ಕರ್ನಾಟಕ

karnataka

ETV Bharat / bharat

ಸಿಕ್ಕೀಂನಲ್ಲಿ ಭೂಕುಸಿತ.. 70 ಪ್ರವಾಸಿಗರನ್ನು ರಕ್ಷಿಸಿದ ಸೇನೆ - ಭಾರತೀಯ ಸೇನೆ

ಉತ್ತರ ಸಿಕ್ಕೀಂನ ಯುಮ್ತಾಂಗ್‌ಗೆ ಪ್ರವಾಸಿಗರು ಭೇಟಿ ನೀಡಿದ್ದ ವೇಳೆ ಸಿಕ್ಕೀಂನಲ್ಲಿ ಭೂಕುಸಿತ ಉಂಟಾಗಿದೆ. ಅವರನ್ನೆಲ್ಲಾ ಸೇನೆ ರಕ್ಷಣೆ ಮಾಡಿದೆ.

ಸಿಕ್ಕೀಂನಲ್ಲಿ ಭೂಕುಸಿತ: 70 ಪ್ರವಾಸಿಗರನ್ನು ರಕ್ಷಿಸಿದ ಸೇನೆ
ಸಿಕ್ಕೀಂನಲ್ಲಿ ಭೂಕುಸಿತ: 70 ಪ್ರವಾಸಿಗರನ್ನು ರಕ್ಷಿಸಿದ ಸೇನೆ

By

Published : Sep 1, 2022, 3:20 PM IST

ಸಿಲಿಗುರಿ : ಈಶಾನ್ಯ ರಾಜ್ಯ ಸಿಕ್ಕೀಂನಲ್ಲಿ ಉಂಟಾದ ಭಾರೀ ಭೂಕುಸಿತದಲ್ಲಿ ಸಿಲುಕಿದ್ದ 70 ಪ್ರವಾಸಿಗರನ್ನು ಭಾರತೀಯ ಸೇನೆ ರಕ್ಷಣೆ ಮಾಡಿದೆ. ಉತ್ತರ ಸಿಕ್ಕೀಂನ ಯುಮ್ತಾಂಗ್‌ಗೆ ಇವರು ಭೇಟಿ ನೀಡಿದಾಗ ಈ ದುರಂತ ಸಂಭವಿಸಿದೆ.

ಪ್ರವಾಸಿಗರು ಮುಖ್ಯವಾಗಿ ಬಾಂಗ್ಲಾದೇಶ ಮತ್ತು ಭಾರತದ ದಕ್ಷಿಣ ಭಾಗದವರು ಎಂದು ತಿಳಿದುಬಂದಿದೆ. 70 ಮಂದಿಯಲ್ಲಿ ಎಂಟು ಮಂದಿ ಮಹಿಳೆಯರು ಮತ್ತು ಇಬ್ಬರು ಮಕ್ಕಳು ಇದ್ದಾರೆ. ಸೈನಿಕರು ಪ್ರವಾಸಿಗರನ್ನು ರಕ್ಷಿಸಿ ಬುಧವಾರ ತಡರಾತ್ರಿ ಸಿಕ್ಕೀಂನ ಲಾಚುಂಗ್‌ಗೆ ಕರೆತಂದಿದ್ದಾರೆ. ಪ್ರವಾಸಿಗರು ಇಂದು ಬೆಳಗ್ಗೆ ಲಾಚುಂಗ್‌ನಿಂದ ಯುಮ್ತಾಂಗ್‌ಗೆ ತೆರಳಿದ್ದಾರೆ.

ಭೂಕುಸಿತದ ನಂತರ ಪ್ರವಾಸಿಗರ ಗುಂಪು ಲಾಚುಂಗ್‌ನ ಪ್ರವಾಸಿ ವಸತಿ ಮುಖ್ಯಸ್ಥರನ್ನು ಸಂಪರ್ಕಿಸಿದರು. ಅಲ್ಲಿಂದ ಸೇನೆ ಮತ್ತು ಲಾಚುಂಗ್ ಪೊಲೀಸ್ ಠಾಣೆಗೆ ಸುದ್ದಿ ತಿಳಿದುಬಂದಿದೆ. ಶೀಘ್ರದಲ್ಲೇ ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಗಿ ಎಲ್ಲರನ್ನೂ ರಕ್ಷಣೆ ಮಾಡಲಾಗಿದೆ. ರಕ್ಷಣಾ ಕಾರ್ಯಾಚರಣೆ ಬಳಿಕ ಪ್ರವಾಸಿಗರು ಸೇನಾ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಬಾಂಗ್ಲಾದೇಶ ಮತ್ತು ದಕ್ಷಿಣ ಭಾರತದ 70 ಪ್ರವಾಸಿಗರು ಸಿಕ್ಕಿಹಾಕಿಕೊಂಡಿದ್ದಾರೆಂದು ನಮಗೆ ಮಾಹಿತಿ ಬಂದಿತ್ತು. ಎಲ್ಲರನ್ನೂ ಸೇನೆಯು ಸುರಕ್ಷಿತವಾಗಿ ರಕ್ಷಿಸಿದೆ ಎಂದು ಹಿಮಾಲಯನ್ ಹಾಸ್ಪಿಟಾಲಿಟಿ ಟ್ರಾವೆಲ್ ಡೆವಲಪ್‌ಮೆಂಟ್ ನೆಟ್‌ವರ್ಕ್‌ನ ಕಾರ್ಯದರ್ಶಿ ಸಾಮ್ರಾಟ್ ಸನ್ಯಾಲ್ ಅವರು 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದರು.

ಇದನ್ನೂ ಓದಿ: ಆ್ಯಸಿಡ್ ದಾಳಿಗೊಳಗಾದ ಬಾಲಕಿ ಜಾರ್ಖಂಡ್​ನಿಂದ ದೆಹಲಿಗೆ ಏರ್​ಲಿಫ್ಟ್

ABOUT THE AUTHOR

...view details