ಗುವಾಹಟಿ(ಅಸ್ಸೋಂ): ಫುಟ್ಬಾಲ್ ದಂತಕಥೆ, ಅರ್ಜೆಂಟೀನಾದ ಫುಟ್ಬಾಲ್ ತಂಡದ ಆಟಗಾರ, ದಿವಂಗತ ಡಿಯಾಗೋ ಮರಡೋನಾ ಅವರ ಹಬ್ಲೋಟ್ ವಾಚ್ ಅನ್ನು ವ್ಯಕ್ತಿಯೋರ್ವನಿಂದ ಅಸ್ಸೋಂ ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಶನಿವಾರ ಘೋಷಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಾಜಿದ್ ಹುಸೇನ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈ ವಾಚ್ ಅನ್ನು ವಾಪಸ್ ನೀಡಲು ದುಬೈ ಪೊಲೀಸ್ ಮುಖ್ಯ ಕಚೇರಿಗೆ ಮಾಹಿತಿ ನೀಡಲಾಗಿದೆ ಎಂದು ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ.
ದುಬೈನಲ್ಲಿ ಡಿಯಾಗೋ ಮರಡೋನಾ ಅವರ ವಾಚ್ ಕಳೆದುಹೋಗಿದ್ದು, ವಾಚ್ ಕಳೆದುಹೋದ ಸಮಯಲ್ಲಿ ವಾಜಿದ್ ಹುಸೇನ್ ಅಲ್ಲಿನ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದನು ಎಂದು ತಿಳಿದುಬಂದಿದೆ.