ಕರ್ನಾಟಕ

karnataka

ETV Bharat / bharat

ಅಸ್ಸೋಂ ವಿಧಾನಸಭೆ ಫೈಟ್​: 70 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ ಬಿಜೆಪಿ - ಅಸ್ಸೋಂ ಬಿಜೆಪಿ

ಅಸ್ಸೋಂ ವಿಧಾನಸಭೆ ಚುನಾವಣೆಗೋಸ್ಕರ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಗಳ ಪಟ್ಟಿ ರಿಲೀಸ್​ ಮಾಡಿದ್ದು, 11 ಹಾಲಿ ಶಾಸಕರಿಗೆ ಶಾಕ್​ ನೀಡಿ, ಹೊಸ ಮುಖಗಳಿಗೆ ಮಣೆ ಹಾಕಿದೆ.

Assam assembly election 2021
Assam assembly election 2021

By

Published : Mar 5, 2021, 9:38 PM IST

ಗುವಾಹಟಿ:ಅಸ್ಸೋಂ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಇದೀಗ ಭಾರತೀಯ ಜನತಾ ಪಾರ್ಟಿ 126 ಕ್ಷೇತ್ರಗಳ ಪೈಕಿ 70 ಸ್ಥಾನಗಳಿಗೆ ಅಭ್ಯರ್ಥಿ ಹೆಸರು ಫೈನಲ್ ಮಾಡಿ ಪಟ್ಟಿ ಪ್ರಕಟಗೊಳಿಸಿದೆ.

ಅಸ್ಸೋಂ ವಿಧಾನಸಭೆ ಚುನಾವಣೆ ಮೂರು ಹಂತಗಳಲ್ಲಿ ನಡೆಯಲಿದ್ದು, ಬಿಜೆಪಿ 11 ಹಾಲಿ ಶಾಸಕರಿಗೆ ಬಿಟ್ಟು ಹೊಸಬರಿಗೆ ಮಣೆ ಹಾಕಿರುವುದು ವಿಶೇಷವಾಗಿದೆ. ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್​ ಮಜುಲಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ.

ಇದನ್ನೂ ಓದಿ: ತಮಿಳುನಾಡು ವಿಧಾನ ಕದನ​: ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ​ ಮಾಡಿದ ಎಐಎಡಿಎಂಕೆ

ಅಸ್ಸೋಂ ಗಣ ಪರಿಷದ್ ಹಾಗೂ ಯುನೈಟೆಡ್​​ ಪೀಪಲ್ಸ್​ ಜತೆ ಬಿಜೆಪಿ ಮೈತ್ರಿ ಘೋಷಣೆ ಮಾಡಿಕೊಂಡಿದ್ದು, ಕ್ರಮವಾಗಿ 26 ಹಾಗೂ 8 ಕ್ಷೇತ್ರ ಬಿಟ್ಟುಕೊಟ್ಟಿದೆ. ಆರೋಗ್ಯ ಸಚಿವ ಹಿಮಂತ್​ ಬಿಸ್ವಾ ಶರ್ಮಾ ಜಾಲುಕ್​​ಬಾರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ.

126 ಕ್ಷೇತ್ರಗಳ ಪೈಕಿ 47 ಸ್ಥಾನಗಳಿಗೆ ಮಾರ್ಚ್​ 27ರಂದು, 39 ಸ್ಥಾನಗಳಿಗೆ ಏಪ್ರಿಲ್​ 1 ಹಾಗೂ 40 ಸ್ಥಾನಗಳಿಗೆ ಏಪ್ರಿಲ್​ 6ರಂದು ಚುನಾವಣೆ ನಡೆಯಲಿದ್ದು, ಮೇ 2ರಂದು ಫಲಿತಾಂಶ ಬಹಿರಂಗಗೊಳ್ಳಲಿದೆ. ಇನ್ನು ತಮಿಳುನಾಡಿನಲ್ಲಿ ಎಐಎಡಿಎಂಕೆ ಹಾಗೂ ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯಿಂದ ಇಂದು ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್​ ಆಗಿದೆ.

ABOUT THE AUTHOR

...view details