ಕರ್ನಾಟಕ

karnataka

ETV Bharat / bharat

ಅಸ್ಸೋಂನ ನೂತನ ಸಚಿವ ಸಂಪುಟದಲ್ಲಿದ್ದಾರೆ 14 ಜನ ಮಿಲೇನಿಯರ್ಸ್​​! - ಬಿಜೆಪಿ ಶಾಸಕ ಅಶೋಕ್ ಸಿಂಘಾಲ್ ಆಸ್ತಿ

ಅಸ್ಸೋಂನ ನೂತನ ಸಿಎಂ ಹಿಮಂತ ಬಿಸ್ವಾ ಶರ್ಮಾ ಕ್ಯಾಬಿನೆಟ್​​ನಲ್ಲಿರುವ 14 ಮಂದಿ ಮಂತ್ರಿಗಳು ಕೋಟ್ಯಾಧಿಪತಿಗಳೇ ಆಗಿದ್ದಾರೆ.

assam
assam

By

Published : May 15, 2021, 9:31 PM IST

ಗುವಾಹಟಿ: ಅಸ್ಸೋಂನಲ್ಲಿ ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದವರಲ್ಲಿ ಈ ಬಾರಿ ಸಿಎಂ ಸೇರಿ 14 ಮಂತ್ರಿಗಳು ಮಿಲೇನಿಯರ್​ಗಳೇ ಆಗಿದ್ದಾರೆ.

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂತ್ರಿಮಂಡಲಕ್ಕೆ ಸೇರ್ಪಡೆಯಾದ 13 ರಲ್ಲಿ 12 ಮಂದಿ ಸಹ ಕೋಟ್ಯಧಿಪತಿಗಳಾಗಿದ್ದಾರೆ. ಇದರರ್ಥ ಕ್ಯಾಬಿನೆಟ್ ಮಂತ್ರಿಗಳಲ್ಲಿ ಶೇ. 86 ರಷ್ಟು ಮಂದಿ ಶ್ರೀಮಂತರೇ ಇದ್ದಾರೆ.

ಅಸೋಮ್ ಗಣ ಪರಿಷತ್ (ಎಜಿಪಿ) ಮತ್ತು ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಸೇರಿದಂತೆ ಮೈತ್ರಿ ಪಾಲುದಾರರಿಂದ ಮಂತ್ರಿಗಳಿಗೆ ಮುಖ್ಯಮಂತ್ರಿಗಳು ಅವಕಾಶ ಕಲ್ಪಿಸಿದ್ದರು, ಈ ಪಕ್ಷವು ರಾಜ್ಯದ ಬೋಡೋಲ್ಯಾಂಡ್ ಪ್ರದೇಶಗಳಲ್ಲಿ ಹೆಚ್ಚಾಗಿ ಅಸ್ತಿತ್ವದಲ್ಲಿದೆ.

ಬಿಜೆಪಿ ಶಾಸಕ ಅಶೋಕ್ ಸಿಂಘಾಲ್ ಅವರನ್ನು ಸಂಪುಟಕ್ಕೆ ಸೇರಿಕೊಂಡಿದ್ದು, ಒಟ್ಟು ಇವರ ಸಂಪತ್ತು ಅಂದಾಜು ರೂ. 17.06 ಕೋಟಿ ರೂ. 2016 ರಲ್ಲಿ ಬಿಜೆಪಿ ಶಾಸಕರಾದ ಸಿಂಘಾಲ್ ಮೊದಲ ಬಾರಿಗೆ ಗುವಾಹಟಿ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ (ಜಿಎಂಡಿಎ) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ಈ ಪಟ್ಟಿಯಲ್ಲಿ ಮುಂದಿನ ಸ್ಥಾನ ಕ್ಯಾಬಿನೆಟ್ ಸಚಿವ ಪಿಯೂಷ್ ಹಜರಿಕಾ ಸಹ ಇದ್ದು, ಮುಖ್ಯಮಂತ್ರಿ ಶರ್ಮಾ ಅವರ ಆಪ್ತ ಸಹಾಯಕರಾಗಿ ಕರೆಯಲ್ಪಡುವ ಹಜರಿಕಾ ಅವರ ಆಸ್ತಿ ರೂ. 6.03 ಕೋಟಿ ಆಗಿದ್ದರೆ, ಬಿಜೆಪಿಯ ಅಸ್ಸೋಂ ಘಟಕದ ಅಧ್ಯಕ್ಷ ರಂಜಿತ್ ಕುಮಾರ್ ದಾಸ್ ಅವರ ರೂ. 5.87 ಕೊಟಿ.

ಧರ್ಮಪುರ ಕ್ಷೇತ್ರದ ಆರು ಬಾರಿ ಶಾಸಕರಾದ ಚಂದ್ರ ಮೋಹನ್ ಪಟೋವರಿಯೂ ಈ ಮಿಲೇನಿಯರ್​ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸಹ ಕೋಟ್ಯಧಿಪತಿಯೇ ಆಗಿದ್ದಾರೆ. ಆದರೆ ಇಬ್ಬರು ಮಾತ್ರ ಲಕ್ಷಾಧಿಪತಿಗಳಿದ್ದು, ಸಚಿವ ಸಂಜಯ್ ಕಿಶನ್ ಅವರು ರೂ. 55.35 ಲಕ್ಷ ರೂ ಆಸ್ತಿ ಹೊಂದಿದ್ದರೆ ಯುಪಿಪಿಎಲ್ ಮುಖಂಡ ಮತ್ತು ಬೋಡೋ ಸಮುದಾಯದ ಹಿರಿಯ ಮುಖಂಡ ಉರ್ಖಾವ್ ಗ್ವಾರಾ ಬ್ರಹ್ಮ ಅವರ ಅಂದಾಜು ಸಂಪತ್ತು ರೂ. 77.48 ಲಕ್ಷ ಮಾತ್ರ.

ABOUT THE AUTHOR

...view details