ಅನ್ನಮಯ್ಯ, ಆಂಧ್ರಪ್ರದೇಶ:ಅತ್ತೆಯೊಬ್ಬಳು ಸೊಸೆಯ ತಲೆ ಕಡಿದು ಪೊಲೀಸ್ ಠಾಣೆಗೆ ತೆಗೆದುಕೊಂಡ ಭಯಾನಕ ಘಟನೆ ನಡೆದಿರುವುದು ರಾಯಚೋಟಿಯಲ್ಲಿ ಬೆಳಕಿಗೆ ಬಂದಿದೆ. ಕೌಟುಂಬಿಕ ಕಲಹ ಹಾಗೂ ಆಸ್ತಿ ವಿವಾದವೇ ಘಟನೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಅನ್ನಮಯ ಜಿಲ್ಲಾ ಕೇಂದ್ರ ರಾಯಚೋಟಿಯಲ್ಲಿ ಭೀಕರ ಕೊಲೆ ನಡೆದಿದೆ. ರಾಯಚೋಟಿಯ ಕೆ.ರಾಮಾಪುರಂ ಪ್ರದೇಶದಲ್ಲಿ ವಾಸವಿದ್ದ ವಸುಂಧರಾ ಅವರನ್ನು ಆಕೆಯ ಸ್ವಂತ ಅತ್ತೆಯ ಸಹೋದರಿ ಸುಬ್ಬಮ್ಮ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಗುರುವಾರ ಮಧ್ಯಾಹ್ನ ಸೊಸೆಯನ್ನು ಮನೆಗೆ ಕರೆದ ಅತ್ತೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಸೇರಿ ಚಾಕು ಮತ್ತು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ವಸುಂಧರಾ ಅವರ ರುಂಡ ಮತ್ತು ಮುಂಡವನ್ನು ಕ್ರೂರವಾಗಿ ಕತ್ತರಿಸಿ ಬೇರ್ಪಡಿಸಿದ್ದಾರೆ. ಬಳಿಕ ವಸುಂಧರಾ ತಲೆ ಹಿಡಿದು ಠಾಣೆಗೆ ತೆರಳಿದ್ದಾರೆ. ಆ ನಂತರ ಪೊಲೀಸರ ಸೂಚನೆ ಮೇರೆಗೆ ಮನೆಗೆ ಮರಳಿ ಅತ್ತೆ ಸುಬ್ಬಮ್ಮ ಶವದ ಬಳಿ ತಲೆ ಇಟ್ಟಿದ್ದಾರೆ.
ಈ ಭೀಕರ ಹತ್ಯೆಯಿಂದ ತಾಯಿ ವಸುಂಧರಾನನ್ನು ಕಳೆದುಕೊಂಡ ಇಬ್ಬರು ಮಕ್ಕಳು ಕಣ್ಣೀರು ಹಾಕಿದ್ದಾರೆ. ಆಸ್ತಿಗಾಗಿ ತಾಯಿಯ ಕೊಲೆ ನಡೆದಿದೆ. ಈಗಾಗಲೇ ತಂದೆಯನ್ನು ಕಳೆದುಕೊಂಡಿದ್ದು, ಈಗ ತಾಯಿಯನ್ನೂ ಕಳೆದುಕೊಂಡು ಅನಾಥರಾಗಿದ್ದೇವೆ ಎಂದು ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತು. ಈಗ ನಮಗೆ ದಿಕ್ಕು ಯಾರೆಂದು ಪ್ರಶ್ನಿಸುತ್ತಿದ್ದ ಆ ಮಕ್ಕಳನ್ನು ಸಾಂತ್ವನ ಮಾಡಲು ಯಾರಿಂದಲೂ ಸಾಧ್ಯವಾಗಲಿಲ್ಲ. ಡಿಎಸ್ಪಿ ಶ್ರೀಧರ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ಕೊಲೆ ನಡೆದ ಮನೆಯನ್ನು ಪರಿಶೀಲಿಸಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.