ಕರ್ನಾಟಕ

karnataka

ETV Bharat / bharat

ಚಂದ್ರಬಾಬು ನಾಯ್ಡು ಪ್ರತಿಭಟನಾ ರ‍್ಯಾಲಿ ವೇಳೆ ಕಲ್ಲು ತೂರಾಟ - ವೈಆರ್​ಎಸ್​ ಕಾಂಗ್ರೆಸ್

ಪೊಲೀಸರಿಂದ ಸೂಕ್ತ ಭದ್ರತೆ ಇಲ್ಲದಿರುವುದರಿಂದ ಕಲ್ಲು ತೂರಾಟ ನಡೆದಿದೆ. ವೈಆರ್​ಎಸ್​ ಕಾಂಗ್ರೆಸ್​ ಗೂಂಡಾಗಳ ಕೃತ್ಯವಾಗಿದೆ ಎಂದು ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.

ap-stones-pelted-at-chandrababu-naidus-convoy
ಚಂದ್ರಬಾಬು ನಾಯ್ಡು ಪ್ರತಿಭಟನಾ ರ‍್ಯಾಲಿ ವೇಳೆ ಕಲ್ಲು ತೂರಾಟ

By

Published : Nov 4, 2022, 8:14 PM IST

ನಂದಿಗಾಮ (ಆಂಧ್ರ ಪ್ರದೇಶ): ಟಿಡಿಪಿ ಅಧ್ಯಕ್ಷ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬೆಂಗಾವಲು ಪಡೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಈ ಘಟನೆಯಲ್ಲಿ ನಾಯ್ಡು ಅವರ ಮುಖ್ಯ ಭದ್ರತಾ ಅಧಿಕಾರಿ ಮಧುಬಾಬು ಗಾಯಗೊಂಡಿದ್ದಾರೆ.

ಚಂದ್ರಬಾಬು ನಾಯ್ಡು ಅವರು ಆಂಧ್ರ ಪ್ರದೇಶದ ಎನ್​ಟಿಆರ್ ಜಿಲ್ಲೆಯ ಭೇಟಿ ವೇಳೆ ಈ ಘಟನೆ ನಡೆದಿದೆ. ಪ್ರತಿಭಟನಾ ಜಾಥಾ ನಡೆಸುತ್ತಿದ್ದ ಚಂದ್ರಬಾಬು ಬಾಬು ಮೇಲೆ ದುಷ್ಕರ್ಮಿಯೊಬ್ಬ ಕಲ್ಲು ಎಸೆದಿದ್ದಾನೆ ಎಂದು ಹೇಳಲಾಗಿದೆ. ಇದರಿಂದ ಮುಖ್ಯ ಭದ್ರತಾ ಅಧಿಕಾರಿ ಮಧುಬಾಬು ಅವರ ಮುಖಕ್ಕೆ ಪೆಟ್ಟು ಬಿದ್ದಿದ್ದು, ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ದಾರೆ.

ಪೊಲೀಸರಿಂದ ಸೂಕ್ತ ಭದ್ರತೆ ಇಲ್ಲದಿರುವುದರಿಂದ ಈ ಘಟನೆ ನಡೆದಿದೆ. ವೈಆರ್​ಎಸ್​ ಕಾಂಗ್ರೆಸ್​ ಗೂಂಡಾಗಳ ಕೃತ್ಯವಾಗಿದೆ. ಇದಕ್ಕೆ ನಾವು ಹೆದರುವುದಿಲ್ಲ ಎಂದು ಚಂದ್ರಬಾಬು ನಾಯ್ಡು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ಹಾಡಹಗಲೇ ಶಿವಸೇನೆ ಹಿಂದೂಸ್ತಾನ್ ಮುಖ್ಯಸ್ಥನಿಗೆ ಗುಂಡಿಕ್ಕಿ ಕೊಲೆ

ABOUT THE AUTHOR

...view details