ನ್ಯೂಸ್ ಡೆಸ್ಕ್ (ಹೈದರಾಬಾದ್):ಗುಜರಾತ್ ವಿಧಾನಸಭಾ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿವೆ. ಆರು ದಶಕಗಳಲ್ಲಿ ಇತಿಹಾಸ ವಿಧಾನಸಭೆಯಲ್ಲಿ ಮಹಿಳೆಯರ ಪ್ರತಿನಿಧ್ಯದ ಮೇಲೆ ಗಮನ ಹರಿಸುವುದು ಬಹಳ ಮುಖ್ಯವಾಗುತ್ತದೆ. ಗುಜರಾತ್ ಉದಯವಾದ 1960ರಿಂದಲೂ ಒಬ್ಬರೇ ಮಹಿಳಾ ಮುಖ್ಯಮಂತ್ರಿ ಮತ್ತು ವಿಧಾನಸಭೆಯ ಸ್ಪೀಕರ್ ಆಗಿದ್ದಾರೆ. ಒಟ್ಟಾರೆ ವಿಧಾನಸಭೆಯಲ್ಲಿ ಮಹಿಳಾ ಸದಸ್ಯರ ಸಂಖ್ಯೆ ಶೇ.10ಕ್ಕಿಂತ ಕಡಿಮೆ ಇದೆ.
ಮಹಾರಾಷ್ಟ್ರದಿಂದ ವಿಭಜನೆಗೊಂಡ ಗುಜರಾತ್ ರಾಜ್ಯವು 1960ರ ಮೇ 1ರಂದು ಅಸ್ತಿತ್ವಕ್ಕೆ ಬಂದಿತು. ಅಲ್ಲಿಂದ ಗುಜರಾತ್ ವಿಧಾನಸಭೆಗೆ 2017ರವರೆಗೆ 13 ಚುನಾವಣೆಗಳು ನಡೆದಿವೆ. ರಾಜ್ಯದ ಮೊದಲ ಮುಖ್ಯಮಂತ್ರಿ ಡಾ.ಜೀವರಾಜ್ ಮೆಹ್ತಾ ಮತ್ತು ವಿಧಾನಸಭೆಯ ಮೊದಲ ಸ್ಪೀಕರ್ ಕಲ್ಯಾಣಜಿ ಮೆಹ್ತಾ ಆಗಿದ್ದರು.
ಇದನ್ನೂ ಓದಿ:24 ಮಾಜಿ ಕಾಂಗ್ರೆಸ್ಸಿಗರಿಗೆ ಬಿಜೆಪಿ ಟಿಕೆಟ್.. ಗುಜರಾತಿನ ರಾಜಕೀಯದಲ್ಲಿ ನಡೆಯುತ್ತಿರುವುದೇನು?
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಗುಜರಾತ್ನಲ್ಲಿ ಇಲ್ಲಿಯವೆರೆಗೆ 2,307 ಶಾಸಕರು ಆಯ್ಕೆಯಾಗಿದ್ದಾರೆ. ಅದರಲ್ಲಿ ಪುರುಷ ಶಾಸಕರ ಸಂಖ್ಯೆ 2196 ಆಗಿದ್ದರೆ, ಮಹಿಳಾ ಶಾಸಕರ ಸಂಖ್ಯೆ ಕೇವಲ 111 ಮಾತ್ರವೇ ಆಗಿದೆ.
ಮೊದಲ ಮಹಿಳಾ ಮುಖ್ಯಮಂತ್ರಿ: ಗುಜರಾತ್ ಉದಯವಾದ 54 ವರ್ಷಗಳ ನಂತರ ಮುಖ್ಯಮಂತ್ರಿ ಹುದ್ದೆಗೆ ಹೇರಿದ್ದು ಆನಂದಿಬೆನ್ ಪಟೇಲ್. ಈ ಮೂಲಕ ರಾಜ್ಯದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಾತ್ರರಾದರು.
ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ 2014ರ ಲೋಕಸಭೆ ಚುನಾವಣೆಯಲ್ಲಿ ಗೆದ್ದು ನರೇಂದ್ರ ಮೋದಿ ಪ್ರಧಾನಿಯಾಗಿ ಆಯ್ಕೆಯಾದರು. ಹೀಗಾಗಿ ನರೇಂದ್ರ ಮೋದಿ ಸಿಎಂ ಹುದ್ದೆ ರಾಜೀನಾಮೆ ನೀಡಿದರು. ಇದರಿಂದ ಮುಖ್ಯಮಂತ್ರಿ ಹುದ್ದೆಗೆ ಆನಂದಿಬೆನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಅವರು 2014ರ ಮೇ 22ರಂದು ಆನಂದಿಬೆನ್ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರಿ ವಹಿಸಿಕೊಂಡರು.
ಇದನ್ನೂ ಓದಿ:ಗುಜರಾತ್ ಚುನಾವಣಾ ಕಣ: ಬಿಜೆಪಿಯ 60, ಕಾಂಗ್ರೆಸ್ನ 35 ಅಭ್ಯರ್ಥಿಗಳು ಕೋಟ್ಯಧಿಪತಿಗಳು
ಅಲ್ಲಿಂದ 2016ರ ಆಗಸ್ಟ್ 6ರವರೆಗೆ ಆನಂದಿಬೆನ್ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಆದರೆ, ಪಾಟಿದಾರ್ ಮೀಸಲಾತಿ ಚಳವಳಿಯಿಂದಾಗಿ ಆನಂದಿಬೆನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಸದ್ಯ ಆನಂದಿಬೆನ್ ಪಟೇಲ್ ಉತ್ತರ ಪ್ರದೇಶದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೊದಲ ಮಹಿಳಾ ಸ್ಪೀಕರ್: ಡಾ. ನಿಮಾಬೆನ್ ಆಚಾರ್ಯ ಅವರು ಗುಜರಾತ್ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್ ಎಂಬ ಖ್ಯಾತಿ ಹೊಂದಿದ್ದಾರೆ. 2021ರ ಸೆಪ್ಟೆಂಬರ್ 7 ರಂದು ರಾಜ್ಯ ವಿಧಾನಸಭೆಯ ಮಹಿಳಾ ಸ್ಪೀಕರ್ ನಿಮಾಬೆನ್ ಆಚಾರ್ಯ ಅಧಿಕಾರ ವಹಿಸಿಕೊಂಡಿದ್ದರು. 2007ರ ಸಂದರ್ಭದಲ್ಲಿ ಇವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.
ಪ್ರಸ್ತುತ 2022ರ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯಸಭೆ ಸಂಸದೆ ಅಮೀ ಯಾಗ್ನಿಕ್ ಅವರನ್ನು ಕಣಕ್ಕಿಳಿಸಿದೆ. ಹಾಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಹಿಡಿತದಲ್ಲಿರುವ ಘಟ್ಲೋಡಿಯಾ ಕ್ಷೇತ್ರದಿಂದ ಅಮೀ ಯಾಗ್ನಿಕ್ ಸ್ಪರ್ಧಿಸಿದ್ದಾರೆ.
ಇದನ್ನೂ ಓದಿ:ಗುಜರಾತ್ ಚುನಾವಣೆಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ: ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನ