ನವದೆಹಲಿ: ಬ್ಯಾಂಕ್ ಗ್ರಾಹಕರಿಗೆ ಮಾಹಿತಿ ಕೊರತೆ ಉಂಟಾಗಬಾರದು ಎಂಬ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಡಿಸೆಂಬರ್ ತಿಂಗಳ ಬ್ಯಾಂಕ್ ರಜೆ ಪಟ್ಟಿ ಬಿಡುಗಡೆ ಮಾಡಿದೆ. ಈ ಪ್ರಕಾರ ತಿಂಗಳಿನಲ್ಲಿ ಬರೋಬ್ಬರಿ 12 ದಿನ ಬ್ಯಾಂಕ್ ಬಂದ್ ಆಗಲಿದೆ.
ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರ ಸೇರಿದಂತೆ ಒಟ್ಟು 12 ದಿನ ರಜೆ ಇದೆ. ಡಿಸೆಂಬರ್ ತಿಂಗಳಿನಲ್ಲಿ ವಿಶೇಷ ದಿನಗಳಿರುವುದರಿಂದ ಬ್ಯಾಂಕ್ ರಜೆ ಇರುತ್ತದೆ. ಆದರೆ, ಎಲ್ಲಾ ಬ್ಯಾಂಕುಗಳಲ್ಲಿ ಹಾಗೂ ಎಲ್ಲಾ ರಾಜ್ಯಗಳಲ್ಲಿ 12 ದಿನಗಳ ಕಾಲ ರಜೆ ಇರುವುದಿಲ್ಲ.
ರಾಜ್ಯದಿಂದ ರಾಜ್ಯಕ್ಕೆ ಬ್ಯಾಂಕ್ ರಜೆಗಳು ಬದಲಾಗಲಿವೆ. ಗೆಜೆಟೆಡ್ ರಜಾ ದಿನಗಳು ಮಾತ್ರ ದೇಶಾದ್ಯಂತ ಎಲ್ಲಾ ಬ್ಯಾಂಕ್ಗಳಿಗೆ ಅನ್ವಯವಾಗಲಿವೆ. ಗೆಜೆಟೆಡ್ ರಜಾದಿನಗಳಲ್ಲಿ ಶನಿವಾರ ಮತ್ತು ಭಾನುವಾರಗಳು ಸೇರಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.