ಕರ್ನಾಟಕ

karnataka

ETV Bharat / bharat

ಹರಿಯಾಣದ ಕಾರ್ಖಾನೆಯೊಂದರಲ್ಲಿ ಅಮೋನಿಯಾ ಅನಿಲ ಸೋರಿಕೆ: ಸ್ಥಳೀಯರಲ್ಲಿ ಆತಂಕ

ಹರಿಯಾಣದ ಜಜ್ಜರ್ ಜಿಲ್ಲೆಯ ಕಾರ್ಖಾನೆಯೊಂದರಲ್ಲಿ ಗುರುವಾರ ಸಂಜೆ ಅಮೋನಿಯಾ ಅನಿಲ ಸೋರಿಕೆಯಾಗಿದೆ. ಈ ಘಟನೆ ಸ್ಥಳೀಯ ಜನರಲ್ಲಿ ಆತಂಕ ಮೂಡಿಸಿದೆ.

Ammonia gas leak at a factory in Jhajjar
ಹರಿಯಾಣದ ಕಾರ್ಖಾನೆಯೊಂದರಲ್ಲಿ ಅಮೋನಿಯಾ ಅನಿಲ ಸೋರಿಕೆ

By

Published : Apr 29, 2022, 10:34 AM IST

ಜಜ್ಜರ್: ಹರಿಯಾಣದ ಜಜ್ಜರ್‌ ಕಾರ್ಖಾನೆಯೊಂದರಲ್ಲಿ ಅಮೋನಿಯಾ ಅನಿಲ ಸೋರಿಕೆಯಾದ ಘಟನೆ ತಡರಾತ್ರಿ ನಡೆದಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಅನಿಲ ಸೋರಿಕೆಯಿಂದ ಈ ಪ್ರದೇಶದಲ್ಲಿ ವಾಸಿಸುವ ಕೆಲವು ಸ್ಥಳೀಯರು ಉಸಿರಾಟದ ಸಮಸ್ಯೆಯಿಂದ ಬಳಲಿದ್ದಾರೆ ಎನ್ನಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಅಧಿಕಾರಿಗಳು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿದು ಬಂದಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ರಾತ್ರಿ 9.15ರ ಸುಮಾರಿಗೆ ಘಟನೆ ನಡೆದಿದೆ. ಅಮೋನಿಯಾ ಅನಿಲ ಸೋರಿಕೆ ಸುದ್ದಿ ತಿಳಿಯುತ್ತಿದ್ದಂತೆಯೇ ಜನರು ಮನೆಯಿಂದ ಹೊರಗೆ ಬಂದು ಇತ್ತಿಂದತ್ತ ಓಡಲಾರಂಭಿಸಿದರು. ಬಳಿಕ ಜನರಿಗೆ ಕಣ್ಣು ಉರಿ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಸುಮಾರು ಹತ್ತು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಅಮೋನಿಯಾ ಅನಿಲ ಸೋರಿಕೆ ಘಟನೆ ವರದಿಯಾದ ಬಳಿಕ ಮೂರು ಆ್ಯಂಬುಲೆನ್ಸ್‌ಗಳು ಮತ್ತು 3 ರಿಂದ 4 ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿವೆ. ಜನರಿಗೆ ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗಿದೆ ಎಂದು ಜಜ್ಜರ್‌ನ ಉಪ ಆಯುಕ್ತ ಜಗ್ ನಿವಾಸ್ ಹೇಳಿದ್ದಾರೆ.

ಇದನ್ನೂ ಓದಿ:ಪಂಜಾಬ್​​ನಲ್ಲಿ ಬಸ್‌ಗಳಿಗೆ ಬೆಂಕಿ.. ಓರ್ವ ಸಜೀವ ದಹನ

ABOUT THE AUTHOR

...view details