ಲೂಧಿಯಾನ(ಪಂಜಾಬ್): 25 ವರ್ಷಗಳ ಸುದೀರ್ಘ ಅಂತರದ ಬಳಿಕ ಕೊನೆಗೂ ಡಿಜಿಪಿ ಆದೇಶದ ಮೇರೆಗೆ ಶಸ್ತ್ರಾಸ್ತ್ರಗಳ ನಾಪತ್ತೆಕ್ಕೆ ಸಂಬಂಧಿಸಿದಂತೆ ಲೂಧಿಯಾನದ 3 ಹೆಡ್ ಕಾನ್ಸ್ಸ್ಟೇಬಲ್ಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣ 2004ಕ್ಕಿಂತಲೂ ಹಳೆಯದಾಗಿದ್ದು, ಪೋಲಿಸ್ ಇಲಾಖೆ 2004 ರಲ್ಲಿ ಶಸ್ತ್ರಾಸ್ತ್ರಗಳನ್ನು ಪರಿಶೀಲಿಸಿದಾಗ, 20 ಗುಂಡುಗಳು ಮತ್ತು 1 ಸ್ಟನ್ ಗನ್ ನಾಪತ್ತೆಯಾಗಿರುವುದು ಕಂಡು ಬಂದಿದೆ. ತನಿಖೆ ನಂತರ ನಾಪತ್ತೆಯಾದ ಶಸ್ತ್ರಾಸ್ತ್ರಗಳು ಜಾಗರಾನ್ ರಸ್ತೆಯ ನಿವಾಸಿ ಮಂಜಿತ್ ಸಿಂಗ್ ಅವರಿಗೆ ಸೇರಿದವು ಎಂದು ತಿಳಿದು ಬಂದಿತ್ತು.
ಈ ಶಸ್ತ್ರಾಸ್ತ್ರಗಳ ಭದ್ರತೆಗೆ ಹೆಡ್ ಕಾನ್ಸ್‌ಟೇಬಲ್ ಜಗ್ರೂಪ್ ಸಿಂಗ್, ಹೆಡ್ ಕಾನ್‌ಸ್ಟೆಬಲ್ ರಾಜಿಂದರ್ ಪಾಲ್ ಸಿಂಗ್ ಮತ್ತು ಎಸ್‌ಪಿಒ ಅಜಿತ್ ಸಿಂಗ್ ಅವರನ್ನು ನೇಮಿಸಲಾಗಿತ್ತು. ಆ ಸಂದರ್ಭದಲ್ಲಿ ಮೂರು ಕಾನ್ಸ್ಟೇಬಲ್ಗಳು ಉದ್ದೇಶಪೂರ್ವಕವಾಗಿ ಈ ಶಸ್ತ್ರಾಸ್ತ್ರಗಳನ್ನು ಕಳೆದುಕೊಂಡಿಲ್ಲ ಎಂದು ಕ್ಲೀನ್ ಚಿಟ್ ನೀಡಲಾಗಿತ್ತು.