ಕರ್ನಾಟಕ

karnataka

ETV Bharat / bharat

ಗುರುವಾರದ ಭವಿಷ್ಯ.. ಈ ದಿನದ ನಿಮ್ಮ ರಾಶಿಫಲ ಹೀಗಿದೆ! - ರಾಶಿಫಲ ಸುದ್ದಿ

ನಿಮ್ಮ ಪರವಾಗಿ ನಕ್ಷತ್ರಗಳು ಸಾಲಾಗಿ ನಿಂತಿದ್ದಾವೆ ಎಂಬುದರ ಬಗ್ಗೆ ನೀವು ತಿಳಿಯಬೇಕೆ?... ಹಾಗಾದ್ರೆ ನಕ್ಷತ್ರಗಳು ಮತ್ತು ಗ್ರಹಗಳು ನಿಮ್ಮ ದಿನದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಇಂದಿನ ಜಾತಕ ಈಟಿವಿ ಭಾರತ ಕರ್ನಾಟಕದಲ್ಲಿ ಓದಿ...

Astrological predictions, Astrological predictions for July 15 2021, horoscope predictions for July 15 2021, horoscope predictions, horoscope news, ಇಂದಿನ ರಾಶಿಫಲ, ಗುರುವಾರದ ಭವಿಷ್ಯ, ಈ ದಿನದ ನಿಮ್ಮ ರಾಶಿಫಲ ತಿಳಿಯಿರಿ, 15 ಜುಲೈ 2021ರ ರಾಶಿಫಲ ತಿಳಿಯಿರಿ, ರಾಶಿಫಲ ಸುದ್ದಿ,
ಗುರವಾರದ ರಾಶಿಫಲ

By

Published : Jul 15, 2021, 7:25 AM IST

ಗುರವಾರದ ರಾಶಿಫಲ

ಮೇಷ:ನೀವು ಮೈದಾಸನಂತೆ ಭಾವಿಸುತ್ತಿದ್ದೀರಿ. ಆದರೆ ನೆನಪಿನಲ್ಲಿಟ್ಟುಕೊಳ್ಳಿ. ಹೊಳೆಯುವುದೆಲ್ಲ ಚಿನ್ನವಲ್ಲ. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಅವರನ್ನು ಸಂತೋಷಪಡಿಸಲು ಕೊಂಚ ಕಾಲ ಕಳೆಯಬೇಕು. ಅಲ್ಲದೆ ಇದು ನಿಮ್ಮ ಯಶಸ್ಸಿಗೆ ಕೊಡುಗೆ ನೀಡಿದವರನ್ನು ಗುರುತಿಸಿದರೆ ನೆರವಾಗುತ್ತದೆ. ನಿಮಗೆ ಮಕ್ಕಳಿದ್ದರೆ ಅವರಿಗೆ ಅವರ ಸಾಂಟಾ ಕ್ಲಾಸ್ ಆಗುವ ಸಮಯ!

ಗುರವಾರದ ರಾಶಿಫಲ

ವೃಷಭ: ನಿರ್ವಾಹಕರು ಮತ್ತು ಆಡಳಿತಗಾರರಿಗೆ ಅತ್ಯಂತ ಲಾಭದಾಯಕ ದಿನವಾಗಿದೆ. ಅವರು, ತಮ್ಮ ಕಿರಿಯ ಸಹೋದ್ಯೋಗಿಗಳಿಂದ ಹೆಚ್ಚೇನೂ ನಿರೀಕ್ಷೆ ಮಾಡುವುದಿಲ್ಲ. ಹಾಗೆ ಮಾಡುವುದು ಮಹತ್ತರ ನಿರಾಸೆ ಮತ್ತು ಆತಂಕ ತರುತ್ತದೆ. ದಿನದ ನಂತರದಲ್ಲಿ ನೀವು ವಿದೇಶದಿಂದ ಕೆಲ ಉತ್ಸಾಹದ ಮತ್ತು ಉತ್ತೇಜನದ ಸುದ್ದಿ ಕೇಳಬಹುದು.

