ಹೈದರಾಬಾದ್:ಬಹುಸಂಖ್ಯಾತ ಧರ್ಮದ ಆಧಾರದ ಮೇಲೆ ಮತ ಕೇಳುತ್ತಿರುವ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧ ಆಲ್ - ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು "ಕರ್ನಾಟಕದಲ್ಲಿ ಬಹುಸಂಖ್ಯಾತ ಧರ್ಮದ ಆಧಾರದ ಮೇಲೆ ಕಾಂಗ್ರೆಸ್ ಮತ್ತು ಬಿಜೆಪಿ ಬಹಿರಂಗವಾಗಿ ಮತ ಕೇಳುತ್ತಿವೆ. ಹಾಗೇಯೇ ನಾವು ಅಲ್ಲಾಹು ಅಕ್ಬರ್ ಎಂದು ಜಪಿಸಿ ಮತ ಹಾಕುವಾಗ ಕೇಳಬಹುದೇೆ?. ಎರಡು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಬಜರಂಗದಳದಂತಹ ಸಂಘಟನೆಗಳನ್ನು ನಿಷೇಧಿಸುವ ಭರವಸೆಯ ಬಗ್ಗೆ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದವು. ನಂತರ ಕಾಂಗ್ರೆಸ್ ರಾಜ್ಯಾದ್ಯಂತ ಹನುಮಾನ್ ಮಂದಿರಗಳನ್ನು ನಿರ್ಮಿಸಿ ಜೀರ್ಣೋದ್ಧಾರ ಮಾಡುವುದಾಗಿ ಭರವಸೆ ನೀಡಿತು. ಆದರೆ, ಹುಬ್ಬಳ್ಳಿಯಲ್ಲಿ ಕೆಡವಲಾದ ದರ್ಗಾವನ್ನು ಪುನರ್ ನಿರ್ಮಿಸುತ್ತದೆಯೇ?. ನಿರ್ಣಾಯಕ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಆಡಳಿತಾರೂಢ ಬಿಜೆಪಿಯ ಮುಂದೆ ಶರಣಾಗಿದೆ ಕಿಡಿಕಾರಿದರು.
ಮಾದರಿ ನೀತಿ ಸಂಹಿತೆ ಏನಾಯಿತು?:ಇವಿಎಂನಲ್ಲಿ ಮತ ಹಾಕಲು ಬಟನ್ ಒತ್ತಿದ ನಂತರ ಕರ್ನಾಟಕದ ಮತದಾರರು 'ಜೈ ಬಜರಂಗ್ ಬಲಿ' ಎಂದು ಜಪಿಸುವಂತೆ ಪ್ರಧಾನಿ ಮೋದಿ ಹೇಳುತ್ತಿರುವ ವಿಡಿಯೋವನ್ನು ಓವೈಸಿ ಹಂಚಿಕೊಂಡಿದ್ದಾರೆ. "ಇದು ಯಾವ ರೀತಿಯ ಜಾತ್ಯತೀತತೆ?, ಇದು ಸೆಕ್ಯುಲರ್ ಆಗಬಹುದೇ? ನಾನು ಇಲ್ಲಿ ನಿಂತಿದ್ದೇನೆ ಮತ್ತು ನೀವು ಮತ ಚಲಾಯಿಸುವಾಗ 'ಅಲ್ಲಾಹು ಅಕ್ಬರ್' ಎಂದು ಜಪಿಸು ಎಂದು ನಾನು ಕೇಳಿದರೆ? ಮಾಧ್ಯಮಗಳು ಧರ್ಮದ ಪರ ನಿಂತಿದ್ದಕ್ಕೆ ನನ್ನನ್ನು ದೂಷಿಸುತ್ತಾರೆ. ಆದರೆ, ಮೋದಿ ಅದನ್ನು ಮಾಡಿದಾಗ ಯಾರು ಪ್ರಶ್ನಿಸಲಿಲ್ಲ ಎಂದು ಕಿಡಿಕಾರಿದರು.