ಬೆರ್ಹಾಂಪುರ(ಒಡಿಶಾ):ರಾಜ್ಯ 'ಅಸಾನಿ' ಚಂಡಮಾರುತದ ಹೊಡೆತದಿಂದ ಪಾರಾಗಿದೆ. ಆದರೆ, ಅದರ ಪ್ರಭಾವದಿಂದ ಕಡಲ ತೀರಗಳಲ್ಲಿ ಉಂಟಾದ ಉಬ್ಬರವಿಳಿತ ಅಳಿವಿನಂಚಿನಲ್ಲಿರುವ 'ಆಲಿವ್ ರಿಡ್ಲೆ ಕಡಲಾಮೆ'ಗಳ ಒಂದು ಕೋಟಿಗೂ ಹೆಚ್ಚು ಮೊಟ್ಟೆಗಳು ನಾಶವಾಗಿರಬಹುದು ಎಂದು ಬೆರ್ಹಾಂಪುರ ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್‌ಒ) ಆಮ್ಲನ್ ನಾಯಕ್ ತಿಳಿಸಿದ್ದಾರೆ.
ಸಾವಿರಾರು ಮೊಟ್ಟೆಗಳು ಕಡಲತೀರದ ಸವೆತದಿಂದ ನಾಶವಾಗುತ್ತವೆ. ಇದು ಸಾಮಾನ್ಯವಾಗಿದೆ. ಅದರಲ್ಲಿ ಶೇ. 10-15 ರಷ್ಟು ಮೊಟ್ಟೆಗಳು ನೈಸರ್ಗಿಕವಾಗಿ ನಾಶವಾಗುತ್ತವೆ. ಪ್ರತಿ ವರ್ಷ ಒಡಿಶಾ ಕಡಲತೀರಗಳಲ್ಲಿ ಸುಮಾರು 5.5 ಲಕ್ಷ ಆಲಿವ್ ರಿಡ್ಲೆ ಆಮೆಗಳು ಮೊಟ್ಟೆಯಿಡಲು ಬರುತ್ತವೆ. ಒಂದು ಆಲಿವ್ ರಿಡ್ಲಿ 100 ಮೊಟ್ಟೆಗಳನ್ನು ಇಡುವುದರಿಂದ, ಆಮೆಗಳು ಸುಮಾರು ಐದು ಕೋಟಿ ಮೊಟ್ಟೆಗಳನ್ನು ಇಟ್ಟಿರಬಹುದು. ಈ ವರ್ಷ ಶೇ 15-20 ರಷ್ಟು ಮೊಟ್ಟೆಗಳು ಹಾನಿಗೊಳಗಾಗಬಹುದು ಎಂದು ನಾಯಕ್ ವಿವರಿಸಿದರು.
ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‌ಐ) ಈಗಾಗಲೇ ವಿವಿಧ ಸ್ಥಳಗಳಲ್ಲಿ ಬೀಚ್ ಪ್ರೊಫೈಲಿಂಗ್ ಮಾಡಿದೆ. ಚಂಡಮಾರುತದಿಂದಾಗಿ ಸಮುದ್ರದ ಸ್ಥಿತಿ ಪ್ರಕ್ಷುಬ್ಧವಾಗಿದ್ದು ಹೆಚ್ಚಿನ ಮೊಟ್ಟೆಗಳಿಗೆ ಹಾನಿಯಾಗುವ ಸಂಭವವಿದೆ ವಿಭಾಗೀಯ ಅರಣ್ಯಾಧಿಕಾರಿ ಹೇಳಿದರು.