ಕರ್ನಾಟಕ

karnataka

ETV Bharat / bharat

1.15 ಲಕ್ಷ ಕೊಟ್ಟು ಒಂದು ಕೆಜಿ ಮನೋಹರಿ ಗೋಲ್ಡ್ ಚಹಾ ಪುಡಿ ಖರೀದಿಸಿದ ಹೋಟೆಲ್ ಉದ್ಯಮಿ! - ಗುವಾಹಟಿ ಟೀ ಹರಾಜು ಕೇಂದ್ರ

ಅಸ್ಸೋಂನ ಪ್ರಸಿದ್ಧ ಮನೋಹರಿ ಗೋಲ್ಡ್ ಟೀ ಪುಡಿಯನ್ನು ಹೈದರಾಬಾದ್‌ನ ಹೋಟೆಲ್ ಉದ್ಯಮಿ ದಾಖಲೆ ಬೆಲೆಗೆ ಖರೀದಿಸಿದ್ದಾರೆ.

assams-manohari-gold-tea-sold-at-record-rs-1-dot-15-lakh-per-kg
1.15 ಲಕ್ಷ ಕೊಟ್ಟು ಒಂದು ಕೆಜಿ ಮನೋಹರಿ ಗೋಲ್ಡ್ ಚಹಾ ಪುಡಿ ಖರೀದಿಸಿ ಹೋಟೆಲ್ ಉದ್ಯಮಿ!

By

Published : Dec 17, 2022, 11:02 PM IST

Updated : Dec 18, 2022, 10:19 AM IST

ಗುವಾಹಟಿ (ಅಸ್ಸೋಂ):ಅಸ್ಸೋಂನ ಪ್ರಸಿದ್ಧ ಮನೋಹರಿ ಗೋಲ್ಡ್ ಟೀ ಪುಡಿ ದಾಖಲೆಗೆ ಮಾರಾಟವಾಗಿದೆ. ಗುವಾಹಟಿ ಟೀ ಹರಾಜು ಕೇಂದ್ರ (ಜಿಟಿಎಸಿ) ಶುಕ್ರವಾರ ನಡೆಸಿದ ಹರಾಜಿನಲ್ಲಿ ಪ್ರತಿ ಕೆಜಿ ಈ ಮನೋಹರಿ ಗೋಲ್ಡ್ ಚಹಾ ಪುಡಿ ಬರೋಬ್ಬರಿ 1.15 ಲಕ್ಷ ರೂಪಾಯಿಗೆ ಮಾರಾಟವಾಗಿದೆ.

ದಿಬ್ರುಗಢ್ ಜಿಲ್ಲೆಯ ಮನೋಹರಿ ಟೀ ಎಸ್ಟೇಟ್‌ನಲ್ಲಿ ಈ ಚಹಾ ಪುಡಿ ತಯಾರಿಸಲಾಗುತ್ತಿದ್ದು, ಅದು ತನ್ನದೇ ಬ್ರ್ಯಾಂಡ್​ ಹೊಂದಿದೆ. ಅಸ್ಸೋಂನ ಪ್ರಸಿದ್ಧ ಟೀ ಪುಡಿಯನ್ನು ಹೈದರಾಬಾದ್‌ನ ಹೋಟೆಲ್ ಉದ್ಯಮಿ ಕೆ ಬಾಬುರಾವ್ ಜಿಟಿಎಸಿ ನಡೆಸಿದ ಹರಾಜಿನಲ್ಲಿ 1.15 ಲಕ್ಷ ರೂಪಾಯಿಗಳ ದಾಖಲೆ ಬೆಲೆಗೆ ಖರೀದಿಸಿದ್ದಾರೆ.

