ಮೇಷ:ಆರಂಭಿಸಿದ ಕಾರ್ಯಗಳಲ್ಲಿದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಅಪಾಯಗಳು ದೂರವಾಗುತ್ತವೆ. ಎಚ್ಚರಿಕೆಯಿಂದ ಮಾತನಾಡಿ. ಅಷ್ಟಲಕ್ಷ್ಮಿ ಸ್ತೋತ್ರ ಓದುವುದು ಒಳಿತು.
ವೃಷಭ:ಈಗಾಗಲೇ ಆರಂಭಿಸಿರುವ ಕೆಲಸಗಳಲ್ಲಿ ಅಡೆತಡೆಗಳು ಎದುರಾದರೂ ನಿವಾರಿಸಲು ಪ್ರಯತ್ನಿಸುತ್ತೀರಿ. ಇತರರ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದಿರುವುದು ಉತ್ತಮ. ಲಕ್ಷ್ಮೀ ಸ್ತುತಿ ಓದುವುದು ಶ್ರೇಯಸ್ಕರ.
ಮಿಥುನ: ಉತ್ಸಾಹದಿಂದ ಕೆಲಸ ಮಾಡುತ್ತೀರಿ. ಬಂಧುಗಳ ಸಹಕಾರ ದೊರೆಯುವುದು. ಎಲ್ಲ ವಿಷಯವನ್ನು ಕುಟುಂಬದೊಂದಿಗೆ ಚರ್ಚಿಸುವ ಮೂಲಕ ಪ್ರಾರಂಭಿಸಿ. ಲಕ್ಷ್ಮೀ ಸಹಸ್ರನಾಮ ಓದಿದರೆ ಶುಭಫಲ.
ಕರ್ಕಾಟಕ: ಪ್ರಾರಂಭಿಸಿದ ಕಾರ್ಯಗಳಲ್ಲಿ ಚಿಕ್ಕ ಸಮಸ್ಯೆಗಳು ಎದುರಾದ್ರೂ ಪೂರ್ಣಗೊಳಿಸುತ್ತೀರಿ. ನಿಮ್ಮ ಧೈರ್ಯವೇ ನಿಮ್ಮನ್ನು ಗೆಲ್ಲಿಸುತ್ತದೆ. ಕೆಲವು ಪರಿಸ್ಥಿತಿಗಳು ನಿಮ್ಮನ್ನು ನಿರುತ್ಸಾಹಗೊಳಿಸಬಹುದು. ಕೆಲವು ವ್ಯವಹಾರಗಳಲ್ಲಿ ಬುದ್ದಿಯಿಂದ ವ್ಯವಹರಿಸಿ. ವಿಷ್ಣುನಾಮ ಸ್ಮರಣ ಮಾಡಿ.
ಸಿಂಹ: ಒಂದು ಪ್ರಮುಖ ವಿಷಯದಲ್ಲಿ ನೀವು ನಿರೀಕ್ಷಿಸುವುದಕ್ಕಿಂತ ಹೆಚ್ಚಿನ ಪ್ರಗತಿ ಹೊಂದುತ್ತೀರಿ. ನಿಮ್ಮ ಅಭಿವೃದ್ಧಿಯ ಬಗ್ಗೆ ಒಳ್ಳೆಯ ಸುದ್ದಿ ಕೇಳುತ್ತೀರಿ. ಪ್ರಾರಂಭಿಸಿದ ಕಾರ್ಯಗಳಲ್ಲಿ ಕೆಲವು ತೊಂದರೆಗಳು ಎದುರಾದರೂ ಆ ಕಾರ್ಯ ಸಂಪನ್ನವಾಗುತ್ತದೆ. ಲಕ್ಷ್ಮೀದೇವಿ ಸ್ತೋತ್ರವನ್ನು ಓದುವುದು ಇನ್ನೂ ಉತ್ತಮ.
ಕನ್ಯಾ:ನೀವು ನಿಮ್ಮ ಸ್ವಂತ ಕ್ಷೇತ್ರಗಳಲ್ಲಿ ಆಲೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಸಂಬಂಧಿಕರೊಂದಿಗೆ ವೈರತ್ವ ಬೆಳೆಯುವ ಸಾಧ್ಯತೆಯಿದೆ. ಮನಸ್ತಾಪ, ಶ್ರಮ ಹೆಚ್ಚಾಗುತ್ತದೆ. ಗಣಪತಿ ಪೂಜಿಸುವುದರಿಂದ ಇನ್ನೂ ಉತ್ತಮ ಫಲಿತಾಂಶ ದೊರೆಯುತ್ತದೆ.