ಕರ್ನಾಟಕ

karnataka

ETV Bharat / bharat

ಕಷ್ಟದ ದಿನಗಳಲ್ಲೂ ಸ್ಥಿರತೆ, ನಮ್ಮ ಗುರಿ ಬಗ್ಗೆ ಸ್ಪಷ್ಟತೆ ಮುಖ್ಯ ಎಂದ UPSC ಟಾಪರ್​​ ಅಂಕಿತಾ!

ಕೇಂದ್ರ ನಾಗರಿಕ ಸೇವಾ ಆಯೋಗ (UPSC) 2021ರ ನಾಗರಿಕ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟಗೊಂಡಿದೆ. ಇದರಲ್ಲಿ ಅಂಕಿತಾ ಅಗರ್ವಾಲ್ 2ನೇ ಸ್ಥಾನ ಪಡೆದುಕೊಂಡಿದ್ದಾರೆ.

Ankita Agarwal on UPSC Civil services Exam
Ankita Agarwal on UPSC Civil services Exam

By

Published : May 30, 2022, 8:47 PM IST

ಫರಿದಾಬಾದ್​(ಹರಿಯಾಣ):2021ರ ಕೇಂದ್ರ ಲೋಕಸೇವಾ ಆಯೋಗದ ಅಂತಿಮ ಪರೀಕ್ಷೆಯಲ್ಲಿ ಹರಿಯಾಣದ ಅಂಕಿತಾ ಅಗರ್ವಾಲ್​​ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಅವರು ತಮ್ಮ ಮನದಾಳ ಬಿಚ್ಚಿಟ್ಟಿದ್ದು, ಮಹಿಳಾ ಸಬಲೀಕರಣ ಮತ್ತು ಪ್ರಾಥಮಿಕ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮನದಾಳ ಬಿಚ್ಚಿ ಮಾತನಾಡಿದ ಅಂಕಿತಾ

2020ರ ಬ್ಯಾಚ್​​ನ ಭಾರತೀಯ ಕಂದಾಯ ಸೇವೆ(ಕಸ್ಟಮ್ಸ್​​ ಮತ್ತು ಸೆಂಟ್ರಲ್ ಎಕ್ಸೈಸ್​​) ಅಧಿಕಾರಿಯಾಗಿರುವ ಅಂಕಿತಾ ಅಗರ್ವಾಲ್​ ಇದೀಗ ಯುಪಿಎಸ್​​ಸಿ ಪರೀಕ್ಷೆಯಲ್ಲಿ ಪಾಸ್​​ ಆಗಿದ್ದು, 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಪರೀಕ್ಷೆಯಲ್ಲಿ 2ನೇ ಸ್ಥಾನ ಪಡೆದುಕೊಂಡಿರುವುದಕ್ಕೆ ತುಂಬಾ ಸಂತೋಷವಾಗ್ತಿದೆ.

ಈ ವೃತ್ತಿ ಆಯ್ಕೆ ಮಾಡಿಕೊಂಡಿರುವ ಮುಖ್ಯ ಉದ್ಧೇಶ ಮಹಿಳೆಯರ ಸಬಲೀಕರಣ, ಪ್ರಾಥಮಿಕ ಆರೋಗ್ಯ ಮತ್ತು ಶಾಲಾ ಶಿಕ್ಷಣ ಕ್ಷೇತ್ರಗಳಲ್ಲಿ ಹೊಸ ಸುಧಾರಣೆ ತರುವುದು ಎಂದಿದ್ದಾರೆ. ಮೂಲತಃ ಕೋಲ್ಕತ್ತಾದವರಾಗಿರುವ ಅಗರ್ವಾಲ್​​ ತಮ್ಮ ಮೂರನೇ ಪ್ರಯತ್ನದಲ್ಲಿ UPSC ಪರೀಕ್ಷೆ ಪಾಸ್ ಮಾಡಿದ್ದಾರೆ. ಈ ಹಿಂದೆ ಮೊದಲ ಯತ್ನದಲ್ಲೇ ಭಾರತೀಯ ಕಂದಾಯ ಸೇವೆ (IRS) ಪಾಸ್ ಮಾಡಿದ್ದು, ಸದ್ಯ ಹರಿಯಾಣದಲ್ಲಿ ಕೆಲಸ ಮಾಡ್ತಿದ್ದಾರೆ.

