬರ ಪತಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಎಂದು ತಿಳಿದು ಬಂದಿದೆ. ಅವರು ಕಾರ್ಗಿಲ್ ಯುದ್ಧದ ಅನುಭವಿಯಾಗಿದ್ದು, ದೇಶವನ್ನು ರಕ್ಷಿಸಿದರೂ ತನ್ನ ಹೆಂಡತಿಯನ್ನು ಅವಮಾನದಿಂದ ರಕ್ಷಿಸಲು ಸಾಧ್ಯವಾಗಲಿಲ್ಲ. ಮಹಿಳೆಯ ಪತಿ ಅಸ್ಸೋಂ ರೆಜಿಮೆಂಟ್‌ನ ಸುಬೇದಾರ್ ಆಗಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು.

ದೇಶವನ್ನು ರಕ್ಷಿಸಿದರೂ, ಪತ್ನಿಯನ್ನು ರಕ್ಷಿಸಲಾಗಲಿಲ್ಲ:"ನಾನು ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿದೆ ಮತ್ತು ಭಾರತೀಯ ಶಾಂತಿಪಾಲನಾ ಪಡೆಯ ಭಾಗವಾಗಿ ಶ್ರೀಲಂಕಾದಲ್ಲಿಯೂ ಇದ್ದೆ. ನಾನು ರಾಷ್ಟ್ರವನ್ನು ರಕ್ಷಿಸಿದ್ದೇನೆ ಆದರೆ ನನ್ನ ಹೆಂಡತಿ ಮತ್ತು ಗ್ರಾಮಸ್ಥರನ್ನು ರಕ್ಷಿಸಲು ನನಗೆ ಸಾಧ್ಯವಾಗಲಿಲ್ಲ" ಎಂದು ಅಳಲು ತೋಡಿಕೊಂಡರು ಎಂದು ಸ್ಥಳೀಯ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.

ಮೇ 4 ರಂದು ಮುಂಜಾನೆ ಶಸ್ತ್ರಸಜ್ಜಿತ ಗುಂಪು ಹಲವಾರು ಮನೆಗಳನ್ನು ಸುಟ್ಟುಹಾಕಿತು. ಇಬ್ಬರು ಮಹಿಳೆಯರನ್ನು ವಸ್ತ್ರಾಪಹರಣ ಮಾಡಿ ಜನರ ಮುಂದೆ ಹಳ್ಳಿಯ ಹಾದಿಯಲ್ಲಿ ಮೆರವಣಿಗೆ ಮಾಡಿತು. ಈ ವೇಳೆ ಪೊಲೀಸರು ಸ್ಥಳದಲ್ಲಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮನೆಗಳನ್ನು ಸುಟ್ಟುಹಾಕಿದ ಮತ್ತು ಮಹಿಳೆಯರನ್ನು ಅವಮಾನಿಸಿದ ಎಲ್ಲರಿಗೂ ಕ್ರೂರ ಶಿಕ್ಷೆಯಾಗಬೇಕು ಎಂದು ನಾನು ಬಯಸುತ್ತೇನೆ" ಎಂದು ಅವರು ಆಗ್ರಹಿಸಿದರು.

ಪ್ರಕರಣದ ಹಿನ್ನೆಲೆ:ಬರೋಬ್ಬರಿ 75ಕ್ಕೂ ಹೆಚ್ಚು ದಿನಗಳಿಂದ ಎರಡು ಪ್ರಮುಖ ಸಮುದಾಯಗಳ (ಮೈತೇಯಿ ಮತ್ತು ಕುಕಿ) ನಡುವೆ ನಡೆಯುತ್ತಿರುವ ಸಂಘರ್ಷದಿಂದ ಮಣಿಪುರ ಎಂಬ ಪುಟ್ಟ ರಾಜ್ಯ ಹೊತ್ತಿ ಉರಿಯುತ್ತಿದೆ. ಖುದ್ದು ಸೇನೆ ಫೀಲ್ಡ್‌ಗೆ ಇಳಿದರು ಕೂಡ ಸಂಘರ್ಷ ಶಮನವಾಗಿಲ್ಲ. ಮೇ 3 ರಂದು ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತ್ತು. ಘಟನೆಯಲ್ಲಿ ಈವರೆಗೆ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಪರಿಶಿಷ್ಟ ಪಂಗಡದ (ST) ಸ್ಥಾನಮಾನಕ್ಕಾಗಿ ಮೈತೇಯಿ ಸಮುದಾಯದ ಬೇಡಿಕೆಯನ್ನು ವಿರೋಧಿಸಿ ಬೆಟ್ಟದ ಜಿಲ್ಲೆಗಳಲ್ಲಿ 'ಬುಡಕಟ್ಟು ಐಕ್ಯತಾ ಮೆರವಣಿಗೆ' ಹಮ್ಮಿಕೊಳ್ಳಲಾಗಿತ್ತು.

ಇದನ್ನೂ ಓದಿ:ಬುಡಕಟ್ಟು ಮಹಿಳೆಯರ ನಗ್ನ ಮೆರವಣಿಗೆ ಪ್ರಕರಣ​: ನಾಲ್ವರ ಬಂಧನ, ಅಪರಾಧಿಗಳಿಗೆ ಮರಣದಂಡನೆಯೇ ಸೂಕ್ತ ಎಂದ ಮಣಿಪುರ ಸಿಎಂ

ABOUT THE AUTHOR

...view details