ಗುರವಾರದ ರಾಶಿಫಲ

ಮಿಥುನ: ನಿಮ್ಮ ದೈನಂದಿನ ಕಾರ್ಯ ಚಟುವಟಿಕೆಗಳಿಂದ ಬಿಡುವು ಪಡೆಯಬೇಕೆಂದು ಬಯಸುತ್ತೀರಿ. ನೀವು ಒಂದೇ ಸಲಕ್ಕೆ ಎಲ್ಲ ಕೆಲಸಗಳನ್ನೂ ಪೂರ್ಣಗೊಳಿಸುತ್ತೀರಿ. ಮತ್ತು ಇದು ಮಾನಸಿಕ ಒತ್ತಡ ಮತ್ತು ಆತಂಕಕ್ಕೆ ಕಾರಣವಾಗುತ್ತದೆ. ನೀವು ದಿನದ ನಂತರದಲ್ಲಿ ನಿಮ್ಮ ವೈಯಕ್ತಿಕ ವಿಷಯಗಳಿಗೆ ಗಮನ ನೀಡಲು ಸಾಧ್ಯವಾಗುತ್ತದೆ, ಮಧ್ಯಾಹ್ನ ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಒತ್ತಡದಲ್ಲಿರುತ್ತೀರಿ. ನಿಮ್ಮ ವೃತ್ತಿಯ ಗುರಿಸಾಧನೆಗಳಲ್ಲಿ ನೀವು ನಿಮ್ಮ ಕುಟುಂಬವನ್ನು ನಿರ್ಲಕ್ಷಿಸುವುದಿಲ್ಲ ಎಂದು ದೃಢಪಡಿಸಿಕೊಳ್ಳಿ.

ಗುರವಾರದ ರಾಶಿಫಲ

ಕರ್ಕಾಟಕ:ಹೆಸರು ಮತ್ತು ಖ್ಯಾತಿ ಪಡೆಯುವ ನಿಮ್ಮ ಕನಸು ನನಸಾಗಲಿದೆ. ನೀವು ವ್ಯವಸ್ಥಿತ ಯೋಜನೆಯ ಮೂಲಕ ನಿಮ್ಮ ಕಾರ್ಯವನ್ನು ಪೂರ್ಣಗಳಿಸುತ್ತೀರಿ. ಸರ್ವಶಕ್ತನು ನಿಮಗೆ ಪ್ರತಿ ಪ್ರಯತ್ನದಲ್ಲೂ ಯಶಸ್ಸನ್ನು ಕರುಣಿಸಿದ್ದಾನೆ.

ಗುರವಾರದ ರಾಶಿಫಲ

ಸಿಂಹ: ನೀವು ಅತ್ಯಂತ ಆನಂದದ ಮನಸ್ಥಿತಿಯಲ್ಲಿದ್ದೀರಿ. ನೀವು ಶಕ್ತಿ ಮತ್ತು ಉತ್ಸಾಹದಲ್ಲಿ ಎಲ್ಲ ಕೆಲಸಗಳನ್ನೂ ಪೂರ್ಣಗೊಳಿಸುತ್ತೀರಿ. ಬಾಕಿ ಇರುವ ಕೆಲಸಗಳು ಇಂದು ಪೂರ್ಣಗೊಳ್ಳುತ್ತವೆ, ಮತ್ತು ನಿಮ್ಮ ದಿನಚರಿಯ ಕೆಲಸಗಳು ಕೂಡಾ ಕ್ಷಣದಲ್ಲಿ ಮುಗಿಯುತ್ತವೆ. ಬೆಳಿಗ್ಗೆ ನೀವು ಎಲ್ಲ ಕೆಲಸಗಳನ್ನೂ ಬೇಗನೆ ಮುಗಿಸುತ್ತೀರಿ, ಆದರೆ ದಿನದ ನಂತರದಲ್ಲಿ ನೀವು ಹೆಚ್ಚು ವಿವೇಚನೆಯ ವಿಧಾನ ಅಳವಡಿಸಿಕೊಳ್ಳುತ್ತೀರಿ.

