ಅಮರಾವತಿ :ರಾಜ್ಯ ಸರ್ಕಾರಿ ನೌಕರರು ಮತ್ತು ಆಂಧ್ರಪ್ರದೇಶ ಸರ್ಕಾರದ ನಡುವಿನ ಹಗ್ಗಜಗ್ಗಾಟಕ್ಕೆ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ತೆರೆ ಎಳೆದಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿರುವ ಅವರು, ಶೇ.23ರಷ್ಟು ವೇತನ ಹೆಚ್ಚಳ ಮಾಡಿದ್ದಲ್ಲದೇ ರಾಜ್ಯ ಸರ್ಕಾರಿ ಸಿಬ್ಬಂದಿಯ ನಿವೃತ್ತಿ ವಯಸ್ಸನ್ನು ಎರಡು ವರ್ಷಗಳಷ್ಟು ಹೆಚ್ಚಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರು ಎತ್ತಿರುವ ಬೇಡಿಕೆಗಳ ಮೇಲಿನ ಚರ್ಚೆಯ ಎರಡನೇ ದಿನದಲ್ಲಿ ಈ ಘೋಷಣೆ ಹೊರ ಬಿದ್ದಿದೆ.
ಓದಿ:ಈಶ್ವರಪ್ಪ ಬಿಡಿ, ಅವರು ಈಶ್ವರ.. ಒಂದೊಂದು ಬಾರಿ ಒಂದೊಂದು ರೀತಿ ಇರುತ್ತಾರೆ.. ಸಚಿವ ಸೋಮಣ್ಣ
ಶುಕ್ರವಾರ ಇಲ್ಲಿನ ವಿವಿಧ ನೌಕರರ ಸಂಘಗಳ ಜತೆಗಿನ ಸಭೆಯಲ್ಲಿ ಮಾತನಾಡಿದ್ದ ಸಿಎಂ ಜಗನ್ಮೋಹನ್ ರೆಡ್ಡಿ,ಶೇ.23ರಷ್ಟು ಫಿಟ್‌ಮೆಂಟ್ ಘೋಷಿಸಿದ್ದರು. ಹೊಸ ವೇತನ ಶ್ರೇಣಿಗಳು ಜನವರಿ 2022ರಿಂದ ಜಾರಿಗೆ ಬರುತ್ತವೆ ಎಂದು ಘೋಷಿಸಿದ್ದಾರೆ. ಸರ್ಕಾರಿ ನೌಕರರಿಗೆ ಇನ್ನೊಂದು ಒಳ್ಳೆಯ ಸುದ್ದಿ ಅಂದ್ರೆ ನಿವೃತ್ತಿ ವಯಸ್ಸನ್ನು 60 ವರ್ಷದಿಂದ 62 ವರ್ಷಕ್ಕೆ ಹೆಚ್ಚಿಸಲಾಗಿದೆ ಎಂದಿದ್ದಾರೆ.
ಮುಖ್ಯ ಕಾರ್ಯದರ್ಶಿ ಸಮಿತಿ ಸೂಚಿಸಿದ ಶೇ.14.29ರ ಪಿಆರ್‌ಸಿಗಿಂತ ಶೇ.9ರಷ್ಟು ಹೆಚ್ಚು ಫಿಟ್‌ಮೆಂಟ್ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಇದೇ ವೇಳೆ ಹೇಳಿದ್ದಾರೆ. ವೇತನ ಹೆಚ್ಚಳವು ಜುಲೈ 1, 2018ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ.
ಅದೇ ರೀತಿ, ವಿತ್ತೀಯ ಪ್ರಯೋಜನಗಳನ್ನು ಏಪ್ರಿಲ್ 1, 2020ರಿಂದ ಅನ್ವಯಿಸಲಾಗುತ್ತದೆ. ಆದರೆ, ವರ್ಧಿತ ವೇತನ ಶ್ರೇಣಿಯು ಬಾಕಿ ಇರುವ ಡಿಎಗಳೊಂದಿಗೆ ಜನವರಿ 2022 ರಿಂದ ಜಾರಿಗೆ ಬರಲಿದೆ ಸಿಎಂ ಜಗನ್ ತಿಳಿಸಿದ್ದಾರೆ.