ಕರ್ನಾಟಕ

karnataka

ETV Bharat / bharat

Love ends in jail: ಪ್ರಿಯಕರನ ಭೇಟಿ ಮಾಡಲು ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ ಬಾಂಗ್ಲಾದೇಶದ ಯುವತಿ.. ಈಗ ಪೊಲೀಸರ ಅತಿಥಿ​ - ಸೀಮಾ ಹೈದರ್

ಪ್ರಿಯಕರನನ್ನು ಭೇಟಿಯಾಗಲು ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದ ಬಾಂಗ್ಲಾದೇಶದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

bangladeshi-womans-quest-for-love-in-india-ends-in-jail
ಪ್ರಿಯಕರನ ಭೇಟಿ : ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ ಬಾಂಗ್ಲಾದೇಶದ ಯುವತಿಯ ಬಂಧನ

By

Published : Jul 15, 2023, 7:58 AM IST

ಸಿಲಿಗುರಿ (ಪಶ್ಚಿಮಬಂಗಾಳ) : ಬಾಂಗ್ಲಾದೇಶದಿಂದ ತನ್ನ ಪ್ರಿಯಕರನ್ನು ಹುಡುಕಿಕೊಂಡು ಭಾರತವನ್ನು ಅಕ್ರಮವಾಗಿ ಪ್ರವೇಶಿಸಿದ್ದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಪ್ರಿಯಕರನನ್ನು ಹುಡುಕಿಕೊಂಡು ಬಂದ ಯುವತಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.

ಬಾಂಗ್ಲಾದೇಶದ ಜೆಸ್ಸೋರ್​ ಮೂಲದ ಸಪಾಲಾ ಅಕ್ತರ್ ಬಂಧಿತ ಯುವತಿ. ಈ ಯುವತಿ ತನ್ನ ಪ್ರಿಯಕರನನ್ನು ಭೇಟಿಯಾಗಲು ಭಾರತದ ಅಂತಾರಾಷ್ಟ್ರೀಯ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ ಸಿಲಿಗುರಿ ಕಮಿಷನರೇಟ್​ ವ್ಯಾಪ್ತಿಯ ಪ್ರಧಾನನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ಮಾಹಿತಿ ಪ್ರಕಾರ, ಸಪಾಲಾ ಅಕ್ತರ್​ ಬಾಂಗ್ಲಾದೇಶದ ಜೆಸ್ಸೋರ್ ಜಿಲ್ಲೆಯ ಮೂಲದವಳಾಗಿದ್ದಾಳೆ. ಈಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರತ ಮೂಲದ ಯುವಕನ ಪರಿಚಯವಾಗಿದೆ. ಇಬ್ಬರ ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಈ ಸಂಬಂಧ ಕಳೆದ ಎರಡೂವರೆ ತಿಂಗಳ ಹಿಂದೆ ಯುವತಿಯು ತನ್ನ ಪ್ರಿಯಕರನನ್ನು ಭೇಟಿಯಾಗಲು ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಳು. ಬಳಿಕ ಯುವಕನನ್ನು ಪ್ರಧಾನನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಭೇಟಿಯಾಗಿದ್ದಳು. ನಂತರ ಇಬ್ಬರು ಕೆಲವು ದಿನಗಳ ಕಾಲ ಜೊತೆಯಲ್ಲಿದ್ದರು. ಈ ನಡುವೆ ಯುವತಿಯು ಜೀವನೋಪಾಯಕ್ಕಾಗಿ ಬ್ಯೂಟಿ ಪಾರ್ಲರ್​ವೊಂದರಲ್ಲಿ ಕೆಲಸಕ್ಕೆ ಸೇರಿದ್ದಳು.

