ಕರ್ನಾಟಕ

karnataka

ETV Bharat / bharat

ಚಾರಣಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ‘ಬಂದರ್​ಪಂಚ್’: ಹಿಮದಲ್ಲಿ ಮುಳುಗಿದೆ ಭೂಮಿ ಮೇಲಿನ ದೇವಲೋಕ - ಹಿಮಾಲಯ ಪರ್ತತ ಶ್ರೇಣಿ

ಬಮ್ಸಾರಿ ಪರ್ವತ ಶ್ರೇಣಿಯ ತಪ್ಪಲಲ್ಲಿ ಬ್ರಹ್ಮಕಮಲ ಸೇರಿ ಅನೇಕ ಸುಂದರ ಹೂವುಗಳು ಅರಳುತ್ತವೆ. ಈ ದೃಶ್ಯ ಕಣ್ಣಿಗೆ ಹಬ್ಬವೆನಿಸುತ್ತದೆ. ಇದಾದ ಬಳಿಕ ಬಮ್ಸಾರಿ ಸರೋವರ ಎದುರಾಗುತ್ತದೆ. ಸುಮಾರು 500 ಮೀಟರ್​ ಪ್ರದೇಶದಲ್ಲಿ ಹರಡಿರುವ ಈ ಸರೋವರವು ಭಾಗಶಃ ಮಂಜಿನಿಂದ ಆವೃತವಾಗಿರುತ್ತದೆ.

bander-panch-a-place-for-trekking-with-find-new-world
ಚಾರಣಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ‘ಬಂದರ್​ಪಂಚ್

By

Published : Jul 16, 2021, 6:03 AM IST

ಡೆಹ್ರಾಡೂನ್ (ಉತ್ತರಾಖಂಡ್​): ಉತ್ತರಾಖಂಡ ರಾಜ್ಯ ವಿಶಿಷ್ಟ ಜೀವವೈವಿಧ್ಯತೆಗೆ ಪ್ರಸಿದ್ಧಿ ಪಡೆದಿದೆ. ವಿಶ್ವದಲ್ಲಿ ಬೇರೆಲ್ಲೂ ಕಾಣಸಿಗದ ಅಪರೂಪದ ಜೀವಸಂಕುಲ ಇಲ್ಲಿನ ಪರ್ವತ ಶ್ರೇಣಿಗಳಲ್ಲಿದೆ. ಹೀಗಾಗಿಯೇ ಈ ಪ್ರದೇಶವನ್ನು ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯುವುದುಂಟು. ವಿಭಿನ್ನ ಜೀವರಾಶಿಗಳು ಕೂಡಾ ಉತ್ತರಕಾಶಿಯಲ್ಲಿ ಕಾಣಸಿಗುತ್ತವೆ. ಈ ಪ್ರದೇಶ ಸಮುದ್ರ ಮಟ್ಟದಿಂದ 14,200 ಅಡಿಗಳಷ್ಟು ಎತ್ತರದಲ್ಲಿದ್ದು, ಹಿಮದಿಂದ ಆವೃತವಾಗಿದೆ.

ಚಾರಣಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ‘ಬಂದರ್​ಪಂಚ್

ಉತ್ತರ ಕಾಶಿ ಜಿಲ್ಲೆಯ ಬಂದರ್​ಪಂಚ್ ಪರ್ವತವು ಪ್ರಸಿದ್ಧ ಸರೋವರ ದೋಡಿಟಲ್​​​​​ನಿಂದ 40 ಕಿಲೋ ಮೀಟರ್ ದೂರದಲ್ಲಿದ್ದು, ಇಲ್ಲಿಗೆ ತೆರಳಲು ಗುಡ್ಡ ಬೆಟ್ಟ ಹತ್ತಿಳಿಯುವುದು ಬಿಟ್ಟರೆ ಬೇರೆ ವಾಹನದ ವ್ಯವಸ್ಥೆ ಇಲ್ಲ. ಬಮ್ಸಾರಿ ಪರ್ವತ ಶ್ರೇಣಿಯ ತಪ್ಪಲಲ್ಲಿ ಬ್ರಹ್ಮಕಮಲ ಸೇರಿ ಅನೇಕ ಸುಂದರ ಹೂವುಗಳು ಅರಳುತ್ತವೆ. ಈ ದೃಶ್ಯ ಕಣ್ಣಿಗೆ ಹಬ್ಬವೆನಿಸುತ್ತದೆ. ಇದಾದ ಬಳಿಕ ಬಮ್ಸಾರಿ ಸರೋವರ ಎದುರಾಗುತ್ತದೆ.

