ಗುಜರಾತ್: ಬುಧವಾರ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಸಾರ್ವತ್ರಿಕ ಬಜೆಟ್ ಎಫೆಕ್ಟ್ ಒಂದೊಂದೇ ಕ್ಷೇತ್ರದ ಮೇಲೆ ಪ್ರಭಾವ ಬೀರಲು ಪ್ರಾರಂಭಿಸಿದ್ದು, ಇಂದು ಬೆಳಗ್ಗೆ ಬೆಳಗ್ಗೆ ಅಮುಲ್ ಕಂಪನಿ ತನ್ನ ಗ್ರಾಹಕರಿಗೆ ಬಿಗ್ ಶಾಕ್ ಒಂದನ್ನು ನೀಡಿದೆ.
ಅಮುಲ್ ಬ್ರಾಂಡ್ ಹೆಸರಿನಲ್ಲಿ ತನ್ನ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್) ಶುಕ್ರವಾರ ಗುಜರಾತ್ ಹೊರತುಪಡಿಸಿ ಬೇರೆಲ್ಲಾ ರಾಜ್ಯಗಳ ಮಾರುಕಟ್ಟೆಗಳಲ್ಲಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 2 ರೂಪಾಯಿ ಏರಿಕೆ ಮಾಡಿದೆ. ಈ ಬೆಲೆ ಏರಿಕೆ ಇಂದಿನಿಂದಲೇ ಜಾರಿಗೆ ಬಂದಿದೆ.
ಆನಂದ್ ಪ್ರಧಾನ ಕಛೇರಿಯ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಮಾತನಾಡಿ, ಹಾಲಿನ ಬೆಲೆ ಏರಿಕೆ ಗುಜರಾತ್‌ಗೆ ಅನ್ವಯಿಸುವುದಿಲ್ಲ. ನಾವು ಗುಜರಾತ್ ಹೊರತುಪಡಿಸಿ ದೆಹಲಿ, ಕೋಲ್ಕತ್ತಾ ಮತ್ತು ಮುಂಬೈನಂತಹ ಇತರ ಮಾರುಕಟ್ಟೆಗಳಲ್ಲಿ ಹಾಲಿನ ದರವನ್ನು ಲೀಟರ್‌ಗೆ 2 ರೂಪಾಯಿ ಹೆಚ್ಚಿಸಿದ್ದೇವೆ. ಸದ್ಯಕ್ಕೆ ಗುಜರಾತ್‌ನಲ್ಲಿ ಹಾಲಿನ ದರದಲ್ಲಿ ಯಾವುದೇ ಹೆಚ್ಚಳವಾಗಿಲ್ಲ ಎಂದು ತಿಳಿಸಿದ್ದಾರೆ.
ಹೊಸ ಬೆಲೆಗಳು ಶುಕ್ರವಾರ ಬೆಳಗ್ಗೆಯಿಂದಲೇ ಅಂದರೆ ಇಂದಿನಿಂದಲೇ ಜಾರಿಗೆ ಬರುತ್ತವೆ. ಬೆಲೆ ಏರಿಕೆಯೊಂದಿಗೆ ಇಂದಿನಿಂದ ಅಮುಲ್ ತಾಜಾ ಹಾಲಿನ ಒಂದು ಲೀಟರ್ ಪೌಚ್ ಬೆಲೆ 54 ರೂ ಆಗಿದ್ದರೆ, ಒಂದು ಲೀಟರ್ ಅಮುಲ್ ಗೋಲ್ಡ್ ರೂ 66 ಕ್ಕೆ ಮಾರಾಟವಾಗಲಿದೆ. ಒಂದು ಲೀಟರ್ ಹಸುವಿನ ಹಾಲಿನ ಬೆಲೆ ರೂ 56, ಅಮುಲ್ ಎ2 ಎಮ್ಮೆಯ ಹಾಲಿನ ಪೌಚ್ ರೂ 70ಕ್ಕೆ ಮಾರಾಟವಾಗುತ್ತಿದೆ. ಎಂದು ಜಿಸಿಎಂಎಂಎಫ್ ತನ್ನ ಮುಂಬೈ ಕಚೇರಿ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ.
ಅಮೂಲ್ ಹಾಲಿನ ಉತ್ಪನ್ನಗಳ ಹೊಸ ಬೆಲೆ ಇಂತಿದೆ
ಅಮೂಲ್ ತಾಜಾ ಹಾಲು : ಲೀಟಟರ್ಗೆ 54 ರೂ