ಕರ್ನಾಟಕ

karnataka

ETV Bharat / bharat

ಏಷ್ಯನ್ ಗೇಮ್ಸ್‌ನಲ್ಲಿ 2 ಬಾರಿ ಚಿನ್ನದ ಪದಕ ವಿಜೇತ, ಅಥ್ಲೀಟ್​ ಹರಿ ಚಂದ್ ನಿಧನ - ಏಷ್ಯನ್ ಗೇಮ್ಸ್‌ನಲ್ಲಿ ಎರಡು ಬಾರಿ ಪದಕ ವಿಜೇತ ಹರಿ ಚಂದ್

ಹರಿ ಚಂದ್ ಅವರು ಎರಡು ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದ ಹೆಗ್ಗಳಿಕೆ ಹೊಂದಿದ್ದಾರೆ. ಮಾಂಟ್ರಿಯಲ್‌ನಲ್ಲಿ ನಡೆದ 1976 ಬೇಸಿಗೆ ಒಲಿಂಪಿಕ್ಸ್‌ನಲ್ಲಿ, ಅವರು 10,000 ಮೀ ಓಟದಲ್ಲಿ 28:48.72 ಸಮಯದೊಂದಿಗೆ 8ನೇ ಸ್ಥಾನ ಪಡೆದಿದ್ದರು. ಇದು 32 ವರ್ಷಗಳ ಕಾಲ ರಾಷ್ಟ್ರೀಯ ದಾಖಲೆಯಾಗಿತ್ತು.

Olympian Hari Chand
ಹರಿ ಚಂದ್ ನಿಧನ

By

Published : Jun 13, 2022, 2:07 PM IST

ಹೋಶಿಯಾರ್ ಪುರ್ (ಪಂಜಾಬ್): ಏಷ್ಯನ್ ಗೇಮ್ಸ್‌ನಲ್ಲಿ ಎರಡು ಬಾರಿ ಚಿನ್ನದ ಪದಕ ವಿಜೇತ ಮತ್ತು ಒಲಿಂಪಿಯನ್ ಹರಿ ಚಂದ್(69) ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ಇವರು ಏ.1, 1953 ರಂದು ಪಂಜಾಬ್‌ನ ಹೋಶಿಯಾರ್‌ಪುರದ ಘೋರೆವಾ ಹಳ್ಳಿಯಲ್ಲಿ ಜನಿಸಿದ್ದರು.

ಹರಿ ಚಂದ್ ಅವರು ಎರಡು ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಮಾಂಟ್ರಿಯಲ್‌ನಲ್ಲಿ ನಡೆದ 1976 ಬೇಸಿಗೆ ಒಲಿಂಪಿಕ್ಸ್‌ನಲ್ಲಿ, ಅವರು 10,000 ಮೀ ಓಟದಲ್ಲಿ 28:48.72 ಸಮಯದೊಂದಿಗೆ ಎಂಟನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದು 32 ವರ್ಷಗಳ ಕಾಲ ರಾಷ್ಟ್ರೀಯ ದಾಖಲೆಯಾಗಿತ್ತು. ನಂತರ ಅವರು 1980 ರ ಒಲಿಂಪಿಕ್ ಪುರುಷರ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು.

ಭಾರತೀಯ ಅಥ್ಲೆಟಿಕ್ಸ್‌ನ ಅಸಾಧಾರಣ ನಾಯಕ ಹರಿ ಚಂದ್ 1978ರ ಬ್ಯಾಂಕಾಕ್ ಏಷ್ಯನ್ ಗೇಮ್ಸ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದರು. ಭಾರತದಲ್ಲಿ ಕ್ರೀಡೆಗೆ ನೀಡಿದ ಕೊಡುಗೆಗಾಗಿ, ಹರಿ ಚಂದ್ ಅವರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇದನ್ಣೂ ಓದಿ:ಇಂಗ್ಲೆಂಡ್​​​ ಪ್ರವಾಸಕ್ಕೂ ಮುನ್ನ ರಜೆಯ ಮಜೆ ಸವಿಯುತ್ತಿರುವ ವಿರಾಟ್ ಕೊಹ್ಲಿ!

ABOUT THE AUTHOR

...view details