ತನ್ನದೇ ದಾಖಲೆ ಮುರಿದ ಗೋಲ್ಡ್ ಟೀ ಪುಡಿ:ಪ್ರಸಿದ್ಧ ಮನೋಹರಿ ಗೋಲ್ಡ್ ಟೀ 2018ರಿಂದ ತನ್ನದೇ ಆದ ದಾಖಲೆ ಮುರಿಯುತ್ತಿದೆ. 2018ರಲ್ಲಿ 1 ಕೆಜಿ ಚಹಾ ಪುಡಿ 39,001 ರೂ.ಗೆ ಮಾರಾಟವಾಗಿತ್ತು. ಅದು ಆಗಿನ ದಾಖಲೆ ಬೆಲೆಯಾಗಿತ್ತು.

2019ರಲ್ಲಿ ಈ ವಿಶೇಷ ಚಹಾ ಪುಡಿವನ್ನು ಕೆಜಿಗೆ 50 ಸಾವಿರ ರೂ.ಗೆ ಮಾರಾಟ ಮಾಡಲಾಗಿತ್ತು. ಮತ್ತೆ 2020ರಲ್ಲಿ ಈ ಟೀ ಪುಡಿಯ ಬೆಲೆ ಪ್ರತಿ ಕೆಜಿಗೆ 75 ಸಾವಿರ ರೂ.ಗೆ ಏರಿತ್ತು. ಕಳೆದ ಇದು 99,999 ರೂ.ಗೆ ಜಿಗಿದಿತ್ತು. ಈ ಬಾರಿ 1.15 ಲಕ್ಷ ರೂಪಾಯಿಗೆ ಮನೋಹರಿ ಗೋಲ್ಡ್ ಟೀ ಪುಡಿ ಮಾರಾಟವಾಗಿದೆ.

ಪ್ರತಿ ಕಪ್ ಚಹಾವನ್ನು ಸಾವಿರ ರೂ.ಗೆ ಮಾರಾಟ: ವಿಶೇಷ ಚಹಾ ಪುಡಿಯನ್ನು ಖರೀದಿಸಿದ ನಂತರ ಗುವಾಹಟಿ ಟೀ ಹರಾಜು ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೈದರಾಬಾದ್‌ನ ನಿಲೋಫರ್ ಕೆಫೆಯ ಮಾಲೀಕರಾದ ಬಾಬುರಾವ್, ಮನೋಹರಿ ಗೋಲ್ಡ್ ಟೀ ಪುಡಿಯೊಂದಿಗೆ ತಯಾರಿಸಿದ ಪ್ರತಿ ಕಪ್ ಚಹಾವನ್ನು ಒಂದು ಸಾವಿರ ರೂ.ಗೆ ಮಾರಾಟ ಮಾಡುವುದಾಗಿ ತಿಳಿಸಿದರು.

ಇದೇ ವೇಳೆ ಮನೋಹರಿ ಟೀ ಎಸ್ಟೇಟ್ ಮಾಲೀಕ ರಾಜನ್ ಲೋಹಿಯಾ ಅವರು ಮನೋಹರಿ ಗೋಲ್ಡ್ ಟೀ ವಿಶೇಷತೆಗಳನ್ನು ವಿವರಿಸಿದರು. ಈ ಚಹಾ ಪುಡಿಯನ್ನು ಚಹಾ ತೋಟದಲ್ಲಿ ಬೆಳಗ್ಗೆ 4 ರಿಂದ 6ರ ಸಮಯದಲ್ಲಿ ಕಿತ್ತುಕೊಳ್ಳಲಾಗುವ ಏಕ ಮೊಗ್ಗುಗಳಿಂದ ತಯಾರಿಸಲಾಗುತ್ತದೆ ಎಂದು ಈಟಿವಿ ಭಾರತ್​ಗೆ ಲೋಹಿಯಾ ತಿಳಿಸಿದರು.

ಇದನ್ನೂ ಓದಿ:ಈ ಚಹಾಪುಡಿ ಕೆ.ಜಿಗೆ ಜಸ್ಟ್​​​​ 1 ರೂ. ಕಡಿಮೆ 1 ಲಕ್ಷ ರೂ.. ಏನಿದೆ ಅಂಥಾದ್ದು ಈ ಟೀ ಪೌಡರ್​​​ನಲ್ಲಿ!

Last Updated : Dec 18, 2022, 10:19 AM IST

ABOUT THE AUTHOR

...view details