ಗುರವಾರದ ರಾಶಿಫಲ

ಕನ್ಯಾ: ಮಹಿಳೆಯರು ಅಡುಗೆಮನೆ ಹಾಗೂ ಭೋಜನ ಸಮಯದಲ್ಲಿ ಕೂಡಾ ಆನಂದ ಕಾಣುತ್ತಾರೆ. ಸಂಜೆಯಲ್ಲಿ ನಿಮ್ಮ ಆತ್ಮೀಯ ಮಿತ್ರರು ಹಾಗೂ ಬಂಧುಗಳಿಗೆ ಭೋಜನಕೂಟ ಮತ್ತು ಪಾನಗೋಷ್ಠಿಯನ್ನೂ ಆಯೋಜಿಸಬಹುದು. ನೀವು ನಿಮ್ಮ ಪ್ರೀತಿಸಿದವರೊಂದಿಗೆ ಅತ್ಯಂತ ಪ್ರಣಯದ ಭಾವನೆ ಹೊಂದುತ್ತೀರಿ, ಮತ್ತು ಆತ/ಆಕೆ ತಲೆ ಕೆಡಿಸಿಕೊಳ್ಳುವುದಿಲ್ಲ.

ಗುರವಾರದ ರಾಶಿಫಲ

ತುಲಾ:ನೀವು ಕೆಲಸ ಮತ್ತು ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮುಳುಗಿಹೋಗುತ್ತೀರಿ ಮತ್ತು ನಿಮ್ಮ ಕುಟುಂಬ ಸದಸ್ಯರಿಗೆ ಗಮನ ನೀಡಲು ಸಾಧ್ಯವಾಗುವುದಿಲ್ಲ. ಜಾಹೀರಾತು ಮತ್ತು ಮಾರ್ಕೆಟಿಂಗ್ ವೃತ್ತಿಪರರಿಗೆ ಇದು ಒಳ್ಳೆಯ ಸಮಯ. ಈ ದಿನ ಒಳ್ಳೆಯ ದಿನವಾಗಿದ್ದು ಕನಿಷ್ಠ ಪ್ರಯತ್ನಗಳಿಂದ ಗರಿಷ್ಠ ಮಟ್ಟ ಸಾಧಿಸಿ.

ಗುರವಾರದ ರಾಶಿಫಲ

ವೃಶ್ಚಿಕ:ನೀವು ನೋಡುವುದನ್ನು ಮಾತ್ರ ನಂಬಿರಿ ಮತ್ತು ಗೊಂದಲಗಳು ಮತ್ತು ತಿಕ್ಕಾಟಗಳನ್ನು ತಪ್ಪಿಸಿ. ನಿಮ್ಮ ಕಣ್ಣುಗಳು ಹಾಗೂ ಕಿವಿಗಳನ್ನು ತೆರೆದಿಡಿ, ಇದರಿಂದ ನೀವು ನಿಮ್ಮ ಸುತ್ತಲೂ ನಡೆಯುವ ಪ್ರಮುಖ ಆಗುಹೋಗುಗಳನ್ನು ತಪ್ಪಿಸಿಕೊಳ್ಳುವುದಿಲ್ಲ.

ಗುರವಾರದ ರಾಶಿಫಲ

ಧನು:ಇದು ವ್ಯಾಪಾರಿಗಳಿಗೆ ಅತ್ಯಂತ ಲಾಭದಾಯಕ ದಿನ. ನೀವು ಕಾಯುತ್ತಿದ್ದ ಸಾಲ ಈಗ ಬಿಡುಗಡೆಯಾಗುವುದರಿಂದ ನಿಮ್ಮ ಕನಸನ್ನು ಜೀವಿಸಲು ಇದು ಸಕಾಲ. ನಿಮ್ಮ ಪ್ರೀತಿಪಾತ್ರರೊಂದಿಗೆ ನೀವು ನಿಮ್ಮ ಪ್ರಿಯರನ್ನೂ ವಿಶೇಷವಾಗಿ ಭಾವಿಸುವಂತೆ ಮಾಡುತ್ತೀರಿ. ನೀವು ಒಟ್ಟಿಗೆ ಕಾಲ ಕಳೆದ ಸ್ಮರಣೆಗಳು ಎಂದುಗೂ ಉಳಿಯುವಂತೆ ಮಾಡಿಕೊಳ್ಳಿ.

