ಕರ್ನಾಟಕ

karnataka

ETV Bharat / bharat

ಪ್ರತಿ ದಿನ 27 ಕೋಟಿ ರೂ. ದಾನ... ದಾನಿಗಳಲ್ಲಿ ಅಗ್ರಸ್ಥಾನ ಪಡೆದ ವಿಪ್ರೋ ಸ್ಥಾಪಕ ಅಜೀಂ ಪ್ರೇಮ್​ಜಿ - ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್​ಜಿ

2020-21ನೇ ಆರ್ಥಿಕ ವರ್ಷದಲ್ಲಿ ದೇಶದ ಪ್ರಮುಖ ಸಾಫ್ಟವೇರ್ ಕಂಪನಿಗಳಲ್ಲಿ ಒಂದಾಗಿರುವ ಅಜೀಂ ಪ್ರೇಮ್​ಜಿ ದಾಖಲೆಯ 9,713 ಕೋಟಿ ರೂ. ದಾನದ ರೂಪದಲ್ಲಿ ನೀಡಿದ್ದಾರೆ.

azim-premji
azim-premji

By

Published : Oct 29, 2021, 4:44 AM IST

ಮುಂಬೈ:ದಾನ ಮಾಡುವುದರಲ್ಲಿ ದೇಶದಲ್ಲಿ ಅಗ್ರಸ್ಥಾನ ಪಡೆದುಕೊಂಡಿರುವ ಪ್ರಮುಖ ಸಾಫ್ಟವೇರ್ ಕಂಪನಿ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್​ಜಿ 2020-21ರಲ್ಲಿ ಒಟ್ಟು 9,713 ಕೋಟಿ ರೂ. ದೇಣಿಗೆ(ದಾನ) ರೂಪದಲ್ಲಿ ನೀಡಿದ್ದಾರೆ. ಅಂದರೆ ಪ್ರತಿ ದಿನ ಇವರು 27 ಕೋಟಿ ರೂ. ದಾನ ರೂಪದಲ್ಲಿ ನೀಡಿದ್ದಾರೆ.

ಎಡೆಲ್​ಗಿವ್ ಹುರುನ್​ ಇಂಡಿಯಾ ಫಿಲಾಂಥ್ರಪಿ ಪಟ್ಟಿ 2021ರ ಪ್ರಕಾರ, HCLನ ಶಿವ ನಾಡಾರ್ ದಾನಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್​ ಅಂಬಾನಿ ಮೂರನೇ ಸ್ಥಾನದಲ್ಲಿದ್ದಾರೆ.

ಸಾಂಕ್ರಾಮಿಕ ರೋಗ ಕೋವಿಡ್​ ಸಂದರ್ಭದಲ್ಲಿ ಅಜೀಂ ಪ್ರೇಮ್​ಜಿ ತಮ್ಮ ದಾನದ ಪ್ರಮಾಣ ನಾಲ್ಕನೇ ಒಂದರಷ್ಟು ಹೆಚ್ಚಳ ಮಾಡಿಕೊಂಡಿದ್ದು, HCLನ ಶಿವ ನಾಡಾರ್​​ 1,263 ಕೋಟಿ ರೂ. ದಾನ ರೂಪದಲ್ಲಿ ನೀಡಿದ್ದಾರೆ.

ಏಷ್ಯಾದ ಶ್ರೀಮಂತ ವ್ಯಕ್ತಿ ಮತ್ತು ರಿಲಯನ್ಸ್​ ಇಂಡಸ್ಟ್ರೀಸ್​ನ ಮುಖ್ಯಸ್ಥ ಮುಖೇಶ್ ಅಂಬಾನಿ 577 ಕೋಟಿ ರೂ. ದೇಣಿಗೆ ರೂಪದಲ್ಲಿ ನಿಡಿದ್ದು, ನಂತರದ ಸ್ಥಾನದಲ್ಲಿ ಕುಮಾರ್​ ಮಂಗಳಂ ಬಿರ್ಲಾ 377 ಕೋಟಿ ರೂ. ನೀಡಿ 4ನೇ ಸ್ಥಾನದಲ್ಲಿದ್ದಾರೆ.

ದೇಶದ ಎರಡನೇ ಅತಿ ಶ್ರೀಮಂತ ವ್ಯಕ್ತಿ ಅದಾನಿ ಸಮೂಹದ ಮುಖ್ಯಸ್ಥ ಗೌತಮ್​ ಅದಾನಿ ಅವರು, ವಿಪತ್ತು ಪರಿಹಾರಕ್ಕಾಗಿ 130 ಕೋಟಿ ರೂ. ದೇಣಿಗೆ ನೀಡಿದ್ದು, 8ನೇ ಸ್ಥಾನದಲ್ಲಿದ್ದಾರೆ. ಇನ್ಫೋಸಿಸ್​ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರು 183 ಕೋಟಿ ರೂ. ನೀಡಿ 5ನೇ ಸ್ಥಾನದಲ್ಲಿದ್ದಾರೆ.ಅಗ್ರ 10 ಸ್ಥಾನಗಳಲ್ಲಿ ಹಿಂದೂಜಾ ಕುಟುಂಬ, ಬಜಾಜ್​, ಅನಿಲ್​ ಅಗರ್ವಾಲ್​ ಹಾಗೂ ಬರ್ಮನ್​ ಕುಟುಂಬಗಳು ಸೇರಿವೆ.

For All Latest Updates

ABOUT THE AUTHOR

...view details