ಕರ್ನಾಟಕ

karnataka

ETV Bharat / bharat

ಆನೆಯ ಹಾಲು ಸವಿಯಲು ಹರಸಾಹಸ ಪಟ್ಟ 3 ವರ್ಷದ ಮಗು! - ಅಸ್ಸೋಂ ಬಾಲಕಿ ಆನೆಯ ಜೊತೆ ಆಟ ಸುದ್ದಿ

ಅಸ್ಸೋಂ ಗೋಲಾಘಾಟ್​ನ ಮೂರು ವರ್ಷದ ಹೆಣ್ಣು ಮಗು ಆನೆಯೊಂದಿಗೆ ಫುಟ್‌ಬಾಲ್‌ ಆಡುತ್ತಾಳೆ. ಫುಟ್‌ಬಾಲ್‌ ಅನ್ನು ಬಾಲಕಿಗೆ ಹಿಂದಿರುಗಿಸುವ ಮೂಲಕ ಆನೆ ಕೂಡ ಆಟಕ್ಕೆ ಸಾಥ್‌ ನೀಡುತ್ತದೆ. ಹೀಗೆ ಕೆಲಕಾಲ ಬಾಲಕಿ, ಆನೆಯೊಂದಿಗೆ ಚೆಂಡಾಟ ಆಡುತ್ತದೆ..

Assam girl playing with Elephant, Assam girl playing with Elephant video viral, Assam girl playing with Elephant news, ಅಸ್ಸೋಂ ಬಾಲಕಿ ಆನೆಯ ಜೊತೆ ಆಟ, ಅಸ್ಸೋಂ ಬಾಲಕಿ ಆನೆಯ ಜೊತೆ ಆಟದ ವಿಡಿಯೋ ವೈರಲ್​, ಅಸ್ಸೋಂ ಬಾಲಕಿ ಆನೆಯ ಜೊತೆ ಆಟ ಸುದ್ದಿ,
ಆನೆಯ ಎದೆ ಹಾಲು ಸವಿಯಲು ಹರಸಾಹಸ ಪಟ್ಟ 3 ವರ್ಷದ ಮಗು!

By

Published : Jan 31, 2022, 2:42 PM IST

Updated : Jan 31, 2022, 4:45 PM IST

ಗೋಲಾಘಾಟ್ ​:ಮೂರು ವರ್ಷದ ಪುಟ್ಟ ಹುಡುಗಿ ಸಾಕಾನೆ ಜೊತೆ ಫುಟ್‌ಬಾಲ್‌ ಆಟವಾಡಿ ನಂತರ ಆನೆಯ ಎದೆ ಹಾಲನ್ನು ಕುಡಿಯಲು ಹರಸಾಹಸಪಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗ್ತಿದೆ.

ಆನೆಯ ಎದೆ ಹಾಲು ಸವಿಯಲು ಹರಸಾಹಸ ಪಟ್ಟ 3 ವರ್ಷದ ಮಗು!

ಅಸ್ಸೋಂ ಗೋಲಾಘಾಟ್​ನ ಮೂರು ವರ್ಷದ ಹೆಣ್ಣು ಮಗು ಆನೆಯೊಂದಿಗೆ ಫುಟ್‌ಬಾಲ್‌ ಆಡುತ್ತಾಳೆ. ಫುಟ್‌ಬಾಲ್‌ ಅನ್ನು ಬಾಲಕಿಗೆ ಹಿಂದಿರುಗಿಸುವ ಮೂಲಕ ಆನೆ ಕೂಡ ಆಟಕ್ಕೆ ಸಾಥ್‌ ನೀಡುತ್ತದೆ. ಹೀಗೆ ಕೆಲಕಾಲ ಬಾಲಕಿ, ಆನೆಯೊಂದಿಗೆ ಚೆಂಡಾಟ ಆಡುತ್ತದೆ.

ಓದಿ:ಬಜೆಟ್‌ ಮುನ್ನಾ ದಿನ ಷೇರುಪೇಟೆಯಲ್ಲಿ ಗೂಳಿ ಓಟ; ದಿನದ ಆರಂಭದಲ್ಲೇ ಸೆನ್ಸೆಕ್ಸ್‌ 712 ಅಂಕಗಳ ಜಿಗಿತ

ನಂತರ ಹೆಣ್ಣಾನೆ ಮೇವು ತಿನ್ನುವ ಸಂದರ್ಭದಲ್ಲಿ ಹುಡುಗಿ ಹತ್ತಿರ ಹೋಗಿ, ಆನೆ ಎದೆ ಹಾಲು ಕುಡಿಯಲು ಹರಸಾಹಸ ಪಡುತ್ತಾಳೆ. ಆನೆ ಹಾಗೂ ಪುಟ್ಟ ಹುಡುಗಿಯ ಬಾಂಧವ್ಯದ ಮುದ್ದಾದ ವಿಡಿಯೋ ನೋಡುಗರ ಮನಸೂರೆಗೊಂಡಿದೆ.

ಗೋಲಾಘಾಟ್ ಜಿಲ್ಲೆಯ ಹರ್ಷಿತಾ ಬೋರಾ ಹೆಸರಿನ ಪುಟ್ಟ ಹುಡುಗಿ ಆನೆಯೊಂದಿಗಿನ ಬಾಂಧವ್ಯದ ಕುರಿತು ಮಾತನಾಡಿದೆ. ಆನೆ ನನ್ನೊಂದಿಗೆ ಚೆಂಡಾಟ ಆಡುತ್ತದೆ. ಅವಳ ಹೆಸರು ಬಿನು. ಅವಳಿಗೆ ಬಾಳೆಹಣ್ಣು ಎಂದರೆ ತುಂಬಾ ಇಷ್ಟ ಎಂದು ಆನೆ ಕುರಿತು ಮುದ್ದಾಗಿ ಪ್ರತಿಕ್ರಿಯಿಸಿದ್ದಾಳೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜನರ ಮೆಚ್ಚುಗೆ ಗಳಿಸುತ್ತಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 31, 2022, 4:45 PM IST

ABOUT THE AUTHOR

...view details