ಅಮರಾವತಿ:ತಡರಾತ್ರಿಆಂಧ್ರಪ್ರದೇಶದ ಮಚಲಿಪಟ್ಟಣಂ ಮತ್ತು ನರಸಪುರಂ ಜಿಲ್ಲೆಗಳಲ್ಲಿ ಅಸಾನಿ ಚಂಡಮಾರುತದ ಪರಿಣಾಮ ಭೂಕುಸಿತದಂಥ ಘಟನೆಗಳು ಸಂಭವಿಸಿವೆ. ಈ ಭಾಗದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಜೋರು ಮಳೆಯಿಂದಾಗಿ ರೈತರಿಗೆ ಬೆಳೆ ನಷ್ಟ ಉಂಟಾಗಿದೆ. ಚಂಡಮಾರುತವು ಸದ್ಯ ದುರ್ಬಲಗೊಂಡಿದ್ದು, ಯಾನಂ-ಕಾಕಿನಾಡ ಪ್ರದೇಶದ ಮೇಲೆ ಹಾದು ಹೋಗಲಿದೆ ಎಂದು ಎಸ್‌ಡಿಎಂಎ ನಿರ್ದೇಶಕ ಬಿ.ಆರ್.ಅಂಬೇಡ್ಕರ್ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಚಂಡಮಾರುತದ ಪ್ರಭಾವದಿಂದ ಆಂಧ್ರಪ್ರದೇಶದ ಕರಾವಳಿ ಪ್ರದೇಶಕ್ಕೆ ಹಾನಿಯಾಗಿದೆ. ಬುಧವಾರ ಬೆಳಗ್ಗೆ ಕಾಕಿನಾಡ ಜಿಲ್ಲೆಗೆ ಅಪ್ಪಳಿಸಿದ ಅಸಾನಿ ಹಲವೆಡೆ ಭಾರಿ ಮಳೆ ಸುರಿಸಿದೆ. ಇದೀಗ ದುರ್ಬಲಗೊಂಡಿರುವ ಚಂಡಮಾರುತ ಗಂಟೆಗೆ 50-60 ಕಿ.ಮೀ ವೇಗದಲ್ಲಿ ಬೀಸುತ್ತಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.