ಕರ್ನಾಟಕ

karnataka

ETV Bharat / bharat

ಆಂಧ್ರಪ್ರದೇಶಕ್ಕೆ ನೂತನ ಡಿಜಿಪಿಯಾಗಿ 1992 ಬ್ಯಾಚ್​ನ ಐಪಿಎಸ್​ ಅಧಿಕಾರಿ ಆಯ್ಕೆ - ಆಂಧ್ರಪ್ರದೇಶದಗೆ ಹೊಸ ಡಿಜಿಪಿ

ಆಂಧ್ರಪ್ರದೇಶಕ್ಕೆ ನೂತನ ಡಿಜಿಪಿಯಾಗಿ 1992 ಬ್ಯಾಚ್​ನ ಐಪಿಎಸ್​ ಅಧಿಕಾರಿ ಆಯ್ಕೆ ಆಗಿದ್ದಾರೆ.

AP DGP Sawang removed,  Rajendranath given charge to AP DGP, Andhra Pradesh new DGP, Andhra Pradesh news, ಸವಾಂಗ್​ರನ್ನು ಡಿಜಿಪಿ ಹುದ್ದೆಯಿಂದ ವಜಾಗೊಳಿಸಿ ಆಂಧ್ರಪ್ರದೇಶ ಸರ್ಕಾರ, ನೂತನ ಡಿಜಿಪಿಯನ್ನು ಆಯ್ಕೆ ಮಾಡಿದ ಆಂಧ್ರಪ್ರದೇಶ, ನೂತನ ಡಿಜಿಪಿ ಆಗಿ ರಾಜೇಂದ್ರನಾಥ್​ ಆಯ್ಕೆ, ಆಂಧ್ರಪ್ರದೇಶದಗೆ ಹೊಸ ಡಿಜಿಪಿ, ಆಂಧ್ರಪ್ರದೇಶ ಸುದ್ದಿ,
1992 ಬ್ಯಾಚ್​ನ ಐಎಎಸ್​ ಅಧಿಕಾರಿ ಆಯ್ಕೆ

By

Published : Feb 16, 2022, 1:37 AM IST

Updated : Feb 16, 2022, 8:32 AM IST

ಅಮರಾವತಿ:ಮಂಗಳವಾರ ಆಂಧ್ರ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಪೊಲೀಸ್ ಫೋರ್ಸ್ ಮುಖ್ಯಸ್ಥ) ದಾಮೋದರ್ ಗೌತಮ್ ಸವಾಂಗ್​ರನ್ನು ಸರ್ಕಾರ ಹುದ್ದೆಯಿಂದ ಹಠಾತ್ತನೆ ವಜಾಗೊಳಿಸಿದೆ. ತೆರವಾದ ಸ್ಥಾನಕ್ಕೆ ಕೆವಿ ರಾಜೇಂದ್ರನಾಥ್ ರೆಡ್ಡಿರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದೆ.

ಆಂಧ್ರಪ್ರದೇಶಕ್ಕೆ ನೂತನ ಡಿಜಿಪಿ

ಪ್ರಸ್ತುತ ಗುಪ್ತಚರ ಮಹಾನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ 1992ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ರಾಜೇಂದ್ರನಾಥ್​ರನ್ನು ಆಂಧ್ರಪ್ರದೇಶ ನೂತನ ಡಿಜಿಪಿಯಾಗಿ ಆಯ್ಕೆ ಮಾಡಲಾಗಿದೆ.

ಓದಿ:ಬಂಗಾಳಿ ಗಾನ ಮಾಂತ್ರಿಕ ಸಂಧ್ಯಾ ಮುಖೋಪಾಧ್ಯಾಯ ಇನ್ನಿಲ್ಲ... ಸಿಎಂ ಸಂತಾಪ

ಸಾಮಾನ್ಯ ಆಡಳಿತ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವಂತೆ ಸವಾಂಗ್​ಗೆ ಆಂಧ್ರ ಮುಖ್ಯ ಕಾರ್ಯದರ್ಶಿ ಸಮೀರ್ ಶರ್ಮಾ ಸೂಚಿಸಿದ್ದಾರೆ. 1986ರ ಬ್ಯಾಚ್‌ನ ಅಧಿಕಾರಿಯಾಗಿರುವ ಸವಾಂಗ್, ವೈಎಸ್ ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೇ 30, 2019 ರಿಂದ ರಾಜ್ಯ ಡಿಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಇನ್ನು ಸವಾಂಗ್​ ಜುಲೈ 31, 2023 ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ. ರಾಜೇಂದ್ರನಾಥ್​ರನ್ನು ಡಿಜಿಪಿಯಾಗಿ ನೇಮಿಸುವಲ್ಲಿ ಸರ್ಕಾರವು ಅವರ ಇಬ್ಬರು ಬ್ಯಾಚ್‌ಮೇಟ್‌ಗಳು ಸೇರಿದಂತೆ ಕನಿಷ್ಠ 10 ಹಿರಿಯ ಅಧಿಕಾರಿಗಳನ್ನು ಹೊರತುಪಡಿಸಿ ಆಯ್ಕೆ ಮಾಡಿದೆ.

ಓದಿ:ಘಂಟೆ ಶಬ್ದ ಕಡಿಮೆ ಮಾಡುವಂತೆ ದೇವಾಲಯಕ್ಕೆ ಯಾವುದೇ ನೋಟಿಸ್​ ಬಂದಿಲ್ಲ: ಆನಂದ್ ಸಿಂಗ್ ಸ್ಪಷ್ಟನೆ

ಔಪಚಾರಿಕವಾಗಿ, DGP (HoPF) ಹುದ್ದೆಗೆ ಒಬ್ಬರನ್ನು ಆಯ್ಕೆ ಮಾಡಲು ಸರ್ಕಾರವು ಮೂರು ಅರ್ಹ ಅಧಿಕಾರಿಗಳ ಹೆಸರಿನ ಫಲಕವನ್ನು UPSC ಗೆ ಕಳುಹಿಸಬೇಕಾಗುತ್ತದೆ. ಯುಪಿಎಸ್‌ಸಿಯ ಅನುಮತಿಯ ಮೇರೆಗೆ ರಾಜೇಂದ್ರನಾಥ್​ರನ್ನು ನಿಯಮಿತ ಡಿಜಿಪಿಯಾಗಿ ನೇಮಿಸಬಹುದಾಗಿದೆ.

Last Updated : Feb 16, 2022, 8:32 AM IST

ABOUT THE AUTHOR

...view details