ಅಮರಾವತಿ: ಮಹಾರಾಷ್ಟ್ರದ ಅಮರಾವತಿ ನದಿಯಲ್ಲಿ ದೋಣಿ ಮುಳುಗುವ ಮುನ್ನದ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ದೋಣಿ ಮಗುಚಿ ಬೀಳುವ ಮುನ್ನದ ವಿಡಿಯೋ ಇದಾಗಿದ್ದು, ಜಿಲ್ಲೆಯ ಜುಂಜ್ ಹಳ್ಳಿಯ ಮೂಲಕ ಹರಿಯುವ ವಾರ್ಧಾ ನದಿಯಲ್ಲಿ ಮಂಗಳವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ.
ಭಯಾನಕ ದೃಶ್ಯ.. ದೋಣಿ ಮುಳುಗಿ ಮೂವರ ಸಾವು, 8 ಮಂದಿ ನಾಪತ್ತೆ...VIDEO - Amravati boat accident
ಜಿಲ್ಲೆಯ ಜುಂಜ್ ಹಳ್ಳಿಯ ಮೂಲಕ ಹರಿಯುವ ವಾರ್ಧಾ ನದಿಯಲ್ಲಿ ಮಂಗಳವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ದೋಣಿ ಮುಳುಗಿದ್ದು, ಇದರಲ್ಲಿ ಮೂವರು ಸಾವಿಗೀಡಾದರೆ ಇನ್ನೂ 8 ಜನ ನಾಪತ್ತೆಯಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ.
ದೋಣಿ ಮುಳುಗಿ ಮೂವರ ಸಾವು, 8 ಮಂದಿ ನಾಪತ್ತೆ
ಘಟನೆಯಲ್ಲಿ ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇನ್ನಿಬ್ಬರು ಬದುಕುಳಿದಿದ್ದಾರೆ. ಉಳಿದ ಎಂಟು ಮಂದಿ ನಾಪತ್ತೆಯಾಗಿದ್ದಾರೆ.
ದೋಣಿಯಲ್ಲಿ ಕುಳಿತಿದ್ದವರು ವಿಹಾರಕ್ಕೆ ಎಂದು ಬಂದಿದ್ದರು ಎನ್ನಲಾಗಿದೆ. ದೋಣಿಯಲ್ಲಿ ಕುಳಿತಿದ್ದ ವೇಳೆ ಭೋರ್ಗರೆದು ಹರಿಯುತ್ತಿದ್ದ ನದಿಗೆ ನಿಯಂತ್ರಣ ತಪ್ಪಿ ದೋಣಿ ಮಗುಚಿ ಬಿದ್ದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಶಾಸಕ ದೇವೇಂದ್ರ ಅವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನುಳಿದವರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ.
Last Updated : Sep 16, 2021, 8:11 AM IST