ಕರ್ನಾಟಕ

karnataka

ETV Bharat / bharat

'ಚಿಕ್ಕ ಬಜೆಟ್​ ಅತ್ಯಂತ ಪ್ರಭಾವಶಾಲಿಯಾಗಿದೆ'; ವಿತ್ತ ಸಚಿವೆ ಬಜೆಟ್​​ಗೆ ಆನಂದ್ ಮಹೀಂದ್ರಾ ಮೆಚ್ಚುಗೆ

Anand Mahindra on Nirmala Seetharaman Budget: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2022-23ನೇ ಸಾಲಿನ ಬಜೆಟ್​ಗೆ ವಿಭಿನ್ನ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗ್ತಿದ್ದು, ಉದ್ಯಮಿ ಆನಂದ್ ಮಹೀಂದ್ರಾ ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Anand Mahindra on Nirmala Sitharaman Budget
Anand Mahindra on Nirmala Sitharaman Budget

By

Published : Feb 1, 2022, 4:01 PM IST

ನವದೆಹಲಿ:ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಇಂದು 4ನೇ ಬಜೆಟ್ ಮಂಡನೆ ಮಾಡಿದ್ದು, ಸುಮಾರು 90 ನಿಮಿಷಗಳ ಕಾಲ ಬಜೆಟ್ ಪ್ರತಿ ಓದಿದ್ದಾರೆ. ಕೇಂದ್ರದಿಂದ ಮಂಡನೆಯಾಗಿರುವ 2022-23ನೇ ಸಾಲಿನ ಆಯವ್ಯಯಕ್ಕೆ ಅನೇಕರು ತರಹೇವಾರಿ ಕಮೆಂಟ್ ಮಾಡಿದ್ದು, ಇದೀಗ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಗ್ರೂಪ್ ಅಧ್ಯಕ್ಷರಾಗಿರುವ ಆನಂದ್ ಮಹೀಂದ್ರಾ ಕೂಡ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿರುವ ಬಜೆಟ್​​ಗೆ ಆನಂದ್ ಮಹೀಂದ್ರಾ ಮೆಚ್ಚುಗೆ ವ್ಯಕ್ತಪಡಿಸಿ, ಟ್ವೀಟ್ ಮಾಡಿದ್ದಾರೆ.

ಆನಂದ್ ಮಹೀಂದ್ರಾ ಟ್ವೀಟ್..ಸಂಕ್ಷಿಪ್ತವಾಗಿರುವುದು ಯಾವಾಗಲೂ ಸದ್ಗುಣದಿಂದ ಕೂಡಿರುತ್ತದೆ. ನಿರ್ಮಲಾ ಸೀತಾರಾಮನ್ ಮಂಡಿಸಿರುವ ಚಿಕ್ಕ ಬಜೆಟ್​​ ಅತ್ಯಂತ ಪ್ರಭಾವಶಾಲಿಯಾಗಿದೆ ಎಂಬುದನ್ನ ಸಾಬೀತುಪಡಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಆರ್ಥಿಕ ಒತ್ತಡದ ಸಮಯದಲ್ಲಿ ಅದನ್ನ ಪುನರುಜ್ಜೀವನಗೊಳಿಸಲು ಸಾಕಷ್ಟು ಖರ್ಚು ಮಾಡುವುದು ಸರ್ಕಾರದ ಜವಾಬ್ದಾರಿ. ಈ ಸಲ ಮಂಡನೆಯಾಗಿರುವ ಬಜೆಟ್​ನಿಂದ ಕೆಲವೊಂದಿಷ್ಟು ನಿರೀಕ್ಷೆ ಹೊಂದಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿರಿ:ಕೇಂದ್ರ ಬಜೆಟ್​​ 2022: ಕೃಷಿ ಕ್ಷೇತ್ರದಿಂದ ರಕ್ಷಣಾ ವಲಯ.. ಯಾವ ವಲಯಕ್ಕೆ ಎಷ್ಟೊಂದು ಕೋಟಿ ಹಣ ಸಿಕ್ತು ನೋಡಿ

ಭವಿಷ್ಯದ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಿದ್ದು, ಪ್ರಮುಖವಾಗಿ ರಕ್ಷಣಾ ಇಲಾಖೆ, ರೈಲ್ವೆ ಸಚಿವಾಲಯ, ಕೃಷಿ ವಲಯಕ್ಕೆ ಹಾಗೂ ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಬೆಳಗ್ಗೆ 11 ಗಂಟೆಗೆ ಬಜೆಟ್​ ಮಂಡನೆ ಮಾಡಲು ಶುರು ಮಾಡಿದ್ದ ನಿರ್ಮಲಾ ಸೀತಾರಾಮನ್​ 12:30ಕ್ಕೆ ಮುಗಿಸಿದ್ದರು. ಇದು ಅವರ ಅತ್ಯಂತ ಚಿಕ್ಕ ಬಜೆಟ್​ಗಳಲ್ಲಿ ಒಂದಾಗಿದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details