ಅಮರಾವತಿ:ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಸಿಎಂ ಜಗನ್ಮೋಹನ್ ರೆಡ್ಡಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಓದಿ: 'ನಮಗೆ ಬೇಕಾದುದನ್ನ ಪಡೆದುಕೊಂಡಿದ್ದೇವೆ': ಆರ್ಸಿಬಿ ಹೊಸ ಟೀಂ ಬಗ್ಗೆ ವಿರಾಟ್ ಮಾತು..!
ಅಮರಾವತಿ:ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಸಿಎಂ ಜಗನ್ಮೋಹನ್ ರೆಡ್ಡಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಓದಿ: 'ನಮಗೆ ಬೇಕಾದುದನ್ನ ಪಡೆದುಕೊಂಡಿದ್ದೇವೆ': ಆರ್ಸಿಬಿ ಹೊಸ ಟೀಂ ಬಗ್ಗೆ ವಿರಾಟ್ ಮಾತು..!
ವ್ಯಾಪಕ ಕೈಗಾರೀಕರಣ ಆಗಬೇಕಾದರೆ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಅವಶ್ಯಕತೆ ಇದೆ ಎಂದು ಸಿಎಂ ಜಗನ್ ರೆಡ್ಡಿ ಪ್ರತಿಪಾದಿಸಿದ್ದಾರೆ. ಸಂಸತ್ನಲ್ಲಿ ಮಾತು ಕೊಟ್ಟಂತೆ ಹಾಗೂ ವಿಭಜನೆ ಪೂರ್ವ ನೀಡಿದ ಭರವಸೆಯಂತೆ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನ ಮಾನ ನೀಡಿ ಹೆಚ್ಚಿನ ನೆರವು ನೀಡಬೇಕು ಎಂದು ಜಗನ್ ಒತ್ತಾಯಿಸಿದ್ದಾರೆ.
ಇಂದು ನಡೆದ ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಂಡ ಜಗನ್, ಪ್ರಧಾನಿ ಎದುರು ಈ ಪ್ರಸ್ತಾವ ಮಂಡಿಸಿದರು. ದಕ್ಷಿಣ ರಾಜ್ಯಗಳಲ್ಲಿ ಕೈಗಾರಿಕಾ ಅಭಿವೃದ್ಧಿ, ಹಾಗೂ ವ್ಯಾಪಾರ ಅಭಿವೃದ್ಧಿ ಪೂರಕ ವಾತಾವರಣ ಸೃಷ್ಟಿ ಮಾಡಬೇಕಾದರೆ ವಿಶೇಷ ಸ್ಥಾನಮಾನದ ಅವಶ್ಯಕತೆ ಇದೆ. ವಿಭಜನೆ ವೇಳೆ ಆಂಧ್ರಪ್ರದೇಶಕ್ಕೆ ಸಾಕಷ್ಟು ತೊಂದರೆ ಆಗಿದೆ, ಇದನ್ನೆಲ್ಲ ಸರಿ ಪಡಿಸಬೇಕು ಎಂದರೆ ವಿಶೇಷ ಸ್ಥಾನಮಾನ ಹಾಗೂ ಹಣಕಾಸು ನೆರವು ಅಗತ್ಯವಿದೆ ಎಂದು ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿದ್ದಾರೆ.