ಇದನ್ನೂ ಓದಿ:UPSC 2021 Results: ಪರೀಕ್ಷೆಯಲ್ಲಿ ಒಟ್ಟಿಗೆ ಪಾಸ್​ ಆದ ಇಬ್ಬರು ವೈದ್ಯ ಸಹೋದರರು

ಕಠಿಣ ಪರೀಕ್ಷೆಗೆ ತಯಾರಿ ನಡೆಸಿದ್ದು ಮತ್ತು ಅದರಲ್ಲಿ ಯಶಸ್ವಿಯಾಗಿರುವ ಬಗ್ಗೆ ಕೇಳಿದಾಗ, ಪರೀಕ್ಷೆ ತಯಾರಿಗೋಸ್ಕರ ಸಾಧ್ಯವಾದಷ್ಟು ಸಮಯ, ಅಧ್ಯಯನದ ವೇಳೆ ಅಗತ್ಯವಾದ ಸಮಯವನ್ನ ಬಳಸಿಕೊಂಡು ನಿರಂತರವಾಗಿ ಓದುವ ಹವ್ಯಾಸ ಇಟ್ಟುಕೊಂಡಿದ್ದೇನೆ ಎಂದಿದ್ದಾರೆ. ನಾಗರಿಕ ಸೇವೆ ಪರೀಕ್ಷೆಯಲ್ಲಿ ಪಾಸಾಗಲು ನಮಗೆ ಸ್ಪಷ್ಟತೆ ಇರಬೇಕು.

ಕಷ್ಟದ ದಿನಗಳಲ್ಲೂ ಸ್ಥಿರತೆ ಮುಖ್ಯವಾಗಿದ್ದು, ನಮಗೆ ನಾವು ಪ್ರೇರಣೆಯಾಗಿರಬೇಕು ಎಂದು ತಿಳಿಸಿದರು. ದೆಹಲಿಯ ಸೇಂಟ್​ ಸ್ಟೀಫನ್ಸ್ ಕಾಲೇಜ್​​ನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದುಕೊಂಡಿರುವ ಅಂಕಿತಾ, ಯುಪಿಎಸ್​​ಸಿಯಲ್ಲಿ ರಾಜಕೀಯ ವಿಜ್ಞಾನ ಮತ್ತು ಅಂತಾರಾಷ್ಟ್ರೀಯ ಸಂಬಂಧ ವಿಷಯವನ್ನ ಐಚ್ಛಿಕವಾಗಿ ಆಯ್ಕೆ ಮಾಡಿಕೊಂಡಿದ್ದರು.

ಈ ಸಲದ ಯುಪಿಎಸ್​​ಸಿ ಪರೀಕ್ಷೆಯಲ್ಲಿ 685 ಅಭ್ಯರ್ಥಿಗಳು ಪಾಸ್ ಆಗಿದ್ದು, ಇದರಲ್ಲಿ 508 ಪುರುಷ ಅಭ್ಯರ್ಥಿಗಳು, 117 ಮಹಿಳೆಯರು ಇದ್ದಾರೆ. ವಿಶೇಷವೆಂದರೆ ಟಾಪ್​ 25ರಲ್ಲಿ 15 ಪುರುಷರು ಹಾಗೂ 10 ಮಹಿಳೆಯರಿದ್ದು, ಮೊದಲ ನಾಲ್ಕು ಸ್ಥಾನ ಮಹಿಳಾ ಅಭ್ಯರ್ಥಿಗಳ ಪಾಲಾಗಿವೆ.

ABOUT THE AUTHOR

...view details