ಇದೇ ಸಂದರ್ಭದಲ್ಲಿ ಯುವತಿಗೆ ತನ್ನ ಪ್ರಿಯಕರ ಪ್ರೀತಿ ಹೆಸರಲ್ಲಿ ಮೋಸ ಮಾಡಿ ತನ್ನನ್ನು ನೇಪಾಳಕ್ಕೆ ಮಾರಾಟ ಮಾಡಲು ಯತ್ನಿಸುತ್ತಿದ್ದಾನೆ ಎಂಬ ವಿಷಯ ಗೊತ್ತಾಗಿದೆ. ಹೀಗಾಗಿ ಕೂಡಲೇ ತನ್ನ ಪ್ರಿಯಕರನಿಂದ ತಪ್ಪಿಸಿಕೊಳ್ಳಲು ಯುವತಿ ನಿರ್ಧರಿಸಿದ್ದಳು. ಈ ಹಿನ್ನೆಲೆ ಯುವತಿಯು ಇಲ್ಲಿನ ಸಿಲಿಗುರಿಯಲ್ಲಿ ರಾತ್ರಿ ಸುತ್ತಾಡುತ್ತಿದ್ದಳು. ಇದನ್ನು ಕಂಡ ಒಂದು ಸ್ವಯಂಸೇವಾ ಸಂಸ್ಥೆಯವರು ಆಕೆಯನ್ನು ವಿಚಾರಿಸಿದ್ದಾರೆ. ಈ ವೇಳೆ ಯುವತಿಯು ತಾನು ಬಾಂಗ್ಲಾದೇಶದಿಂದ ಬಂದಿರುವುದಾಗಿ ಹೇಳಿದ್ದಾಳೆ. ಆದ್ದರಿಂದ ಸ್ವಯಂಸೇವಾ ಸಂಸ್ಥೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ ಆರೋಪದ ಮೇಲೆ ಗುರುವಾರ ಪೊಲೀಸರು ಯುವತಿಯನ್ನು ಬಂಧಿಸಿದ್ದಾರೆ. ಯುವತಿಯನ್ನು ಸಿಲಿಗುರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಆಕೆಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಪೊಲೀಸ್​ ಕಸ್ಟಡಿಗೆ ಆದೇಶಿಸಿದರು. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಯುವಕನನ್ನು ಗುರುತು ಇನ್ನೂ ಪತ್ತೆಯಾಗಿಲ್ಲ.

ಪ್ರಕರಣ ಸಂಬಂಧ ಮಾಹಿತಿ ನೀಡಿದ ಸಿಲಿಗುರಿ ಪೊಲೀಸ್ ಕಮಿಷನರ್ ಅಖಿಲೇಶ್ ಚತುರ್ವೇದಿ, "ಯುವತಿಯು ಭಾರತ-ಬಾಂಗ್ಲಾದೇಶದ ಗಡಿಯನ್ನು ಹೇಗೆ ಮತ್ತು ಎಲ್ಲಿಂದ ದಾಟಿದಳು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಬಿಎಸ್‌ಎಫ್ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ. ಪ್ರಕರಣ ತನಿಖೆ ಮುಂದುವರೆದಿದೆ" ಎಂದು ಹೇಳಿದರು.

ಈ ಹಿಂದೆಯೂ ಇದೇ ರೀತಿಯ ಪ್ರಕರಣವೊಂದು ವರದಿಯಾಗಿತ್ತು. ಪಾಕಿಸ್ತಾನದ ಮಹಿಳೆ ಭಾರತದಲ್ಲಿರುವ ಪ್ರಿಯಕರನನ್ನು ಭೇಟಿಯಾಗಲು ಬಂದಿದ್ದಳು. ಪಾಕಿಸ್ತಾನ ಸೀಮಾ ಹೈದರ್​ ತನ್ನ ಪ್ರಿಯಕರ ಸಚಿನ್​ ಮೀನಾನನ್ನು ಭೇಟಿಯಾಗಲು ಬಂದು ಪೊಲೀಸರ ಅತಿಥಿಯಾಗಿದ್ದಳು. ಬಳಿಕ ಆಕೆ ಸಚಿನ್​ ಜೊತೆಗೆ ಬದುಕುವುದಾಗಿ ಹೇಳಿದ್ದು, ಪಾಕಿಸ್ತಾನಕ್ಕೆ ವಾಪಸ್​ ಹೋಗಲ್ಲವೆಂದು ಹೇಳುತ್ತಿದ್ದಾಳೆ.

ಇದನ್ನೂ ಓದಿ :ಶ್ಯಾಮಲಾ 'ಕಲ್ಯಾಣ': ಭಾರತೀಯ ವರನ ವರಿಸಲು ಗಡಿದಾಟಿ ಬಂದ ಪಾಕಿಸ್ತಾನಿ ಯುವತಿ

ABOUT THE AUTHOR

...view details