ಕರ್ನಾಟಕ

karnataka

ETV Bharat / bharat

ಕೆಲಸ ಜಾಸ್ತಿ-ವಿಶ್ರಾಂತಿ ಕಡಿಮೆ.. ವೃತ್ತಿನಿರತ ಮಹಿಳೆಯರಿಗೆ ಹೆರಿಗೆ ರಜೆಯ ಪ್ರಾಮುಖ್ಯತೆ ಗೊತ್ತೇ?

ಈಗಾಗಲೇ ಫಲವತ್ತತೆ ದರ ಕುಸಿಯುತ್ತಿದ್ದು, ಇದರತ್ತ ಗಮನ ಹರಿಸದಿದ್ದಲ್ಲಿ ಮತ್ತಷ್ಟು ಇಳಿಕೆಯಾಗಲಿದೆ. ಇದರ ಪ್ರಭಾವ ವ್ಯಕ್ತಿಯ ವೈಯಕ್ತಿಕ ಜೀವನಕ್ಕೆ ಸೀಮಿತವಾಗಿಲ್ಲ, ಆರ್ಥಿಕತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಅದಕ್ಕಾಗಿಯೇ ತಜ್ಞರು ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಹೆರಿಗೆ ರಜೆ ನೀಡಲು ಪ್ರಸ್ತಾಪಿಸುತ್ತಿದ್ದಾರೆ.

ಮಹಿಳೆಯರಿಗೆ ಹೆರಿಗೆ ರಜೆ
Reproductive Leave

By

Published : Nov 27, 2021, 6:11 PM IST

ಮನೆಯಲ್ಲಿ ಅಥವಾ ಕಚೇರಿಗಳಲ್ಲಿ ಕೆಲಸ ಮಾಡುವುದು, ಬೇರೆ ಬೇರೆ ಕ್ಷೇತ್ರದ ವೃತ್ತಿಯಲ್ಲಿ ತೊಡಗಿರುವುದು, ಇತರರ ಆರೈಕೆ ಮಾಡುವುದರ ಜೊತೆಗೆ ಮಕ್ಕಳಿಗೆ ಜನ್ಮ ನೀಡುವ ಮಹತ್ಕಾರ್ಯವನ್ನೂ ಮಹಿಳೆ ನಿಭಾಯಿಸುತ್ತಾಳೆ. ಇದರ ಸಮತೋಲನ ಕಾಪಾಡಲು ಆಕೆ ಅರೆಕಾಲಿಕ ಅಥವಾ ತಾತ್ಕಾಲಿಕ ಕೆಲಸ ಮಾಡಬೇಕಾಗುತ್ತದೆ. ಕಡಿಮೆ ಗಳಿಕೆಯಿಂದಾಗಿ ಲಿಂಗ ಸಮಾನತೆಯ ಮೇಲೆ ಪ್ರಭಾವ ಬೀರುತ್ತದೆ.

ಇಂತಹ ಸಂದರ್ಭದಲ್ಲಿ ಈಗ ಅನೇಕ ದೇಶಗಳಲ್ಲಿ, ವಿಶೇಷವಾಗಿ ಆಸ್ಟ್ರೇಲಿಯಾದಲ್ಲಿ ಕೋವಿಡ್​ ಸಾಂಕ್ರಾಮಿಕ, ಲಾಕ್​​ದಿಂದಾಗಿ ಮಹಿಳಾ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಹೀಗಾಗಿ ದಶಕಗಳ ನಂತರ ಉದ್ಯೋಗದಲ್ಲಿ ಮಹಿಳೆಯರ ಭಾಗವಹಿಸುವಿಕೆ ಕೂಡ ಕುಸಿಯಲು ಕಾರಣವಾಗಿದೆ.

ಇದನ್ನೂ ಓದಿ: ಮನುಷ್ಯನ ದೇಹದಲ್ಲಿವೆ ಶೃಂಗಾರ ಉತ್ತೇಜಿಸುವ ಹಾರ್ಮೋನ್​ಗಳು: ಇವು ಲವಲವಿಕೆಯಿಂದಿರಲೂ ಸಹಕಾರಿ

