ಕರ್ನಾಟಕ

karnataka

ETV Bharat / bharat

ಪ್ರತಿಷ್ಠಿತ ಮಾಲ್‌ನಲ್ಲಿ ಪುಸ್ತಕ ಓದಲು ಬಿಡಲಿಲ್ಲ: ಸಮಾಜಶಾಸ್ತ್ರಜ್ಞ ಸಾಲ್ವಟೋರ್ ಬಾಬೋನ್ಸ್ ಅಸಮಾಧಾನ

ಆಸ್ಟ್ರೇಲಿಯಾದ ಸಮಾಜಶಾಸ್ತ್ರಜ್ಞ ಸಾಲ್ವಟೋರ್ ಬಾಬೋನ್ಸ್ ಅವರು ಲಖನೌದ ಲುಲು ಮಾಲ್‌ನ ಫುಡ್ ಕೋರ್ಟ್‌ನಲ್ಲಿ ಪುಸ್ತಕ ಓದದಂತೆ ತಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಸಮಾಜಶಾಸ್ತ್ರಜ್ಞ ಸಾಲ್ವಟೋರ್ ಬಾಬೋನ್ಸ್
ಸಮಾಜಶಾಸ್ತ್ರಜ್ಞ ಸಾಲ್ವಟೋರ್ ಬಾಬೋನ್ಸ್

By

Published : Feb 15, 2023, 9:10 PM IST

Updated : Feb 15, 2023, 9:21 PM IST

ಲಖನೌ (ಉತ್ತರ ಪ್ರದೇಶ) : ಲಖನೌದ ಲುಲು ಮಾಲ್‌ನ ಫುಡ್ ಕೋರ್ಟ್‌ನಲ್ಲಿ ಪುಸ್ತಕ ಓದದಂತೆ ತಡೆದಿದ್ದಾರೆ ಎಂದು ಆಸ್ಟ್ರೇಲಿಯಾದ ಸಮಾಜಶಾಸ್ತ್ರಜ್ಞ ಸಾಲ್ವಟೋರ್ ಬಾಬೋನ್ಸ್ ಆರೋಪಿಸಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿಡ್ನಿ ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಸಾಲ್ವಟೋರ್ ಅವರು G20 ರಾಷ್ಟ್ರಗಳ ಪ್ರತಿನಿಧಿಗಳಲ್ಲಿ ಒಬ್ಬರಾಗಿದ್ದಾರೆ.

ಲುಲು ಮಾಲ್‌

'ನನಗೆ ಲಖನೌದಲ್ಲಿ @LuLu_Mall ಸೆಕ್ಯುರಿಟಿಯವರು ಪುಸ್ತಕವನ್ನು ಓದಲು ಅನುಮತಿಸಿಲ್ಲ ಎಂದು ಸಾಲ್ವಟೋರ್ ಅವರು ಟ್ವೀಟ್​ ಮಾಡಿದ್ದರು. ಅಲ್ಲದೇ ಪುಸ್ತಕದ ಪೋಟೋವನ್ನು ತೆಗೆಯಲು ಕೂಡಾ ಅನುಮತಿಸಲಿಲ್ಲ. ಏನು ಫಿಲಿಷ್ಟಿಯನ್ಸ್​? ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ ಅವರು 'ಮಾಲ್‌ನಲ್ಲಿ ಯಾವುದೇ ಧಾರ್ಮಿಕ ಪ್ರಾರ್ಥನೆಯನ್ನು ಮಾಡಲು ಅನುಮತಿಸಲಾಗುವುದಿಲ್ಲ' ಎಂದು ಬರೆಯಲಾದ ಸೈನ್‌ಬೋರ್ಡ್‌ನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಅದನ್ನು ಹಂಚಿಕೊಳ್ಳುತ್ತಾ, 'ಇಲ್ಲಿ ಪ್ರಾರ್ಥನೆಗೆ ಅವಕಾಶವೂ ಇಲ್ಲ. ಹೀಗಾಗಿ, ನನಗೆ ಉತ್ತಮ ಮಾಲ್​ನ ಅಗತ್ಯವಿದೆ' ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಹೀಗೆ ಸಾಲ್ವಟೋರ್​ ಅವರು ಟ್ವೀಟ್​ ಮಾಡುತ್ತಿದ್ದಂತೆ, ಇದಕ್ಕೆ ಸೋಷಿಯಲ್ ಮೀಡಿಯಾ ಬಳಕೆದಾರರು ಸಾಕಷ್ಟು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವರು ಮಾಲ್ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಇತರರು ಸಾಲ್ವಟೋರ್ ಅವರು ಮಾಲ್‌ನಲ್ಲಿ ಪುಸ್ತಕಗಳನ್ನು ಓದಿದ್ದಾರೆ ಮತ್ತು ಅಂತಹ ಯಾವುದೇ ಸಮಸ್ಯೆಯನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಇನ್ನು ಕೆಲವರು ಬಹುಶಃ ನೀವು ಮ್ಯಾನೇಜಿಂಗ್ ಟೀಮ್‌ನಿಂದ ಬಂದವರಲ್ಲ ಎಂದು ಹೇಳಿದ್ದಾರೆ. 'ನಾನು ಕೋಸ್ಟಾದಲ್ಲಿ ಕೆಳಗೆ ಕುಳಿತು ಹಲವಾರು ಬಾರಿ ಪುಸ್ತಕಗಳನ್ನು ಓದಿದ್ದೇನೆ. ನನ್ನ ಲ್ಯಾಪ್‌ಟಾಪ್‌ನಲ್ಲಿಯೂ ಕೆಲಸ ಮಾಡಿದ್ದೇನೆ' ಎಂದು ಸೋಶಿಯಲ್​ ಮೀಡಿಯಾ ಬಳಕೆದಾರ ತರುಕಾ ಶ್ರೀವಾಸ್ತವ ಕಾಮೆಂಟ್ ಮಾಡಿದ್ದಾರೆ.

ಅವರು ಓದಲು ಅನುಮತಿಸಿಲ್ಲ : ತರುಕಾಗೆ ಪ್ರತ್ಯುತ್ತರವಾಗಿ ಸಾಲ್ವಟೋರ್ ಅವರು ಪ್ರತಿಕ್ರಿಯಿಸಿ, 'ಹೌದು, @CostaCoffeeInd ಓದುವುದನ್ನು ಅನುಮತಿಸುತ್ತದೆ. ಆದರೆ, @LuLu_Mall ಫುಡ್ ಕೋರ್ಟ್ ಅನುಮತಿಸುವುದಿಲ್ಲ' ಎಂದಿದ್ದಾರೆ. ಅದಕ್ಕೆ ಪ್ರತ್ಯುತ್ತರ ನೀಡುತ್ತಾ, ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದು, ಜನರು ಅನಿರ್ದಿಷ್ಟವಾಗಿ ಫುಡ್ ಕೋರ್ಟ್ ಆಸನಗಳನ್ನು ಆಕ್ರಮಿಸಿಕೊಳ್ಳುವುದನ್ನು ಅವರು ಬಯಸುವುದಿಲ್ಲ. ಹೀಗಾಗಿ ಅವರು ಓದಲು ಅನುಮತಿಸಿಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಈ ಹಿಂದೆ ಕೆಲವರು ನಮಾಜ್ ಮಾಡಿದ ನಂತರ ಮಾಲ್ ಹೇಗೆ ಸುದ್ದಿಯಲ್ಲಿತ್ತು ಎಂಬುದನ್ನು ಮತ್ತೊಬ್ಬ ಬಳಕೆದಾರರು ಹೈಲೈಟ್ ಮಾಡಿದ್ದಾರೆ. ಇದನ್ನು ಅನುಸರಿಸಿ ಅಧಿಕಾರಿಗಳು ಮಾಲ್ ಒಳಗೆ ಯಾವುದೇ ಧಾರ್ಮಿಕ ಪ್ರಾರ್ಥನೆಗಳನ್ನು ಮಾಡದಂತೆ ನಿಷೇಧಿಸಿದರು. 'ಕೆಲವರು ಮಾಲ್‌ನಲ್ಲಿ ನಮಾಜ್ ಓದುತ್ತಿರುವ ಹಿಂದಿನ ಘಟನೆಗಳಿಂದಾಗಿ ಅವರು ಈ ನಿಯಮವನ್ನು ತಳ್ಳಿಹಾಕಿರಬಹುದು. ಆದರೆ, ಪುಸ್ತಕವನ್ನು ಓದುವುದು ಯಾರನ್ನಾದರೂ ಹೇಗೆ ಅಪರಾಧ ಮಾಡುತ್ತದೆ? ಎಂದು ನನಗೆ ಖಚಿತವಿಲ್ಲ' ಎಂದು ಗಾಯತ್ರಿ ಎಂಬುವವರು ಕಾಮೆಂಟ್​ ಮಾಡಿದ್ದಾರೆ.

ಕ್ಯಾಂಪಸ್‌ನಲ್ಲಿ ಧಾರ್ಮಿಕ ಪ್ರಾರ್ಥನೆ ನಿಷೇಧ: ಜುಲೈನಲ್ಲಿ ಮಾಲ್‌ನಲ್ಲಿ ಕೆಲವು ಜನ ನಮಾಜ್ ಮಾಡಿದ್ದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕೆಲವರ ಕೋಪಕ್ಕೆ ಕಾರಣವಾಗಿತ್ತು. ಹೀಗಾಗಿ, ಪೊಲೀಸರು ಪ್ರಾರ್ಥನೆ ಸಲ್ಲಿಸಿದವರಲ್ಲಿ ಐವರನ್ನು ಬಂಧಿಸಿದ್ದರು. ಘಟನೆಯ ನಂತರ ಮಾಲ್ ಅಧಿಕಾರಿಗಳು ಕ್ಯಾಂಪಸ್‌ನಲ್ಲಿ ಧಾರ್ಮಿಕ ಪ್ರಾರ್ಥನೆಗಳನ್ನು ನಿಷೇಧಿಸಿದ್ದರು.

ಸಾಲ್ವಟೋರ್ ಜಿ-20 ಶೃಂಗಸಭೆಗಾಗಿ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಅವರು ಲಕ್ನೋ ಮತ್ತು ವಾರಣಾಸಿಗೆ ಭೇಟಿ ನೀಡಿದ್ದು, ಅವರ ಟ್ವಿಟ್ಟರ್ ಪೋಸ್ಟ್‌ಗಳಲ್ಲಿ ಅವರು ಲಕ್ನೋದ ಚಾಟ್ ಮತ್ತು ವಾರಣಾಸಿಯ ರುಚಿಕರವಾದ ಆಹಾರವನ್ನು ಶ್ಲಾಘಿಸಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ, ಅವರು ಲಖನೌದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಪಿಎಂ ನರೇಂದ್ರ ಮೋದಿ ಅವರ ಪೋಸ್ಟರ್‌ನ ಮುಂದೆ ತಮ್ಮ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ :ಶರದ್​ ಪವಾರ್​ ಆಪ್ತ ಉದ್ಯಮಿ ಅನಿರುದ್​ ದೇಶಪಾಂಡೆ ಕಚೇರಿ ಮೇಲೆ ಐಟಿ ದಾಳಿ..

Last Updated : Feb 15, 2023, 9:21 PM IST

ABOUT THE AUTHOR

...view details