ಕರ್ನಾಟಕ

karnataka

ETV Bharat / bharat

ಐಟಿ ದಾಳಿ: ಮುಂದುವರಿದ ಅನುರಾಗ್ ಕಶ್ಯಪ್, ತಾಪ್ಸಿ ಪನ್ನು ವಿಚಾರಣೆ - ತಾಪ್ಸಿ ಪನ್ನು ವಿಚಾರಣೆ

ಫ್ಯಾಂಟಮ್ ಫಿಲ್ಮ್ ಕಂಪನಿಯ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಾರ್ಚ್​ 3 ರಂದು ದಾಳಿ ನಡೆಸಿದ್ದು, ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ನಟಿ ತಾಪ್ಸಿ ಪನ್ನು ಅವರನ್ನು ಪುಣೆಯ ಹೋಟೆಲ್‌ವೊಂದರಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

Anurag Kashyap Tapsi Pannu
Anurag Kashyap Tapsi Pannu

By

Published : Mar 5, 2021, 10:48 AM IST

ಮುಂಬೈ: ಬಾಲಿವುಡ್​ನ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಅನುರಾಗ್ ಕಶ್ಯಪ್, ನಟಿ ತಾಪ್ಸಿ ಪನ್ನು, ಚಿತ್ರ ನಿರ್ಮಾಪಕ ಮಧು ವರ್ಮಾ ಮೊಂಟಾನಾ ಹಾಗೂ ವಿಕ್ರಮಾದಿತ್ಯ ಮನೆ ಮತ್ತು ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು, ಈ ಕುರಿತು ತನಿಖೆ ಮುಂದುವರೆದಿದೆ.

ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ನಟಿ ತಾಪ್ಸಿ ಪನ್ನು ಅವರನ್ನು ಪುಣೆಯ ಹೋಟೆಲ್‌ವೊಂದರಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಫ್ಯಾಂಟಮ್ ಫಿಲ್ಮ್ ಮತ್ತು ಕ್ವಾನ್ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಕಂಪನಿಯ ಕಚೇರಿ ಮೇಲೆ ನಡೆಸಿದ ದಾಳಿಯಲ್ಲಿ ಆದಾಯ ತೆರಿಗೆ ಇಲಾಖೆ ಹೆಚ್ಚಿನ ಸಂಖ್ಯೆಯ ದಾಖಲೆಗಳು ಮತ್ತು ಡಿಜಿಟಲ್ ಡೇಟಾವನ್ನು ವಶಪಡಿಸಿಕೊಂಡಿದ್ದು, ಈ ಕುರಿತು ತನಿಖೆ ಮುಂದುವರೆಸಿದೆ.

ಬರೋಬ್ಬರಿ 650 ಕೋಟಿ ರೂ.ಗಳ ವ್ಯಾಪಾರ ವಹಿವಾಟನ್ನು ಆದಾಯ ತೆರಿಗೆ ಇಲಾಖೆ ಪರಿಶೀಲಿಸುತ್ತಿದೆ. ಜೊತೆಗೆ ಇಂದೂ ಕೂಡ ಮುಂಬೈ, ಹೈದರಾಬಾದ್, ದೆಹಲಿ ಮತ್ತು ಪುಣೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.

ಇಲ್ಲಿಯವರೆಗೆ ದೊರೆತ ಮಾಹಿತಿಯ ಪ್ರಕಾರ, ತಾಪ್ಸಿ ಪನ್ನು ಅವರ ಮನೆಯಿಂದ 5 ಕೋಟಿ ರೂ.ಗಳ ನಗದು ರಶೀದಿಯನ್ನು ಪಡೆಯಲಾಗಿದ್ದು, ಪ್ರಸ್ತುತ ತಾಪ್ಸಿ ಪನ್ನು ಅವರು 12 ಪ್ರಾಜೆಕ್ಟ್​ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಚಿನ ಮೊತ್ತವನ್ನು ಪಡೆದಿದ್ದಾರೆ. ಜೊತೆಗೆ ತೆರಿಗೆಯನ್ನು ಸಹ ನಿಯಮಿತವಾಗಿ ಪಾವತಿಸಿಲ್ಲ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಅನುರಾಗ್ ಕಶ್ಯಪ್, ತಾಪ್ಸಿ ಪನ್ನು ಮನೆ ಮೇಲೆ ಐಟಿ ದಾಳಿ: ವಿಚಾರಣೆಗೆ ಹಾಜರಾಗುವಂತೆ ಸೂಚಿಸುವ ಸಾಧ್ಯತೆ

ABOUT THE AUTHOR

...view details