ಪರಿಸ್ಥಿತಿ ಹೀಗಿರುವಾಗ, ಪ್ರಸ್ತುತ ವೃತ್ತಿನಿರತ ಮಹಿಳೆಯರಿಗೆ ಹೆರಿಗೆ ರಜೆಗಳೂ ಸಿಗದಿದ್ದರೆ ಉದ್ಯೋಗ ಮಾಡುವ ಮಹಿಳೆಯರ ಸಂಖ್ಯೆ ಮತ್ತಷ್ಟು ಕಡಿಮೆಯಾಗಲಿದೆ. ಹೀಗಾಗಿ ಮಹಿಳೆಯರಿಗೆ ವಿಶ್ರಾಂತಿ-ಕೆಲಸಕ್ಕೆ ಪ್ರೋತ್ಸಾಹ ನೀಡಲು ಅವರಿಗೆ ಹೆರಿಗೆ ರಜೆ ಅತಿ ಮುಖ್ಯವಾಗಿದೆ.

ಮಾತೃತ್ವ ರಜೆ

ಹೆರಿಗೆ ರಜೆ ಅಥವಾ ಮಾತೃತ್ವ ರಜೆ, ಇದೇನು ಹೊಸ ಪರಿಕಲ್ಪನೆಯಲ್ಲ. ಭಾರತ, ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್‌ಡಮ್, ನ್ಯೂಜಿಲೆಂಡ್‌ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಅನೇಕ ವರ್ಷಗಳ ಹಿಂದಿನಿಂದಲೂ ಸರ್ಕಾರಿ ಉದ್ಯೋಗದಲ್ಲಿರುವ ಮಹಿಳೆಯರಿಗೆ ಹೆರಿಗೆ ಮೊದಲು ಹಾಗೂ ನಂತರದ ಅವಧಿಯಲ್ಲಿ ಬೇಕಾಗುವ ರಜೆಗಳನ್ನು ಸಂಬಳದೊಂದಿಗೆ ನೀಡಲಾಗುತ್ತದೆ. ಬಳಿಕ ಅನೇಕ ಖಾಸಗಿ ಸಂಸ್ಥೆಗಳೂ ಇದನ್ನು ಅಳವಡಿಸಿಕೊಂಡಿವೆ. ಅಷ್ಟೇ ಅಲ್ಲ, ಆಸ್ಟ್ರೇಲಿಯಾ ಮೂಲದ ಮೋಡಿಬೋಡಿ ಎಂಬ ಒಳಉಡುಪು ಕಂಪನಿಯು ಮುಟ್ಟಿನ ಸಮಯದಲ್ಲೂ ಮಹಿಳೆಯರಿಗೆ ರಜೆ ಘೋಷಿಸಿದೆ.

ಇದನ್ನೂ ಓದಿ: ಗರ್ಭಿಣಿಯರು ಒತ್ತಡ ಉಂಟಾದರೆ 'ಹೆರಿಗೆ ಶಿಕ್ಷಣ ತರಗತಿ' ಆಯ್ಕೆ ಮಾಡಿಕೊಳ್ಳಿ:ಟೆನ್ಷನ್​ ಫ್ರೀಯಾಗಿ

ಒಟ್ಟು ಫಲವತ್ತತೆ ದರ, ಮಕ್ಕಳ ಜನನ-ಮರಣದ ಪ್ರಮಾಣ ಸಮತೋಲನಕ್ಕೂ ಹೆರಿಗೆ ರಜೆ ಬಹಳ ಅವಶ್ಯವಾಗಿದೆ. ಮಗುವಿನ ಆರೋಗ್ಯ ಕಾಪಾಡಲು, ಆರೈಕೆ ಮಾಡಲು ಅತ್ಯವಶ್ಯಕ. ಆದರೆ ಇನ್ನೂ ಕೆಲ ದೇಶಗಳಲ್ಲಿ ಮಹಿಳೆಯರಿಗೆ ಈ ಸೌಲಭ್ಯ ಲಭ್ಯವಿಲ್ಲ. ಇದರ ಪರವಾಗಿ ಸ್ತ್ರೀವಾದಿಗಳು ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಇಂದು ನಾವು ಮಹಿಳೆಯರ ಬಗ್ಗೆ ಕಾಳಜಿ ವಹಿಸಿಲ್ಲವಾದರೆ ಭವಿಷ್ಯದಲ್ಲಿ ಫಲವತ್ತತೆ ದರ ಮತ್ತಷ್ಟು ಕುಸಿಯುತ್ತದೆ. ಇದು ಕುಟುಂಬಕ್ಕೆ, ಸಮಾಜಕ್ಕೆ, ದೇಶ ಹಾಗೂ ವಿಶ್ವದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ.

ABOUT THE AUTHOR

...view details