ಗುರವಾರದ ರಾಶಿಫಲ

ಮಕರ:ನೀವು ಫೈಲುಗಳ ರಾಶಿಯಲ್ಲಿ ಕಳೆದುಹೋಗಿದ್ದೀರಿ, ಮತ್ತು ಅತ್ಯಂತ ಪ್ರಯತ್ನಿಸಿದ ಹಾಗೂ ಪರೀಕ್ಷಿಸಿದ ಸೂತ್ರ-ಧ್ಯಾನ ನಿಮಗೆ ನಿಮ್ಮ ಮನಸ್ಸಿನಿಂದ ಒತ್ತಡ ಹೊರಹಾಕಲು ಹಾಗೂ ದಾರಿ ಕಂಡುಕೊಳ್ಳಲು ನೆರವಾಗುತ್ತದೆ. ಪ್ರತಿಯೊಂದು ಕೂಡಾ ಮಂದ ಹಾಗೂ ಶುಷ್ಕವಾಗಿರುತ್ತದೆ. ಕಾರು ಅಥವಾ ಮನೆ ಕೊಳ್ಳಲು ಇದು ಅನುಕೂಲಕರ ದಿನವಾಗಿದೆ. ನೀವು ಹೊಸ ಮನೆಗೆ ಬದಲಾಗುವ ಸಾಧ್ಯತೆಯೂ ಇದೆ.

ಗುರವಾರದ ರಾಶಿಫಲ

ಕುಂಭ:ನೀವು ಇಂದು ಅತ್ಯಂತ ಅನಿರೀಕ್ಷಿತವಾಗಿರುತ್ತೀರಿ. ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ಚಲನೆಗಳನ್ನು ಕಂಡುಕೊಳ್ಳಲು ಶಕ್ತರಾಗುತ್ತಾರೆ ಮತ್ತು ಸ್ಪರ್ಧೆ ತೀವ್ರವಾಗಿರುವಾಗ, ಅಂತಹ ಅನಿರೀಕ್ಷಿತತೆ ನಿಮಗೆ ಮೇಲುಗೈಯಾಗಿಸುತ್ತದೆ. ಕೆಲಸದಲ್ಲಿ ನಿಮ್ಮ ಪ್ರಾಮಾಣಿಕತೆ ಮತ್ತು ಪ್ರಯತ್ನಗಳನ್ನು ಶ್ಲಾಘನೆ ಹಾಗೂ ಪುರಸ್ಕರಿಸಲಾಗುತ್ತದೆ. ನೀವು ಏನು ಮಾಡಬೇಕೋ ಅದನ್ನು ಮಾಡಿದ್ದೀರಿ, ಈಗ ಕೊಂಚ ಕಾಲ ವಿಶ್ರಾಂತಿ ಪಡೆದುಕೊಳ್ಳಿ ಮತ್ತು ಹೊಸದಿನಕ್ಕೆ ಸಿದ್ಧತೆ ಮಾಡಿಕೊಳ್ಳಿ.

ಗುರವಾರದ ರಾಶಿಫಲ

ಮೀನ: ದಿನದ ಮೊದಲರ್ಧ ನೀವು ನಿಮ್ಮ ಸಾಮಾಜಿಕ ಹೊಣೆಗಾರಿಕೆಗಳನ್ನು ಪೂರೈಸಲು ಮತ್ತು ನಿಮ್ಮ ದೈನಂದಿನ ಕಾರ್ಯಕ್ರಮಗಳನ್ನು ಪೂರೈಸುವ ಒತ್ತಡದಲ್ಲಿರುತ್ತೀರಿ. ನೀವು ಮಧ್ಯಾಹ್ನ ಯಾರಿಗೋ ನೆರವಾಗಲು ಆಹ್ವಾನ ಪಡೆಯಬಹುದು. ನೀವು ನಿಮ್ಮ ಮನ ಒಲಿಸುವ ವರ್ತನೆಯಿಂದ ಪ್ರತಿಯೊಬ್ಬರ ಹೃದಯವನ್ನೂ ಗೆಲ್ಲುತ್ತೀರಿ. ಇಂದು ಯಾವುದೇ ಆಶ್ಚರ್ಯಗಳಿಲ್ಲದ ಗಮನಾರ್ಹವಲ್ಲದ ದಿನವಾಗಿರುತ್ತದೆ.

ಗುರವಾರದ ರಾಶಿಫಲ

ABOUT THE AUTHOR

...view details