ಭೋಪಾಲ್:ದೇಶದಲ್ಲಿ ಕೊರೊನಾ ಮಹಾಮಾರಿ ತಂದಿಟ್ಟಿರುವ ಸಂಕಷ್ಟ ಅಷ್ಟಿಷ್ಟಲ್ಲ. ಇದರಿಂದ ಎಲ್ಲ ವಲಯದ ಜನರು ಆರ್ಥಿಕ ತೊಂದರೆಗೊಳಗಾಗಿದ್ದಾರೆ. ಅನ್ನದಾತರಿಗೆ ಮಾತ್ರ ಕೊರೊನಾ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಅನ್ನದಾತರು ಬೆಳೆದ ಬೆಲೆಗೆ ಸರಿಯಾದ ಮಾರುಕಟ್ಟೆ ಹಾಗೂ ಬೆಲೆ ಸಿಗದ ಕಾರಣ ತೊಂದರೆಗೊಳಗಾಗಿದ್ದಾರೆ. ಮಧ್ಯಪ್ರದೇಶದ ಭೋಪಾಲ್ನಲ್ಲಿ ರೈತನೊಬ್ಬ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದ ಕಾರಣ ರಸ್ತೆ ಮೇಲೆ ಸುರಿದು ಆಕ್ರೋಶ ಹೊರಹಾಕಿದ್ದಾನೆ. ಗದ್ದೆಯಲ್ಲಿ ಬೆಳೆದಿದ್ದ ಸೌತೆಕಾಯಿ ರಸ್ತೆ ಮೇಲೆ ಸುರಿದು ಹೋಗಿದ್ದಾನೆ. ಇದರ ವಿಡಿಯೋ ಇದೀಗ ವೈರಲ್ ಆಗಿದೆ.