ಅಮೃತಸರ, ಪಂಜಾಬ್: ಸಾಮಾಜಿಕ ಜಾಲತಾಣಗಳ ಮೂಲಕ ಪಾಕ್ನ ಐಎಸ್ಐ ಏಜೆಂಟ್ಗಳೊಂದಿಗೆ ಸಂಪರ್ಕದಲ್ಲಿದ್ದ ಯೋಧನೋರ್ವನನ್ನು ಬಂಧಿಸಿ, ಬೇಹುಗಾರಿಕಾ ಜಾಲವನ್ನು ಭೇದಿಸಲಾಗಿದೆ ಎಂದು ಪಂಜಾಬ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಗುಜರಾತ್ ನಿವಾಸಿಯಾದ ಯೋಧ ಕೃನಾಲ್ ಕುಮಾರ್ ಬರಿಯಾ ಎಂಬಾತನನ್ನು ಸ್ಟೇಟ್ ಸ್ಪೆಷಲ್ ಆಪರೇಷನ್ ಸೆಲ್ ಸಿಬ್ಬಂದಿ ಅಮೃತಸರದಲ್ಲಿ ಬಂಧಿಸಿದ್ದಾರೆ. ಕೃನಾಲ್ ಫಿರೋಜ್ಪುರ ಕಂಟೋನ್ಮೆಂಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದನು ಎಂದು ತಿಳಿದುಬಂದಿದೆ.
ಐಟಿ ಸೆಲ್‌ನಲ್ಲಿ ಸೇವೆಗೆ ನಿಯೋಜನೆಯಾಗಿದ್ದ ಕೃನಾಲ್ ಅದರ ಲಾಭ ಪಡೆದುಕೊಂಡು, ಅತ್ಯಂತ ಸೂಕ್ಷ್ಮ ಮತ್ತು ರಹಸ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದನು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದಿಂದ ಹಣವನ್ನೂ ಆತ ಪಡೆಯುತ್ತಿದ್ದನು ಎಂದು ಮೂಲಗಳು ತಿಳಿಸಿದೆ.