ಹೈದರಾಬಾದ್:ಚುನಾವಣಾ ರಾಜ್ಯವಾದ ತೆಲಂಗಾಣದಲ್ಲಿ ನೆಲೆ ನಿಲ್ಲಲು ಪ್ರಯತ್ನಿಸುತ್ತಿರುವ ಬಿಜೆಪಿ, ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ಯತ್ನ ನಡೆಸಿದೆ. ವಿಧಾನಸಭೆ ಚುನಾವಣೆಯಲ್ಲಿ ಸಾಧ್ಯವಾದಷ್ಟು ಸ್ಥಾನಗಳಲ್ಲಿ ಜಯಿಸಿ, 2024 ರ ಲೋಕಸಭೆ ಚುನಾವಣೆಯಲ್ಲಿ 23 ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿದೆ. ಹೀಗಾಗಿ ಪಕ್ಷ ಚಟುವಟಿಕೆಗಳನ್ನು ಈಗಿನಿಂದಲೇ ಚುರುಕುಗೊಳಿಸಿದೆ.
2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೋಶಮಹಲ್ ಕ್ಷೇತ್ರದಿಂದ ಮಾತ್ರ ಗೆದ್ದಿತ್ತು. ನಂತರದ ಲೋಕಸಭೆ ಚುನಾವಣೆಯಲ್ಲಿ ಪಕ್ಷವು 20 ವಿಧಾನಸಭಾ ಕ್ಷೇತ್ರಗಳಲ್ಲಿ ದೊಡ್ಡ ಮುನ್ನಡೆ ಸಾಧಿಸಿ, ನಾಲ್ಕು ಸಂಸದ ಸ್ಥಾನಗಳನ್ನು ಪಡೆದುಕೊಂಡಿತು. ಇದರ ಬಳಿಕ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ದುಬ್ಬಾಕ ಮತ್ತು ಹುಜೂರಾಬಾದ್‌ನಲ್ಲಿ ಗೆಲುವು ಸಾಧಿಸಿತು. ಇದೇ ಹುರುಪಿನಲ್ಲಿರುವ ಬಿಜೆಪಿ ಲೋಕಸಭೆಯ ಎಲ್ಲ 23 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ.
ಬಿಜೆಪಿಯ ಚುನಾವಣಾ ತಂತ್ರ:ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವ ಸ್ಥಳಗಳಲ್ಲಿ ತನ್ನ ಹಿಡಿತವನ್ನು ಉಳಿಸಿಕೊಳ್ಳುವತ್ತ ಬಿಜೆಪಿ ನಾಯಕತ್ವ ಹೆಚ್ಚಿನ ಗಮನಹರಿಸಿದೆ. ದಕ್ಷಿಣ ರಾಜ್ಯಗಳಲ್ಲಿ ಒಂದಾದ ತೆಲಂಗಾಣದಲ್ಲಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡು, ಸ್ಥಾನಗಳನ್ನೂ ಗೆಲ್ಲುವ ಕಾರ್ಯತಂತ್ರವನ್ನು ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಬೂತ್ ಮಟ್ಟದ ಬಲವರ್ಧನೆಗೆ ಪಕ್ಷದ ಮುಖಂಡರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಪ್ರತಿಯೊಬ್ಬ ಮತದಾರರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರದ ಯೋಜನೆಯ ಲಾಭದ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತಿದೆ.
ಅಸೆಂಬ್ಲಿ ಕಣದಲ್ಲಿ ಸಂಸದರು:ವಿಧಾನಸಭೆ ಚುನಾವಣಾ ಕಣದಲ್ಲಿ ಈ ಬಾರಿ ಸಂಸದರನ್ನೂ ಇಳಿಸಿದೆ. ಕರೀಂನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕರೀಂನಗರ, ಚೊಪ್ಪದಂಡಿ, ವೇಮುಲವಾಡ, ಮಣಕೊಂಡೂರಿನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಹಿಂದೆ ಸಂಸದರಾಗಿ ಗೆದ್ದಿದ್ದ ಬಂಡಿ ಸಂಜಯ್ ಅವರನ್ನು ಕರೀಂನಗರ ಅಭ್ಯರ್ಥಿಯಾಗಿ ಪಕ್ಷ ಕಣಕ್ಕಿಳಿಸಿದೆ. ಚೊಪ್ಪದಂಡಿಯಲ್ಲಿ ಬೊಡಿಗೆ ಶೋಭಾ, ವೇಮುಲವಾಡದಲ್ಲಿ ವಿಕಾಸ್ ರಾವ್, ಮಣಕೊಂಡೂರಿನಲ್ಲಿ ಮೋಹನ್ ಅವರಿಗೆ ಪಕ್ಷ ಟಿಕೆಟ್ ನೀಡಿದೆ.
ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಆದಿಲಾಬಾದ್, ಬೋತ್, ನಿರ್ಮಲ್ ಮತ್ತು ಮುಥೋಲ್ ಕ್ಷೇತ್ರಗಳಲ್ಲಿ ಬಿಜೆಪಿ ದೊಡ್ಡ ಮುನ್ನಡೆ ಸಾಧಿಸಿತ್ತು. ಇಲ್ಲಿ ಗೆದ್ದಿರುವ ಸಂಸದ ಸೋಯಮ್ ಬಾಪುರಾವ್ ಅವರು ಮಹೇಶ್ವರ್ ರೆಡ್ಡಿ, ನಿರ್ಮಲ್ ಎರಡು ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಮತ್ತು ಕಾಂಗ್ರೆಸ್‌ನಿಂದ ಬಂದ ರಾಮರಾವ್ ಅವರಿಗೆ ಮುಥೋಲ್ ಮತ್ತು ಆದಿಲಾಬಾದ್‌ನಲ್ಲಿ ಕಳೆದ ಚುನಾವಣೆಯ ಅಭ್ಯರ್ಥಿ ಪಾಯಲ್ ಶಂಕರ್ ಅವರನ್ನು ಕಣಕ್ಕಿಳಿಸಿದೆ.
ನಿಜಾಮಾಬಾದ್ ಲೋಕಸಭಾ ಕ್ಷೇತ್ರದ ಕೋರುಟ್ಲಾ, ಆರ್ಮೂರು, ನಿಜಾಮಾಬಾದ್ ಗ್ರಾಮಾಂತರ ಮತ್ತು ಬಾಲ್ಕೊಂಡ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತು. ಹೀಗಾಗಿ ಸಂಸದ ಅರವಿಂದ್ ಅವರನ್ನು ಕೋರುಟ್ಲಾ ಕ್ಷೇತ್ರಕ್ಕೆ ಉಮೇದುವಾರಿಕೆ ಸಲ್ಲಿಸಿದ್ದಾರೆ. ಬಾಲ್ಕೊಂಡದಲ್ಲಿ ಅನ್ನಪೂರ್ಣಮ್ಮ, ಆರ್ಮೂರಿನಲ್ಲಿ ರಾಕೇಶ್ ರೆಡ್ಡಿ, ನಿಜಾಮಾಬಾದ್ ಗ್ರಾಮಾಂತರದಲ್ಲಿ ದಿನೇಶ್ ಕುಮಾರ್ ಅವರು ಕಣದಲ್ಲಿದ್ದಾರೆ.
ಸಂಸದ ಕಿಶನ್ ರೆಡ್ಡಿ ಅವರು ಲೋಕಸಭಾ ವ್ಯಾಪ್ತಿಯ ಮುಶಿರಾಬಾದ್, ಸಿಕಂದರಾಬಾದ್, ಅಂಬರ್‌ಪೇಟ್, ಖೈರತಾಬಾದ್, ಮತ್ತು ಸನತ್‌ನಗರ, ಗೋಶಾಮಹಲ್‌ಗಳ ಕ್ಷೇತ್ರಗಳ ಮೇಲೆ ಹಿಡಿಯ ಹೊಂದಿದ್ದಾರೆ. ಈ ಪೈಕಿ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಗೋಶಾಮಹಲ್ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಜಿ.ಕಿಶನ್ ರೆಡ್ಡಿ, ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಕೆ.ಲಕ್ಷ್ಮಣ್ ಅವರು ಈ ಕ್ಷೇತ್ರಗಳಲ್ಲಿ ಹೆಚ್ಚಿನ ಗಮನ ಹರಿಸಿದ್ದಾರೆ.
ಮಹಬೂಬ್‌ನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮಹಬೂಬ್‌ನಗರ ಮತ್ತು ಮಕ್ತಲ್‌ನಲ್ಲಿ ಪಕ್ಷ ಮುನ್ನಡೆ ಸಾಧಿಸಿತ್ತು. ಇದನ್ನು ಉಳಿಸಿಕೊಳ್ಳಲು ಮಿಥುನ್ ರೆಡ್ಡಿ ಮತ್ತು ಜಲಂಧರ್ ರೆಡ್ಡಿಗೆ ಟಿಕೆಟ್ ನೀಡಲಾಗಿದೆ. ಹಾಲಿ ಬಿಜೆಪಿ ಶಾಸಕರಿರುವ ದುಬ್ಬಾಕ, ಹುಜೂರಾಬಾದ್ ಮತ್ತು ಗೋಶಾಮಹ ಕ್ಷೇತ್ರಗಳನ್ನು ಮರು ಗೆಲ್ಲಲು ದುಬ್ಬಾಕದಲ್ಲಿ ಶಾಸಕ ರಘುನಂದನ್ ರಾವ್ ಉಮೇದುವಾರಿಕೆ ಸಲ್ಲಿಸಿದ್ದಾರೆ. ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಅಧ್ಯಕ್ಷ ಈಟಾಲ ರಾಜೇಂದರ್ ಹುಜೂರಾಬಾದ್‌ನಲ್ಲಿ ಸತತ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ:’ಪಕ್ಷದ ಬೆಳವಣಿಗೆಗೆ ನನ್ನ ಸೇವೆ ನಿರಂತರವಾಗಿರಲಿದೆ’ : ಬಹಿರಂಗ ಪತ್ರದ ಮೂಲಕ ವಂದನೆ ತಿಳಿಸಿದ ಕಟೀಲ್