ಸುಮಾರು 500 ಮೀಟರ್​ ಪ್ರದೇಶದಲ್ಲಿ ಹರಡಿರುವ ಈ ಸರೋವರವು ಭಾಗಶಃ ಮಂಜಿನಿಂದ ಆವೃತವಾಗಿರುತ್ತದೆ. ಈ ಸರೋವರದ ಕೆಳಗಿನಿಂದ ಬಂದರ್​​ಪಂಚ್​​​​ ಹಾಗೂ ಪೂರ್ವ-ಪಶ್ಚಿಮದಲ್ಲಿ ಮಂಜಿನಿಂದ ಆವೃತವಾಗಿರುವ ಪರ್ವತಗಳ ಸುಂದರ ನೋಟ ಸವಿಯಬಹುದು. ಯಮುನಾ ನದಿಯ ಉಪನದಿ ಹನುಮಾನ್ ಗಂಗಾ ಬಂದರ್​​​ಪಂಚ್​​ ಪರ್ವತದಲ್ಲಿ ಹುಟ್ಟಿಕೊಂಡಿದೆ.

ಬಮ್ಸಾರು ತಾಲ್ ಚಾರಣ ವೇಳೆ ವಿವಿಧ ಸಸ್ಯ ವರ್ಗಗಳನ್ನು ಕಣ್ತುಂಬಿಕೊಳ್ಳಬಹುದು. ಅಲ್ಲದೆ ವಿವಿಧ ಪ್ರಾಣಿಗಳನ್ನು ಈ ವೇಳೆ ಕಾಣಬಹುದು. ಬುರಾನ್ಸ್​, ಸಿಲ್ವರ್ ಮರಗಳು, ಡಿಯೋಡರ್ ಸೀಡರ್ ಮತ್ತು ಓಕ್ಸ್ ಮರಗಳಿಂದ ತುಂಬಿರುವ ದಟ್ಟ ಅರಣ್ಯ ಪ್ರದೇಶ ಸಹ ಎದುರಾಗುತ್ತದೆ. ಈ ಪ್ರದೇಶದಲ್ಲಿ ಹನುಮಾನ್ ಗಂಗಾ ಸೇರಿ ಹಲವು ಉಪನದಿಗಳು ಹುಟ್ಟಿ ಕಣಿವೆಗಳ ನಡುವೆ ಹರಿಯುತ್ತವೆ.

ಒಂದೇ ಸ್ಥಳದಲ್ಲಿ ಹಿಮ ಹೊದ್ದಿರುವ ಪರ್ವತಗಳು, ನದಿ, ಸರೋವರ ಜೊತೆಗೆ ದಟ್ಟ ಅರಣ್ಯ ಸೌಂದರ್ಯ ಸವಿಯಲು ಈ ಪ್ರದೇಶ ಉತ್ತಮವಾಗಿದೆ. ಹೀಗಾಗಿ ಈ ಪ್ರದೇಶವನ್ನ ದೇವಭೂಮಿ ಅಂತಲೂ ಕರೆಯಲಾಗುತ್ತದೆ. ಸ್ಥಳೀಯರು ಈ ಜಾಗವನ್ನು ಭೀಮತಾಲ್​ ಅಂತಲೂ ಕರೆಯುತ್ತಾರೆ. ನೀವು ಪರಿಸರದ ಆರಾಧಕರಾಗಿದ್ದರೆ ಈ ವೈವಿಧ್ಯಮಯ ಪ್ರದೇಶ್ಕಕೆ ಒಮ್ಮೆ ಭೇಟಿ ನೀಡಿ ಅದ್ಭುತ ಅನುಭವ ಪಡೆಯಿರಿ.

ABOUT THE AUTHOR

...view details